'DKD' ಸೆಟ್ಟಲ್ಲಿ ಪವರ್‌; 'ಅಪ್ಪು' ರೀಕ್ರಿಯೇಟ್‌ ಮಾಡಿದ ಪುನೀತ್, ರಕ್ಷಿತಾ!

Suvarna News   | Asianet News
Published : Mar 06, 2021, 04:29 PM IST
'DKD' ಸೆಟ್ಟಲ್ಲಿ ಪವರ್‌; 'ಅಪ್ಪು' ರೀಕ್ರಿಯೇಟ್‌ ಮಾಡಿದ ಪುನೀತ್, ರಕ್ಷಿತಾ!

ಸಾರಾಂಶ

ಹಲವು ವರ್ಷಗಳ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡ ಪುನೀತ್‌ ರಾಜ್‌ಕುಮಾರ್. ರಕ್ಷಿತಾ ಜೊತೆ ಡ್ಯಾನ್ಸ್ ಮಾಡಲು ಹೊಸ ಡಿಮ್ಯಾಂಡ್....

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರತಿ ವೀಕೆಂಡ್‌ನಲ್ಲೂ ವಿಭಿನ್ನ ಕಾನ್ಸೆಪ್ಟ್‌ನಿಂದ ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದಾರೆ. ಈ ವಾರದ ವಿಶೇಷತೆ ಕಾಯುತ್ತಿದ್ದ ವೀಕ್ಷಕರಿಗೆ ಪವರ್ ಪ್ಯಾಕ್ ಸರ್ಪ್ರೈಸ್‌ ಕಾದಿದೆ. ಅದುವೇ ಪುನೀತ್ ರಾಜ್‌ಕುಮಾರ್ ಎಂಟ್ರಿ.

'ಜೊತೆ ಜೊತೆಯಲಿ' ರಾಜನಂದಿನಿ ಪಾತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಹಾಟ್‌ ನಟಿ?

ಈಗಾಗಲೇ ಡಿಕೆಡಿ ವೀಕೆಂಡ್ ಪ್ರೋಮೋ ಬಿಡುಗಡೆಯಾಗಿದೆ. ಪುನೀತ್ ಡ್ಯಾನ್ಸ್ ಹಾಗೂ ಟೀಂ ಜೊತೆಗಿನ ಮೋಜು ಮಸ್ತಿ ಈ ವಿಡಿಯೋದಲ್ಲಿ ಕಾಣಬಹುದು. ಅಪ್ಪು ಚಿತ್ರದ ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ ಹಾಡಿಗೆ ಜೋಡಿಯೊಂದು ಹೆಜ್ಜೆ ಹಾಕಿದೆ. ಹಳೆ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಕ್ಕೆ ಪುನೀತ್ ಧನ್ಯವಾದಗಳನ್ನು ತಿಳಿಸುತ್ತಾರೆ ಆದರೆ ಅನುಶ್ರೀ ಇಟ್ಟ ಬೇಡಿಕೆಗೆ ನೋ ಹೇಳಲು ಸಾಧ್ಯವೇ ಇಲ್ಲ...

ಅಪ್ಪು ಚಿತ್ರದ ಫೇಮಸ್‌ ಡೈಲಾಗ್‌ ಹೇಳುವಂತೆ ನಿರೂಪಕಿ ಅನುಶ್ರೀ ಡಿಮ್ಯಾಂಡ್ ಮಾಡುತ್ತಾರೆ. ಅರ್ಜುನ್ ಜನ್ಯ 'ನಿಮ್ಮನ್ನು ನೋಡಲು ನನ್ನ ಫ್ರೆಂಡ್ ಬಂದಿದ್ದಾನೆ' ಎಂದು ಹೇಳುತ್ತಾರೆ. ರಕ್ಷಿತಾ 'ಹೌದಾ...ಓ ನೀವಾ ಹೇಗಿದ್ದೀರಾ' ಎಂದು ಕೇಳುತ್ತಾರೆ. ತಕ್ಷಣವೇ ಪುನೀತ್ 'ಐ ಲವ್‌ ಯು' ಎನ್ನುತ್ತಾರೆ. ಅದೇ ಘಟನೆ ರಿಪೀಟ್ ಆದ ಕಾರಣ ರಕ್ಷಿತಾ ನಿಜವಾಗಿಯೂ ನಾಚಿಕೊಳ್ಳುತ್ತಾರೆ. 

ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ! 

'ಡಿಕೆಡಿ ಸೆಟ್‌ನಲ್ಲಿ ಇಂದು ಎಂದೂ ಮರೆಯಲಾಗದ ದಿನ. ಪುನೀತ್‌ ಅಪ್ಪು ಆಗಮಿಸಿದ್ದರು.  ನೀವು ಬಂದು ನಮಗೆಲ್ಲಾ ಪವರ್ ಹೆಚ್ಚಾಗಿತ್ತು' ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!