ಬಿಗ್ಬಾಸ್ ಸಂಗೀತಾಗೆ ಸಿಕ್ತು ಕ್ರಷ್ ಆಫ್ ಕರ್ನಾಟಕ ಬಿರುದು. ಕರಿಮಣಿ ಮಾಲಿಕ ಯಾರು ಎಂಬ ಪ್ರಶ್ನೆ ಕೇಳ್ತಿದ್ದಂತೆಯೇ ಸಂಗೀತಾ ಹೇಳಿದ್ದೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್ಬಾಸ್ನ ಕೆಲವು ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ನ ವಿನಯ್, ಕಾರ್ತಿಕ್, ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಇದೇ ವೇದಿಕೆಯ ಮೇಲೆ ಪರ್ಫಾಮ್ ಮಾಡಿದ್ದಾರೆ. ಬಿಗ್ಬಾಸ್ ಪ್ರೇಮಿಗಳಿಗೆ ತಿಳಿದಿರುವಂತೆ ಕಾರ್ತಿಕ್, ಬಿಗ್ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರೆ, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅವರು ರನ್ನರ್ಸ್ ಅಪ್ ಆಗಿದ್ದಾರೆ. ಬಿಗ್ಬಾಸ್ ಸೀಸನ್ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್ ಹೊರಕ್ಕೆ ಬರಲಿಲ್ಲ. ಬಿಗ್ಬಾಸ್ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಅದರಲ್ಲಿಯೂ ಬಿಗ್ಬಾಸ್ ವಿನ್ನರ್ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ. ಅದೇ ರೀತಿ ಹೊಸಪೇಟೆಯಲ್ಲಿಯೂ ಬಿಗ್ಬಾಸ್ನ ದೊಡ್ಡ ಅಭಿಮಾನಿ ಬಳಗವೇ ಇದೆ.
ಈ ಸಮಯದಲ್ಲಿ ಆ್ಯಂಕರ್ ನಿರಂಜನ್ ದೇಶಪಾಂಡೆಯವರು, ಸಂಗೀತಾ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಜನರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ. ಸಂಗೀತಾ ಅವ್ರು ಸ್ಟ್ರೇಟ್ ಫಾರ್ವರ್ಡ್ ಆಗಿ ರೆಬೆಲ್ ಆಗಿ ಡಿಸಿಷನ್ ತಗೊಂಡ್ರು ಎಂದಾಗ ಎಲ್ಲರೂ ಎಸ್ ಎಂದು ಹೇಳಿದರು. ಸಂಗೀತಾ ಅವರಿಗೆ ಕೋಪ ಜಾಸ್ತಿ ಎಂದಾಗಲೂ ಹೌದು ಹೌದು ಎಂದರು ಜನ. ಅದಕ್ಕೆ ಸಂಗೀತಾ, ನನಗೆ ಕೋಪ ಬರಿಸುವವರು ಇದ್ರೆ, ಕೋಪ ಜಾಸ್ತಿನೇ ಬರುತ್ತದೆ, ಇದರಲ್ಲಿ ತಪ್ಪೇನು ಎಂದು ಕೇಳಿದರು.
ಹೆಂಡ್ತಿಯನ್ನು ಯಾಕೆ ಅಷ್ಟು ಲವ್ ಮಾಡ್ತೀರಿ ಅಂತ ಯುವತಿ ಕೇಳಿದಾಗ ಹೀಗೆ ಹೇಳೋದಾ ಬಿಗ್ಬಾಸ್ ವಿನಯ್?
