ಸಖತ್ ಬೋಲ್ಡ್ ಗೆಟಪ್ ಮೂಲಕ ಪಡ್ಡೆಗಳ ನಿದ್ದೆ ಕದೀತಿರೋ ಜ್ಯೋತಿ ರೈ ಇದೀಗ ಬೆಳ್ಳುಳ್ಳಿ ಕಬಾಬ್... ಅಲ್ಲಲ್ಲ, ಬೆಳ್ಳುಳ್ಳಿಯ ಉಪಯೋಗದ ಕುರಿತು ಟಿಪ್ಸ್ ಕೊಟ್ಟಿದ್ದಾರೆ ನೋಡಿ..
ವರ್ಷದ ಕೆಳಗೆ ಜ್ಯೋತಿ ರೈ ಅಂದರೆ ಸೀರಿಯಲ್ ವೀಕ್ಷಕರು ಮಾತ್ರ 'ವ್ಹಾವ್ ಎಂಥಾ ಅಭಿನೇತ್ರಿ' ಅಂತ ಕಣ್ಣರಳಿಸುತ್ತಿದ್ದರು. ಆದರೆ ಈಗ ಜ್ಯೋತಿ ರೈ ಅಂದ ಕೂಡಲೇ ಪಡ್ಡೆಗಳು ಕೈ ಎತ್ತಿ 'ಜೈ' ಅಂತಿದ್ದಾರೆ. ಕೆಲವೇ ದಿನಗಳಲ್ಲಿ ಇಂಥದ್ದೊಂದು ಟ್ರಾನ್ಸ್‌ಫಾರ್ಮೇಶನ್ ಮೂಲಕ ಗಮನ ಸೆಳೆದವರು ಮಂಗಳೂರು ಮೂಲದ ನಟಿ ಜ್ಯೋತಿ ರೈ. 'ಹೊಂಗನಸು' ಸೀರಿಯಲ್‌ನಲ್ಲಿ ರಿಷಿ ಸಾರ್ ಅಮ್ಮನ ಪಾತ್ರದಲ್ಲಿ ಗೌರವಾನ್ವಿತ ಮಹಿಳೆಯಾಗಿ ಕಾಣಿಸಿಕೊಂಡಿದ್ದ ಜ್ಯೋತಿ ಏಕ್‌ದಂ ಹೀಗೊಂದು ಹಾಟ್ ಅವತಾರ್‌ಗೆ ಬದಲಾದಾಗ ಇದನ್ನೆಲ್ಲ ಹೇಗೆ ಸ್ವೀಕರಿಸಬೇಕು ಅಂತ ತಿಳಿಯದೇ ತಬ್ಬಿಬ್ಬಾಗಿದ್ದು ನೆಟ್ಟಿಗರು. ಶುರು ಶುರುವಲ್ಲಿ ನಮ್ಗೆ ಜಗತಿ ಮೇಡಂ ಅವರೇ ಬೇಕು ಅನ್ನುತ್ತಿದ್ದವರು ಕ್ರಮೇಣ ಈಕೆಯ ಹೊಸ ಲುಕ್‌ಗೆ ಅಡ್ಜೆಸ್ಟ್ ಆಗ್ತಾ ಬಂದರು. ಈಗ ಜ್ಯೋತಿ ರೈ ಜ್ಯೋತಿ ಪೂರ್ವರಾಜ್ ಆಗಿದ್ದಾರೆ. ತೆಲುಗಿನ ನಿರ್ದೇಶಕನನ್ನು ವರಿಸಿದ್ದನ್ನು ಅವರೇ ಇತ್ತೀಚೆಗೆ ಕನ್ಫರ್ಮ್ ಮಾಡಿದ್ದಾರೆ. ಅಷ್ಟೇ ಅಲ್ಲ ಜ್ಯೋತಿ ರೈ ಅಂತಿದ್ದ ತನ್ನ ಇನೀಷಿಯಲ್ ಅನ್ನು ಜ್ಯೋತಿ ಪೂರ್ವರಾಜ್ ಅಂತ ಬದಲಿಸಿಕೊಳ್ಳೋ ಮೂಲಕ ತಮ್ಮಿಬ್ಬರ ವಿವಾಹವನ್ನು ಅಧಿಕೃತಗೊಳಿಸಿದ್ದಾರೆ.
