ಶೋ ಒಪ್ಪಿಕೊಂಡು ಮನೋರಂಜನೆ ನೀಡುತ್ತೀವಿ ಅಂದ್ರೆ ಇಲ್ಲಸಲ್ಲದ ಮಾತನಾಡಬಾರದು; ನಮ್ರತಾ ಗೌಡ ಗರಂ ಪೋಸ್ಟ್‌ ವೈರಲ್!

By Vaishnavi Chandrashekar  |  First Published Oct 25, 2024, 5:37 PM IST

 ನಮ್ರತಾ ಹೆಸರು ಬಳಸಿಕೊಂಡು ಅಪಪ್ರಚಾರ ಮಾಡುತ್ತಿರುವವರಿಗೆ ಉತ್ತರಿಸಿದ ಸುಂದರಿ. ಇಲ್ಲಸಲ್ಲದನ್ನು ಮಾತನಾಡುತ್ತಿರುವವರಿಗೆ ಇಲ್ಲಿದೆ ಖಡಕ್ ಉತ್ತರ.....


ಕನ್ನಡ ಕಿರುತೆರೆಯ ನಟಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ನಮ್ರತಾ ಗೌಡ ಬಗ್ಗೆ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಪೋಸ್ಟ್ ಹಾಗೂ ಕಾಮೆಂಟ್‌ಗಳು ಹೆಚ್ಚಾಗುತ್ತಿದೆ. ಇದರಿಂದ ಬೇಸರಗೊಂಡ ನಟಿ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್‌ ಬರೆದುಕೊಂಡಿದ್ದಾರೆ.

ನಮ್ರತಾ ಗೌಡ ಪೋಸ್ಟ್:

Latest Videos

undefined

'ನಾನು ಸದಾ ನಂಬಿ ಪಾಲಿಸುವುದು ಒಂದೇ, ನೆಗೆಟಿವ್ ಜನರಿಗೆ ನಾನು ಪ್ರಿತಿಕ್ರಿಯೆ ನೀಡುವುದು ಕಡಿಮೆ ಮಾಡಿದರೆ ನೆಮ್ಮದಿಯಿಂದ ಬದುಕಬಹುದು. ನಿಮ್ಮ ನಡುವಳಿಕೆ ಮತ್ತು ಆಲೋಚನೆಗಳು ಇನ್ನಿತ್ತರರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಅಥವಾ ಅವರಿಗೆ ತೊಂದರೆ ಆಗುವುದು ಗ್ಯಾರೆಂಟಿ ಎಂದು ನಾನು ನಂಬಿದ್ದೀನಿ. ಟ್ರೋಲಿಂಗ್ ಮತ್ತು ಅರ್ಥವಿಲ್ಲದ ವಿಚಾರಕ್ಕೆ ನನ್ನ ಬಗ್ಗೆ ಮಾತನಾಡುವುದನ್ನು ನಾನು ಗಮನಿಸಿಯೂ ಇಷ್ಟು ದಿನ ಸುಮ್ಮನಿದೆ. ಯಾರೋ ಗೊತ್ತಿಲ್ಲದ ವ್ಯಕ್ತಿಗಳು, ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಒಂದು ರಿಯಾಲಿಟಿ ಶೋಯಿಂದ ಬಂದ ಹೆಸರನ್ನು ಇಟ್ಟುಕೊಂಡು ಈಗಲೂ ನನ್ನನ್ನು ಮತ್ತೊಬ್ಬರ ಜೊತೆ ಹೊಲಿಸುತ್ತಿದ್ದಾರೆ, ಈ ವ್ಯಕ್ತಿಗಳಿಗೆ ನನ್ನ ಜೀವನ ಮತ್ತು ನನ್ನ ಜರ್ನಿ ಬಗ್ಗೆ ಏನೂ ಗೊತ್ತಿಲ್ಲ. ನೀವು ಗಮನ ಸೆಳೆಯುವ ಸಲುವಾಗ ಮತ್ತೊಬ್ಬರ ಹೆಸರು ಬಳಸಿಕೊಳ್ಳುವುದು ನಿಮ್ಮ ಸಣ್ಣತನವನ್ನು ತೋರಿಸುತ್ತದೆ. ಏನನ್ನು ತೋರಿಸಲಾಗುತ್ತದೆ ಅದನ್ನು ಜನರು ನಂಬಿ ಮೋಸ ಹೋಗುತ್ತಿದ್ದಾರೆ.ಈ ರೀತಿ ಮಾಡುತ್ತಿರುವ ಜಡ್ಜ್‌ಮೆಂಟ್‌ಗಳಿಂದ ಕಷ್ಟ ಪಟ್ಟಿ ಕಟ್ಟಿರುವ ಸಾಮ್ರಾಜ್ಯಾವನ್ನು ಸುಲಭವಾಗಿ ಕೆಡುವಿ ಅವರ ಜೀವನವನ್ನು ಹಾಳು ಮಾಡುತ್ತಿದ್ದೀರಿ. ಬೇಸರದ ವಿಚಾರ ಏನೆಂದರೆ ಮೇಡಿಯಾ ಜರ್ನಲಿಸ್ಟ್‌ಗಳು ಸಹ ನನ್ನ ಹೆಸರನ್ನು ಬಳಸಿಕೊಂಡು ಲೇಬಲಿಂಗ್ ಮಾಡಿಕೊಂಡು ಜನರ ಆಲೋಚನೆಯನ್ನು ಬದಲಾಯಿಸುತ್ತಿದ್ದಾರೆ. ಈ ರೀತಿ ಮಾತುಗಳು ಮತ್ತೊಬ್ಬ ಮಹಿಳೆಯಿಂದ ಬರುತ್ತಿದೆ?

