ದಿವ್ಯಾ ಜೊತೆ ಬ್ರೇಕಪ್ ವದಂತಿ ಬೆನ್ನಲ್ಲೇ… ದೇವರ ಉತ್ಸವ ಮೂರ್ತಿ ಹೊತ್ತು ಅರ್ಚಕರಾಗಿ ಕಾಣಿಸಿಕೊಂಡ ಅರವಿಂದ್ ಕೆಪಿ

Published : Oct 17, 2026, 10:15 PM IST
Aravind KP

ಸಾರಾಂಶ

ನಟಿ ದಿವ್ಯಾ ಉರುಡುಗ ಜೊತೆಗೆ ಬ್ರೇಕಪ್ ಆಗಿದೆ ಎನ್ನುವ ವದಂತಿಯ ಬೆನ್ನಲ್ಲೇ ಬೈಕ್ ರೇಸರ್ ಹಾಗೂ ಬಿಗ್ ಬಾಸ್ ರನ್ನರ್ ಅಪ್ ಅರವಿಂದ್ ಕೆಪಿ ಉಡುಪಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನಲ್ಲಿ ಅರ್ಚಕರಾಗಿ ಕಾಣಿಸಿಕೊಂಡಿದ್ದಾರೆ.

ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನಲ್ಲಿ ಅರ್ಚಕರಾಗಿ ಅರವಿಂದ್ ಕೆಪಿ

ಬಿಗ್ ಬಾಸ್ ಸೀಸನ್ 8ರ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ರಾಷ್ಟ್ರೀಯ ಮಟ್ಟದ ಬೈಕ್ ರೇಸರ್ ಅರವಿಂದ್ ಕೆಪಿ, ಬಿಗ್ ಬಳಿಕ ಜನಪ್ರಿಯತೆ ಪಡೆದಿದ್ದು, ನಟಿ ದಿವ್ಯಾ ಉರುಡುಗ ಜೊತೆಗಿನ ಪ್ರೀತಿಯ ವಿಷಯದಲ್ಲಿ. ಇಬ್ಬರು ಹಲವು ವರ್ಷಗಳಿಂದ ಜೊತೆಯಾಗಿಯೇ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಅರವಿಂದ್ ಕೆಪಿ ತಮ್ಮ ಹುಟ್ಟೂರಾದ ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನಲ್ಲಿ ಅರ್ಚಕರಾಗಿ ತೀರ್ಥ ಪ್ರಸಾದ ನೀಡುತ್ತಾ, ದೇವರ ಬಲಿ ಮೂರ್ತಿ ಹೊತ್ತು ಉತ್ಸವದಲ್ಲಿ ಭಾಗಿಯಾಗಿರುವ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗುತ್ತಿವೆ.

1200 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ

ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಉಡುಪಿಯ ಪ್ರಸಿದ್ಧ ಶಕ್ತಿ ಆರಾಧನಾ ಕ್ಷೇತ್ರಗಳಲ್ಲಿ ಒಂದು. ಇಲ್ಲಿನ ದಸರಾ ಮಹೋತ್ಸವಕ್ಕೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ. ಇಂತಹ ಐತಿಹಾಸಿಕ ಕ್ಷೇತ್ರದ ದಸರಾ ಸಂಭ್ರಮದಲ್ಲಿ ಅರವಿಂದ್ ಕೆ.ಪಿ. ಅವರು ದೇವಿಯ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಸಾಗುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಹೊರಗಡೆ ಸೆಲೆಬ್ರಿಟಿಯಾಗಿ ಸದ್ದು ಮಾಡುತ್ತಿದ್ದರೂ ದೇವಸ್ಥಾನದಲ್ಲಿ ತೀರ್ಥ ಪ್ರಸಾದ ನೀಡುತ್ತಾ, ತಮ್ಮ ಕುಲಕಸುಬನ್ನು ಮರಯದೇ ಮಾಡುತ್ತಾ, ತಾನು ಒಬ್ಬ ಭಕ್ತ ಅಷ್ಟೇ ಅನ್ನೋದನ್ನು ನಿರೂಪಿಸಿದ್ದಾರೆ ಅರವಿಂದ್.

ನಿಜವಾಗಿಯೂ ದಿವ್ಯಾ ಜೊತೆ ಬ್ರೇಕಪ್ ಆಯ್ತಾ?

2021ರಲ್ಲಿ ಬಿಗ್ ಬಾಸ್ ಸೀಸನ್ 8ರಲ್ಲಿ ಇವರಿಬ್ಬರ ಸ್ನೇಹ ಬೆಳೆದ ಬಳಿಕ, ಕಳೆದ 4 ವರ್ಷಗಳಿಂದ ಈ ಜೋಡಿ, ಎಲ್ಲಾ ಕಡೆಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಮದುವೆ ಬಗ್ಗೆ ಪ್ರಶ್ನೆ ಬಂದಾಗಲೆಲ್ಲಾ, ಅದನ್ನು ಅವಾಯ್ಡ್ ಮಾಡುತ್ತಿದ್ದರು. ಇಬ್ಬರು ಜೊತೆಯಾಗಿ ‘ಅರ್ಧಂಬರ್ಧ ಪ್ರೇಮಕತೆ’ ಎನ್ನುವ ಸಿನಿಮಾ ಕೂಡ ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಬ್ಬರು ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ, ಅಷ್ಟೇ ಅಲ್ಲದೇ ಇಬ್ಬರು ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಹೀಗಾಗಿ ಬ್ರೇಕಪ್ ಆಗಿದೆ ಎಂಬ ಗಾಳಿ ಸುದ್ದಿ ಹರಡಿದೆ. ಆದರೆ ಈ ಬಗ್ಗೆ ಇಬ್ಬರೂ ಎಲ್ಲೂ ಮಾಹಿತಿ ನೀಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೂಮ್‌ಮೇಟ್ಸ್ TO ಜಗದ್ಧಾತ್ರಿ, ಕನ್ನಡ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸದ್ದುಮಾಡುತ್ತಿರುವ 5 ಸಿರೀಸ್
ರೀಲ್ ಲೈಫ್‌ನಲ್ಲಿ ಒಂದೇ ಪಾತ್ರ ಮಾಡಿದ್ದ ಕನ್ನಡದ ಇಬ್ಬರು ಕಿರುತೆರೆ ನಟರು: ಈಗ ತೆಲುಗು ಬಿಗ್ ಬಾಸ್‌ನಲ್ಲಿ ಎದುರಾಳಿಗಳು!