undefined
A post shared by Jyothi Poorvaj (Jayashree Rai K K) (@jyothipoorvaj)
ಈಗ ವಿಷಯ ಅದನ್ನು ಎಂದಿನಂತೆ ಸಖತ್ ಹಾಟ್‌ಲುಕ್‌ನಲ್ಲಿ ಫೋಟೋ ಶೂಟ್ ಮಾಡಿ ಅದನ್ನು ಇನ್‌ಸ್ಟಾದಲ್ಲಿ ಛಾಪಿಸಿದ ಜ್ಯೋತಿಗೆ ಇದ್ದಕ್ಕಿದ್ದ ಹಾಗೆ ತನ್ನ ಫ್ಯಾನ್ಸ್‌ಗೆ ಏನಾದರೂ ಟಿಪ್ಸ್ ಕೊಡಬೇಕು ಅಂತ ಅನಿಸಿದೆ. ಆಗ ಅವರ ಕಣ್ಣಿಗೆ ಬಿದ್ದಿದ್ದು ಬೆಳ್ಳುಳ್ಳಿ. ಈಗ ಕರ್ನಾಟಕದಲ್ಲಿ ಬಿಡಿ, ಹೊರ ರಾಜ್ಯದಲ್ಲೂ ಕಬಾಬ್ ಚಂದ್ರು ಅವರಿಂದಾಗಿ 'ಬೆಳ್ಳುಳ್ಳಿ' ಅಂದ್ರೆ 'ಬೆಳ್ಳುಳ್ಳಿ ಕಬಾಬ್' ಅನ್ನಂಗಾಗಿದೆ. ಅಂಥದ್ರಲ್ಲಿ ನಮ್ ಜ್ಯೋತಿ ಮೇಡಂಗೂ ಬೆಳ್ಳುಳ್ಳಿಯೇ ಪ್ರಿಯವಾಗಿ ಕಂಡದ್ದು ಕಾಕತಾಳೀಯ ಇರಬಹುದೇನೋ. ಇರಲಿ, ಅವರು ಬೆಳ್ಳುಳ್ಳಿ ಬಗ್ಗೆ ಕೊಟ್ಟಿರೋ ಟಿಪ್ಸ್ ತೆಗೆದು ಹಾಕೋ ಹಾಗೇನೂ ಇಲ್ಲ ಬಿಡಿ. ಅದನ್ನು ನೋಡಿದ್ರೆ ನಾಳೆಯಿಂದ ನೀವೂ ಜ್ಯೋತಿ ಅವ್ರ ಬೆಳ್ಳುಳ್ಳಿ ಟಿಪ್ಸ್ ಫಾಲೋ ಮಾಡಬಹುದೇನೋ. ಹಾಗಂತ ಬೆಳ್ಳುಳ್ಳಿ ಥರ ಇರೋ ಜ್ಯೋತಿ ಅವ್ರ ಥರ ಆಗ್ತೀವಿ ಅಂತೇನೂ ಕನಸು ಕಾಣ್ಬೇಡಿ ಮತ್ತೆ. ಅವರು ಹೀಗಾಗಿರೋದರ ಹಿಂದೆ ಸಾಕಷ್ಟು ವರ್ಕೌಟ್, ಡಯೆಟ್‌ಗಳೆಲ್ಲ ಇವೆ. ಆದರೆ ಆರೋಗ್ಯದಿಂದ ಅಂತೂ ಇರಬಹುದೇನೋ.
