BBK 11: ನಾನು ಗೌತಮಿ ಜಾಧವ್‌ನನ್ನು ಟಾರ್ಗೆಟ್‌ ಮಾಡ್ಲಿಲ್ಲ, ಆ ಟೈಮ್‌ನಲ್ಲಿ ಬಕೆಟ್‌ ಹೇಳಿಲ್ಲ: ಮೋಕ್ಷಿತಾ ಪೈ

Published : Feb 05, 2025, 11:11 PM ISTUpdated : Feb 06, 2025, 10:19 AM IST
BBK 11:  ನಾನು ಗೌತಮಿ ಜಾಧವ್‌ನನ್ನು ಟಾರ್ಗೆಟ್‌ ಮಾಡ್ಲಿಲ್ಲ, ಆ ಟೈಮ್‌ನಲ್ಲಿ ಬಕೆಟ್‌ ಹೇಳಿಲ್ಲ: ಮೋಕ್ಷಿತಾ ಪೈ

ಸಾರಾಂಶ

ʼಬಿಗ್‌ ಬಾಸ್‌ ಕನ್ನಡ 11ʼ ಸ್ಪರ್ಧಿ ಮೋಕ್ಷಿತಾ ಪೈ ಅವರು ʼಬಕೆಟ್ʼ‌ ಪದ ಬಳಸಿದ್ದಾರೆ ಎನ್ನುವ ಆರೋಪ ಬಂದಿತ್ತು. ಅದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ.

ʼಬಿಗ್‌ ಬಾಸ್‌ ಕನ್ನಡ 11ʼ ಶೋನಲ್ಲಿ ಮೋಕ್ಷಿತಾ ಪೈ ಅವರು ಆಟದ ಬಗ್ಗೆ ಅನೇಕರಿಗೆ ಮೆಚ್ಚುಗೆ ಇದೆ. ಇನ್ನೊಂದು ಕಡೆ ಕೆಲವರು ಆರೋಪ ಮಾಡಿದ್ದೂ ಉಂಟು. ಈ ಬಗ್ಗೆ ಮೋಕ್ಷಿತಾ ಪೈ ಅವರು ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. 

ಮೋಕ್ಷಿತಾ ಪೈ ವಿರುದ್ಧದ ಆರೋಪ ಏನು? 
ನ್ಯಾಶನಲ್‌ ಟಿವಿ ಯುಟ್ಯೂಬ್‌ ಚಾನೆಲ್‌ನ ಸಂದರ್ಶನದಲ್ಲಿ ಮೋಕ್ಷಿತಾಗೆ ಒಂದು ಪ್ರಶ್ನೆ ಕೇಳಲಾಗಿತ್ತು. “ಗೌತಮಿ ಬಗ್ಗೆ ನೀವು ಬೇರೆಯವರ ಜೊತೆ ಮಾತನಾಡಿದ್ದೀರಿ. ಬೇರೆಯವರ ಬಗ್ಗೆ ಮಂಜು, ಗೌತಮಿ ಮಾತನಾಡ್ತಾರೆ, ಇನ್‌ಫ್ಲುಯೆನ್ಸ್‌ ಆಗತ್ತೆ ಅಂತ ಮಂಜು, ಗೌತಮಿಯನ್ನು ಬಿಟ್ಟುಬಂದ್ರಿ ಅಂತ ಹೇಳ್ತೀರಿ. ಅವರಿಗೆ ಇವರು ಬಕೆಟ್‌, ಇವರಿಗೆ ಅವರು ಬಕೆಟ್‌ ಅಂತ ಹೇಳಿದ್ರಿ. ನಮ್ಮಿಬ್ಬರ ಮಧ್ಯೆ ಗೌತಮಿ ಅಪ್ಪಚ್ಚಿ ಆದ್ರು ಅಂತ ಹೇಳ್ತೀರಿ. ಮಂಜು ಬೇರೆಯವರ ಬಗ್ಗೆ ಮಾತನಾಡುವಾಗ ಗೌತಮಿ ತಡೆದಿದ್ದಾರೆ” ಎನ್ನುವ ಪ್ರಶ್ನೆ ಕೇಳಲಾಗಿತ್ತು. 

BBK 11: ತ್ರಿವಿಕ್ರಮ್‌, ರಶ್ಮಿಕಾ ಮಂದಣ್ಣ ಜೊತೆಗಿರೋ ಫೋಟೋ ವೈರಲ್!‌ ಏನಪ್ಪಾ ಇದು ಹೊಸ ಕಥೆ?