ಫೋನ್‌ ಇಲ್ಲ ಊಟ ಇಲ್ಲ ಹಣ ಇಲ್ಲ ಮಗ ತುಂಬಾ ಪರದಾಡಿದ್ದಾನೆ: ಗಿಲ್ಲಿ ನಟನ ಪರಿಸ್ಥಿತಿ ನೆನೆದು

ನಾವು ನಿಮ್ಮನ್ನು ಮನೋರಂಜಿಸಲು ಒಂದು ರಿಯಾಲಿಟಿ ಶೋಗೆ ಸಹಿ ಮಾಡುತ್ತೀವಿ ನಿಮ್ಮ ಮುಂದೆ ಒಂದು ಗಂಟೆಗಳ ಕಾಲ ನಿಲ್ಲುತ್ತೀವಿ ಅಂದ್ರೆ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಇಲ್ಲಸಲ್ಲದನ್ನು ಮಾತನಾಡುವ ಹಕ್ಕಿಲ್ಲ. ಹೀಗೆ ಮಾಡುವ ಬದಲು ಪಾಸಿಟಿವ್ ಮತ್ತು ಒಳ್ಳೆಯ ವಿಚಾರಗಳನ್ನು ಹಂಚಿ ಸುಮ್ಮನೆ ನಮ್ಮ ಹೆಸರು ಬಳಸಿಕೊಂಡು ನಿಮ್ಮ ಕಂಟೆಂಟ್ ಮಾಡಿಕೊಳ್ಳಬೇಡಿ. ಜೀವ ಮತ್ತು ಜೀವನ ತುಂಬಾ ದೊಡ್ಡದು ಹೀಗಾಗಿ ನೀವು ಕೂಡ ದೊಡ್ಡವರಂತೆ ಇರಲು ಪ್ರಯತ್ನ ಮಾಡಿ ಸುಮ್ಮನೆ ಕೆಟ್ಟದನ್ನು ಜನರ ತಲೆಯಲ್ಲಿ ತುಂಬುವ ಬದಲು. ಒಟ್ಟಿಗೆ ಬೆಳೆಯುವುದನ್ನು ನೋಡೋಣ ಮತ್ತೊಬ್ಬರನ್ನು ನಾಶ ಮಾಡುವುದಲ್ಲ. ಈ ಜರ್ನಿಯಲ್ಲಿ ನೋವು ತಿಂದಿರುವ ವ್ಯಕ್ತಿಗಳ ಜೊತೆ ನಿಲ್ಲುತ್ತೀನಿ. 

 

click me!