BBK10: ಬಿಗ್‌ಬಾಸ್ ಮನೆಯಲ್ಲಿ ಮಾವನಾದ ಕಾರ್ತಿಕ್, ಬೆಳ್ಳಿ ಉಡುದಾರ ಕೊಟ್ಟ ತನಿಶಾ

Published : Dec 12, 2023, 03:24 PM IST
BBK10: ಬಿಗ್‌ಬಾಸ್ ಮನೆಯಲ್ಲಿ ಮಾವನಾದ ಕಾರ್ತಿಕ್, ಬೆಳ್ಳಿ ಉಡುದಾರ ಕೊಟ್ಟ ತನಿಶಾ

ಸಾರಾಂಶ

ಬಿಗ್‌ಬಾಸ್ ಸ್ಪರ್ಧಿ ಕಾರ್ತಿಕ್ ಅವರು ಬಿಗ್‌ಬಾಸ್ ಮನೆಯಲ್ಲಿರುವಾಗಲೇ ಮಾವನಾಗಿದ್ದಾರೆ. ಇದೇ ಖುಷಿಗೆ ತನಿಷಾ ಅವರು ಬೆಳ್ಳಿಯ ಉಡುದಾರವನ್ನು (Silver chain) ಗಿಫ್ಟ್ ಆಗಿ ನೀಡದ್ದಾರೆ.

ಬೆಂಗಳೂರು (ಡಿ.12): ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋನಲ್ಲಿ ಎಲ್ಲರೂ ತಮ್ಮ ಮನದಾಳವನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದ ಬಿಗ್‌ಬಾಸ್‌, ಕಾರ್ತಿಕ್ ಅವರಿಗೆ ನಿಮ್ಮ ತಂಗಿಗೆ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿದೆ ಎಂದು ಹೇಳಿದ್ದಾರೆ. ಇದರಿಂದ ಸಂತಸದ ಕಣ್ಣೀರು ಹಾಕುತ್ತಾ ಕನ್ಫೆಷನ್ ಕೋಣೆಯಿಂದ ಹೊರಬಂದ ಕಾರ್ತಿಕ್ ನಾನು ಮಾವನಾಗಿದ್ದೇನೆ ಎಂದು ಸಂತಸವನ್ನು ಹಂಚಿಕೊಂಡಿದ್ದಾನೆ. ಆಗ, ತನಿಷಾ ಓಡಿ ಹೋಗಿ ತನ್ನ ಲಗೇಜ್‌ನಲ್ಲಿದ್ದ ಬೆಳ್ಳಿಯ ಉಡುದಾರವನ್ನು ಕೊಟ್ಟು ಇದು ನಿನ್ನ ಅಳಿಯನಿಗೆ ಮೊದಲ ಗಿಫ್ಟ್‌ ಎಂದು ಕೊಟ್ಟಿದ್ದಾರೆ.

ಹೌದು, ಕಾರ್ತಿಕ್ ಕನ್ನಡ ಬಿಗ್‌ಬಾಸ್‌ನಲ್ಲಿ ಗೆಲ್ಲುವ ಕುದುರೆಗಳಲ್ಲಿ ಒಬ್ಬರಾಗಿದ್ದಾರೆ, ಅತ್ಯಂತ ಸ್ಟ್ರಾಂಗ್ ಆಗಿರುವ ಕಂಟೆಸ್ಟ್‌ಗಳಲ್ಲಿ ಒಬ್ಬರಾಗಿರುವ ಕಾರ್ತಿಕ್‌ಗೆ ಮನೆಗೆ ಹೋದ ದಿನದಿಂದಲೂ ಗರ್ಭಿಣಿ ತಂಗಿಯ ಬಗ್ಗೆ ಚಿಂತೆ ಮಾಡುತ್ತಿದ್ದನು. ತಂಗಿಗೆ ಹೆರಿಗೆ ಆಗಿದೆಯೋ ಇಲ್ಲವೋ, ಅವಳ ಆರೋಗ್ಯ ಹೇಗಿದೆ? ಯಾವ ಪಾಪು ಆಗಿದೆ ಎನ್ನುವುದರ ಚಿಂತೆಯಲ್ಲಿಯೇ ಕೊರಗುತ್ತಿದ್ದನು. ಆದರೆ, ಇದೇ ವೇಳೆಗೆ ಬಿಗ್‌ಬಾಸ್‌ ಕಂಟೆಸ್ಟೆಂಟ್‌ಗಳಿಗೆ ತಮ್ಮ ಮನದಾಳವನ್ನು ಹೇಳಿಕೊಳ್ಳಲು ಅವಕಾಶ ನೀಡಿತ್ತು. ಈ ವೇಳೆ ಕನ್ಫೆಷನ್ ಕೋಣೆಗೆ ಹೋದ ಕಾರ್ತಿಕ್ ತನ್ನ ಆಟದ ಬಗ್ಗೆ ಹೇಳಿಕೊಂಡಿದ್ದಾನೆ. ಸಂಗೀತಾ ಹಾಗೂ ಡ್ರೋನ್ ಪ್ರತಾಪ್‌ ಅವರ ಕಣ್ಣಿಗೆ ಆಗಿರುವ ಹಾನಿಯ ಬಗ್ಗೆ ಕಣ್ಣೀರು ಸುರಿಸಿದ್ದಾರೆ.