'ಇಷ್ಟೊಂದು ಕ್ಯೂಟ್ ಆಗಿರೋದು ಕ್ರೈಂ ಅಲ್ವಾ?' ಕಪ್ಪು ಸೀರೆಯಲ್ಲಿ ಕೈವಾ ನಟಿ ಮೇಘಾ ಶೆಟ್ಟಿ
'ಬೆಳಗ್ಗೆ ಎದ್ದ ಕೂಡಲೇ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರುತ್ತೆ. ಲಿವರ್ ಕಾರ್ಯಕ್ಷಮತೆಯನ್ನು ಬೆಳ್ಳುಳ್ಳಿ ಹೆಚ್ಚಿಸುತ್ತೆ. ಜೀರ್ಣಕ್ರಿಯೆ ಚೆನ್ನಾಗಿರುತ್ತೆ' ಅನ್ನೋ ಬೆಳ್ಳುಳ್ಳಿಯ ವಿಶೇಷ ಗುಣದ ಬಗ್ಗೆ ಜ್ಯೋತಿ ರೈ ಹೇಳಿದ್ದಾರೆ. ಜ್ಯೋತಿ ಅವ್ರು ಇದನ್ನು ಸ್ಟೇಟಸ್‌ನಲ್ಲಿ ಹಾಕಿರೋ ಕಾರಣ ಕಾಮೆಂಟ್ಸ್ ಹಾಕೋದಕ್ಕೆ ಅವಕಾಶ ಇಲ್ಲ. ಇಲ್ಲಾಂದ್ರೆ 'ಈ ಬೆಳ್ಳುಳ್ಳಿ ತಿಂದ್ರೆ ನಿಮ್ಮಂಗಾಗಬಹುದಾ?' ಅಂತಲೋ, 'ಬೆಳ್ಳುಳ್ಳಿ ತಿನ್ನೋದ್ರಿಂದ ಮತ್ತೇನೂ ಆಗಲ್ವಾ' ಅಂತನೋ ಒಂದಿಷ್ಟು ಪ್ರಶ್ನೆಗಳು ಇದ್ದೇ ಇರ್ತಿದ್ವೇನೋ.
ಅಂದಹಾಗೆ ಜ್ಯೋತಿ ರೈ ಇನ್ನೊಂದು ಹೆಸರು ಜಯಶ್ರೀ ರೈ. ಸದ್ಯ ತೆಲುಗಿನಲ್ಲಿ ಬ್ಯುಸಿಯಾಗಿರುವ ನಟಿ, ಕನ್ನಡದಲ್ಲೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಜೋಗಳ' ಧಾರಾವಾಹಿ ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಇದರೊಂದಿಗೆ 'ಕನ್ಯಾದಾನ', 'ಗೆಜ್ಜೆಪೂಜೆ', 'ಅನುರಾಗ ಸಂಗಮ', 'ಲವಲವಿಕೆ', 'ಪ್ರೇರಣಾ', 'ಕಿನ್ನರಿ', 'ಮೂರುಗಂಟು', 'ಕಸ್ತೂರಿ ನಿವಾಸ'ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ವರ್ಣಪಟಲ' ಅನ್ನೋ ಸಿನಿಮಾದಲ್ಲಿ ಕಾಲೇಜ್ ಹುಡುಗಿ ಪಾತ್ರದಿಂದ ಮಧ್ಯವಯಸ್ಕ ಹುಡುಗಿ ಪಾತ್ರದವರೆಗೆ ನಟಿಸಿ ತನ್ನ ಟ್ಯಾಲೆಂಟ್ ಎಂಥಾದ್ದು ಅನ್ನೋದನ್ನು ತೋರಿಸಿಕೊಟ್ಟಿದ್ದರು. ತೆಲುಗಿನ 'ಗುಪ್ಪೆಡಂಥಾ ಮನಸು' ಇವರು ನಟಿಸಿದ ಕೊನೇ ಸೀರಿಯಲ್. ಸದ್ಯ ವೆಬ್‌ಸೀರಿಸ್‌ಗಳಲ್ಲಿ ಇವ್ರು ಬ್ಯುಸಿ. ಟೈಮ್ ಸಿಕ್ಕಾಗ ಹಾಟ್ ಟೈಮ್‌ಪಾಸ್ ಫೋಟೋವನ್ನು ಪೋಸ್ಟ್ ಮಾಡೋದು ಇವರ ಸದ್ಯದ ಹಾಬಿ ಅನ್ನಬಹುದೇನೋ.
ಪಿಂಕ್ ಸ್ಯಾರಿಯಲ್ಲಿ ಮಿಂಚಿದ ನಮ್ರತಾ ಗೌಡ, ಸ್ನೇಹಿತ್ ಜೊತೆ ವೀಡಿಯೋ ಮಾಡಿ ಎಂದ ಫ್ಯಾನ್ಸ್