ರನ್‌ ರನ್‌... ಮೊದಲ ವಾರವೇ ಮನೆಯಿಂದ ಹೊರಬಂದ ಸುಂದರಿ

Published : Mar 07, 2021, 10:46 PM ISTUpdated : Mar 07, 2021, 11:28 PM IST
ರನ್‌ ರನ್‌... ಮೊದಲ ವಾರವೇ ಮನೆಯಿಂದ ಹೊರಬಂದ ಸುಂದರಿ

ಸಾರಾಂಶ

ಬಿಗ್  ಬಾಸ್ ಮನೆಯಿಂದ ಮೊದಲ ಎಲಿಮಿನೇಶನ್/ ಮನೆಯಿಂದ ಔಟ್ ಆದ ಟಿಕ್ ಟಾಕ್ ಧನುಶ್ರೀ/ ಕಳಪೆ ಹೆಸರನ್ನು ಪಡೆದುಕೊಂಡು ಜೈಲು ಸೇರಿದ್ದರು/  ಕಿಚ್ಚ ಸುದೀಪ್ ಮಾತುಕತೆ

ಬೆಂಗಳೂರು(ಮಾ. 07) ಬಿಗ್‌  ಬಾಸ್ ಮನೆಯಿಂದ ಮೊದಲ ವಾರದ ಎಲಿಮಿನೇಶನ್ ಆಗಿದೆ. ಹದಿನೇಳು ಜನರಲ್ಲಿ ಟಿಕ್ ಟಾಕ್ ಮೂಲಕ ಹೆಸರು ಮಾಡಿದ್ದ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ.

ಮನೆಗೆ ಮೊದಲನೆಯವರಾಗಿ ಧನುಶ್ರೀ ಪ್ರವೇಶ ಮಾಡಿದ್ದರು.  ಟಾಸ್ಕ್ ಗಳಲ್ಲಿ ಸರಿಯಾಗಿ ಪರಿಶ್ರಮ ತೋರದೆ ಮನೆಯವರಿಂದ ಕಳಪೆ  ಬಿರುದನ್ನು ಪಡೆದುಕೊಂಡು ಜೈಲು ಸೇರಿದ್ದರು.  ಬಿಗ್ ಬಾಸ್ ಧನುಶ್ರೀಗೆ ತರಕಾರಿ ಕತ್ತರಿಸುವ ಶಿಕ್ಷೆಯನ್ನು ನೀಡಿದ್ದರು.  ಮನೆಯಿಂದ ಹೊರಬರುವಾಗ ಬಿಗ್ ಬಾಸ್ ನೀಡುವ ವಿಶೇಷ ಅಧಿಕಾರ ಬಳಸಿಕೊಂಡ ಧನುಶ್ರೀ ಈ ವಾರದ ನಾಮಿನೇಶನ್ ನಿಂದ ರಘು ಅವರನ್ನು ಸೇಫ್ ಮಾಡಿದರು. 

ಸ್ನಾನಕ್ಕೂ ಧನುಶ್ರೀ ಮೇಕಪ್ ಮಾಡಿಕೊಂಡೇ ಹೋಗ್ತಾರ?

ಬಿಗ್ ಬಾಸ್ ಮನೆ ಯಲ್ಲಿ ಭಾನುವಾರ ಕಿಚ್ಚ ಸುದೀಪ್ ಟೀ ಮಾಡುವ  ಕತೆಯನ್ನು ಎತ್ತಿಕೊಂಡರು. ಪ್ರಶಾಂತ್ ಸಂಬರಗಿಯವರಿಂದ ಆರಂಭವಾದ ಟೀ ಕತೆ ಚಂದ್ರಕಲಾ ಅವರವರೆಗೆ ತಲುಪಿತು. ಟೀ ಮಾಡುವುದು ಹೇಗೆ ಎಂದು ಮೇಲಿಂದ ಮೇಲೆ ಪ್ರಶ್ನೆ ಕೇಳಿ ವಿಭಿನ್ನ  ಉತ್ತರ ಪಡೆದುಕೊಂಡರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್