ಕಾವ್‌ ಕಾವ್ ಕರಿತೈತಿ ಗೋವಾ.., ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಮತ್ತೊಂದು ಹಾಡು!

ನಂತರ, ಮನೆಯ ಬಗ್ಗೆ ಆಲೋಚನೆ ಮಾಡಿದ ಕಾರ್ತಿಕ್ ತನ್ನ ತಂಗಿಗೆ ವೈದ್ಯರು ಡಿ.7ಕ್ಕೆ ಹೆರಿಗೆ ದಿನಾಂಕವನ್ನು ನೀಡಿದ್ದರು. ಹೀಗಾಗಿ, ಅವರಿಗೆ ಹೆರಿಗೆ ಆಗಿದೆಯೋ ಇಲ್ಲವೋ ಒಂದು ಮಾಹಿತಿ ಕೊಡಿ ಬಿಗ್‌ಬಾಸ್ ಎಂದು ಮನವಿ ಮಾಡಿಕೊಂಡಿದ್ದಾನೆ. ಆಗ ಪ್ರತಿಕ್ರಿಯೆ ನೀಡಿದ ಬಿಗ್‌ಬಾಸ್ 'ಕಾರ್ತಿಕ್ ನಿಮ್ಮ ತಂಗಿಗೆ ಹೆರಿಗೆಯಾಗಿದೆ. ಬುಧವಾರ ನಿಮ್ಮ ತಂಗಿ ಗಂಡು ಮಗಿವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. ಆಗ, ಸಂತೋಷದ ಕಣ್ಣೀರು ಹಾಕುತ್ತಾ ಕಾರ್ತಿಕ್ ಕನ್ಫೆಷನ್ ರೂಮಿನಿಂದ ಹೊರಬಂದಿದ್ದಾರೆ.

ಕಾರ್ತಿಕ್ ಹೊರಬರುವುದನ್ನೇ ಕಾಯುತ್ತಿದ್ದ ತನಿಷಾ ಏನಾಯ್ತು ಎಂದು ಕೇಳಿದಾಗ ತನ್ನ ಖುಷಿಯನ್ನು ಮೊದಲು ಸಂಗೀತಾ ಮತ್ತು ತನಿಷಾ ಮುಂದೆ ಹಂಚಿಕೊಂಡಿದ್ದಾನೆ. ಮೊದಲು ತಾನು ಮಾವನಾಗಿದ್ದೇನೆ ಎಂದು ಹೇಳಿದ್ದಾನೆ. ಆಗ ಸರಿಯಾಗಿ ಅರ್ಥವಾಗದ ಹಿನ್ನೆಲೆಯಲ್ಲಿ ತನ್ನ ತಂಗಿಗೆ ಗಂಡು ಮಗುವಾಗಿದೆ, ನಾನು ಮಾವನಾಗಿದ್ದೇನೆ ಎಂದು ಸಂತಸದಿಂದ ಕುಣಿದಿದ್ದಾನೆ. ಇದಕ್ಕೆ ಧ್ವನಿಗೂಡಿಸಿದ ಸಂಗೀತಾ, ತನಿಶಾ, ಪ್ರತಾಪ್ ಅವರ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ. ಆಗ ಪ್ರತಾಪ್‌ ಕಾರ್ತಿಕ್‌ನ ಬೆನ್ನಿಗೆ ಗುದ್ದುತ್ತಾ ನೀನು ಮನೆಗೆ ಹೋದಾಗ ನಿಮ್ಮ ಅಳಿಯ ಹೀಗೇ ಒಡೆಯುತ್ತಾನೆ ಎಂದು ಹೇಳಿ ಸಂತಸ ಹಂಚಿಕೊಂಡಿದ್ದಾರೆ. 