ಇದೇ ವೇಳೆ ಸಂಗೀತಾ ಅವರಿಗೆ ಕ್ರಷ್ ಆಫ್ ಕರ್ನಾಟಕ ಎನ್ನುವ ಬಿರುದು ಕೂಡ ಸಿಕ್ಕಿತು. ಇದಕ್ಕೆ ಕಾರಣ ಏನೆಂದ್ರೆ, ನಿರಂಜನ್ ಅವರು, ಅಸಮರ್ಥರಾಗಿ ಆರೇಂಜ್ ಬಟ್ಟೆ ಹಾಕಿಕೊಂಡು ಒಳಗೆ ಹೋದ ಸಂಗೀತಾ ಮೇಲೆ ಕರ್ನಾಟಕಕ್ಕೆ ಕ್ರಷ್ ಇದೆ ಎಂದಾಗಿ ಅಲ್ಲಿ ನೆರೆದಿದ್ದ ಬಹುತೇಕ ಮಂದಿ ಎಸ್ ಎಸ್ ಎಂದರು. ಆಗ ನಿರಂಜನ್ ಅವರು ಸಂಗೀತಾ ಕರ್ನಾಟಕದ ಕ್ರಷ್ ಎಂದಾಗ ಎಲ್ಲರೂ ಹೌದು ಹೌದು ಎಂದರು. ಆಗ ಸಂಗೀತಾ ಅವರು, ನನಗೂ ಇದರ ಅನುಭವವಾಯಿತು. ಎರಡನೆಯ ವಾರದಲ್ಲಿಯೇ ಜನರು ನನ್ನ ಮೇಲೆ ತೋರಿದ ಪ್ರೀತಿ ನೋಡಿ ಖುಷಿಯಾಯಿತು ಎಂದರು.
ನಂತರ ನಿರಂಜನ್ ಅವರು, ಬಿಗ್ಬಾಸ್ ಮನೆಗೆ ಬಂದಿದ್ದ ಜ್ಯೋತಿಷಿ ನಿಮ್ಮ ಮದ್ವೆ ಅತಿ ಶೀಘ್ರದಲ್ಲಿ ಆಗುತ್ತದೆ ಎಂದರು. ಹಾಗಿದ್ದರೆ ಕರಿಮಣಿ ಮಾಲಿಕ ಎನ್ನುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಜನರೆಲ್ಲರೂ ಎದುರಿಗೆ ಕುಳಿತ ಕಾರ್ತಿಕ್ರತ್ತ ಕೈ ಮಾಡಿ ತೋರಿಸಿದರು. ಆಗ ಸಂಗೀತ ತುಸು ಕೋಪಗೊಂಡು, ನಾನು ಎಷ್ಟು ಚೆನ್ನಾಗಿದ್ದೀನಿ, ಖುಷಿಖುಷಿಯಾಗಿದ್ದೀನಿ, ನಿಮಗ್ಯಾರಿಗೂ ಇದನ್ನು ನೋಡೋಕೆ ಆಗಲ್ವಾ ಎಂದು ಕೇಳಿದರು. ಬಳಿಕ ಅಲ್ಲಿಗೆ ಸುಮ್ಮನಾಗದ ನಿರಂಜನ್ ಅವರು, ಸಂಗೀತಾ ಮದ್ವೆಯಾಗುವ ಹುಡುಗ ಇಲ್ಲಿಯೇ ಇದ್ದಾನೆ ಎಂದಾಗಲೂ ಎಲ್ಲರೂ ಹೌದು ಹೌದು ಎಂದರು. ಅಷ್ಟಕ್ಕೂ ಬಿಗ್ಬಾಸ್ ಮನೆಯಲ್ಲಿ ಸಂಗೀತಾ ಮತ್ತು ಕಾರ್ತಿಕ್ ನಡುವೆ ಕೆಲ ವಾರ ಗಾಢ ಪ್ರೀತಿ ಬೆಳೆದಿತ್ತು. ನಂತರ ಇವರಿಬ್ಬರೂ ಜಗಳ ಶುರು ಮಾಡಿಕೊಂಡರು. ಈ ಜಗಳ ಬೆಳೆದು ದೊಡ್ಡದಾಗುತ್ತಾ ಇಬ್ಬರೂ ಹಾವು-ಮುಂಗುಸಿ ರೀತಿ ವರ್ತಿಸಿದರು. ಆದರೆ ಹೊರ ಬಂದ ಮೇಲೂ ಇವರ ಮದ್ವೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಕಾರ್ಯಕ್ರಮವೊಂದರಲ್ಲಿ ಖುದ್ದು ಕಾರ್ತಿಕ್ ತಾಯಿ ಕೂಡ ಇದೇ ವೇದಿಕೆಯಲ್ಲಿಯೇ ಕಾರ್ತಿಕ್ ಅವರನ್ನು ಮದ್ವೆಯಾಗುವ ಹುಡುಗಿ ಇದ್ದಾಳೆ ಎಂದೂ ಹೇಳಿದ್ದರು. ಇದೀಗ ಮತ್ತದೇ ಪ್ರಶ್ನೆ ಎದುರಾಗಿದೆ.