ಇದೇ ವೇಳೆ ಬೆಡ್‌ರೂಮ್ ಕೋಣೆಗೆ ತೆರಳಿದ ತನಿಷಾ ತನ್ನ ಲಗೇಜ್ ಬ್ಯಾಗ್‌ನಿಂದ ಬೆಳ್ಳಿಯ ಉಡುದಾರವನ್ನು ತಂದಿದ್ದಾಳೆ. ಮಕ್ಕಳಿಗೆ ಮೊದಲ ಉಡುಗೊರೆಯಾಗಿ ಬೆಳ್ಳಿಯನ್ನು ನೀಡಿದರೆ ಬಾಂಧವ್ಯ ಬಹಳ ಗಟ್ಟಿಯಾಗಿರುತ್ತದೆ ಎಂದು ಹೇಳುತ್ತಾ, ಇದು ನಿನ್ನ ಅಳಿಯನಿಗೆ ನನ್ನಿಂದ ಕೊಡುತ್ತಿರುವ ಮೊದಲ ಗಿಫ್ಟ್ ಎಂದು ಕಾರ್ತಿಕ್‌ ಕೈಗೆ ಕೊಟ್ಟಿದ್ದಾಳೆ. ಇದರಿಂದ ಮತ್ತಷ್ಟು ಸಂತಸಗೊಂಡ ಕಾರ್ತಿಕ್ ಬಿಗ್‌ಬಾಸ್ ಕ್ಯಾಮೆರಾದ ಮುಂದೆ ತೋರಿಸುತ್ತಾ ಸಂಭ್ರಮವನ್ನು ಮನೆಯಲ್ಲಿದ್ದ ತಂಗಿಗೆ ಹಾಗೂ ಅಮ್ಮನಿಗೆ ತಿಳಿಸಿದ್ದಾರೆ.

BBK10: ನಾಮಿನೇಟ್ ಮಾಡುವ ಅಧಿಕಾರ ಕಳೆದುಕೊಂಡ ವಿನಯ್, ತನಿಷಾ ಅವಿ ಮತ್ತು ಪವಿ: ಇಲ್ಲಿದೆ ಅಸಲಿ ಕಾರಣ..

ತಂಗಿಯ ಮದುವೆ, ಸೀಮಂತ ಸಂಭ್ರಮ ಹಂಚಿಕೊಂಡಿದ್ದ ಕಾರ್ತಿಕ್: 2021ರ ಅಂತ್ಯದಲ್ಲಿ ಕಾರ್ತಿಕ್ ಅವರ ತಂಗಿ ತೇಜಸ್ವಿನಿ ಮದುವೆ ನಡೆದಿತ್ತು. ಕಾರ್ತಿಕ್ ಅವರು ತಂಗಿ ಮದುವೆಯ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಕೆಲ ದಿನಗಳ ಹಿಂದೆ ಕಾರ್ತಿಕ್ ತಂಗಿಯ ಸೀಮಂತ ನಡೆದಿರುವುದನ್ನೂ ಕಾರ್ತಿಕ್ ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದನು.ಈಗ ಕಾರ್ತಿಕ್ ಅವರ ತಂಗಿ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಬಿಗ್‌ಬಾಸ್ ನೀವು ಮಾವ ಆಗಿದ್ದಕ್ಕೆ ಶುಭಾಶಯಗಳು ಎಂದು ವೀಕ್ಷಕರು ಹಾರೈಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!