ನಟಿ ಮೋಕ್ಷಿತಾ ಪೈ ಏನಂದ್ರು?
ಅದಿಕ್ಕೆ ಮೋಕ್ಷಿತಾ ಪೈ ಅವರು “ಬಕೆಟ್‌ ಪದ ಬಳಸಿಲ್ಲ. ಅವರನ್ನು ಇವರು ಹೊಗಳ್ತಾರೆ, ಇವರು ಅವರನ್ನು ಹೊಗಳ್ತಾಳೆ. ಮಂಜುಗೆ ಬೇಸರ ಆದ್ರೆ ಅವರು ಗೌತಮಿ ಬಳಿ ಹೇಳ್ತಾರೆ, ಗೌತಮಿಗೆ ಬೇಸರ ಆದರೆ ಮಂಜಣ್ಣಗೆ ಹೇಳಿಕೊಡ್ತಾರೆ. ಮೋಕ್ಷಿತಾಗೆ ಬೇಸರ ಆದರೆ ಯಾರ ಹತ್ರ ಹೇಳಿಕೊಳ್ಳಬೇಕು. ಇಲ್ಲಿ ನನ್ನ ಅಪ್ಪ-ಅಮ್ಮ ಇರ್ತಾರೆ, ಅವರ ಹತ್ರ ಹೇಳಿಕೊಳ್ಳಬಹುದು. ಆ ಮನೆಯಲ್ಲಿ ಬೇಸರ ಹೇಳಿಕೊಳ್ಳಲು ಯಾರೂ ಇಲ್ಲ. ಆದರೆ ಆ ಮನೆಯಲ್ಲಿ ನಾವು ಯಾರ ಹತ್ರ ಆದರೂ ಹೇಳಿಕೊಳ್ಳಬೇಕು. ಐಶ್ವರ್ಯಾ, ಶಿಶಿರ್ ಬಳಿ ಅಭಿಪ್ರಾಯ ಶೇರ್‌ ಮಾಡುತ್ತಿದ್ದೆ.‌ ಆದರೆ ನಾನು ಕೆಟ್ಟದಾಗಿ ಮಾತನಾಡಿಲ್ಲ. ಗೌತಮಿ ಕೊಡುಗೆ ಕಡಿಮೆ ಇತ್ತು ಎನ್ನೋದಕ್ಕೆ ನಾನೇ ಗೌತಮಿಯನ್ನು ನಾಮಿನೇಟ್‌ ಮಾಡುತ್ತಿದ್ದೆ, ಇದು ಸರಿಯಾದ ಕಾರಣ ಅಂತ ನನಗೆ ಅನಿಸ್ತು. ಬಿಗ್‌ ಬಾಸ್‌ ಮನೆ ಅಂದಾಕ್ಷಣ ಟಾಸ್ಕ್‌ ಅಲ್ಲ, ಎಲ್ಲರ ಜೊತೆ ಬೆರೆಯಬೇಕು, ಆದರೆ ಗೌತಮಿ ಮಾತ್ರ ಮಂಜಣ್ಣ ಜೊತೆ ಹೆಚ್ಚು ಇರುತ್ತಿದ್ದರು. ಇದು ಟಾರ್ಗೆಟ್‌ ಅಲ್ಲ” ಎಂದು ಹೇಳಿದ್ದರು.

ತ್ರಿವಿಕ್ರಮ್ ಮನದಾಸೆ ಅರಿತುಕೊಂಡ ಮೋಕ್ಷಿತಾ ಪೈ; ವಿಕ್ಕಿಗೆ ಜೋಡಿಯಾಗಲು ಗ್ರೀನ್ ಸಿಗ್ನಲ್!

ನಾನು ಕನ್ನಡಿ ಮುಂದೆ ಮಾತನಾಡಿದೀನಿ..! 
ಈ ಬಗ್ಗೆ ಮೋಕ್ಷಿತಾ ಪೈ ಅವರು ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ. “ನಾನು ಶಿಶಿರ್‌ ಜೊತೆ ಮಾತನಾಡುವಾಗ ಅವರು ಇವರನ್ನು ಹೊಗಳ್ತಾರೆ, ಇವರು ಅವರನ್ನು ಹೊಗಳ್ತಾರೆ ಅಂತ ಹೇಳಿದೀನಿ. ಅವರಿಗೆ ಇವರು ಬಕೆಟ್‌ ಹಿಡಿಯುತ್ತಾರೆ, ಅವರು ಇವರು ಬಕೆಟ್‌ ಹಿಡಿಯುತ್ತಾರೆ ಅಂತ ನಾನು ಕನ್ನಡಿ ಮುಂದೆ ಮಾತನಾಡಿದೀನಿ. ಇದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಹೀಗಾಗಿ ದಯವಿಟ್ಟು ಎಪಿಸೋಡ್‌ ನೋಡಿ” ಎಂದು ಮೋಕ್ಷಿತಾ ಪೈ ಅವರು ಹೇಳಿದ್ದಾರೆ. 

ಮೋಕ್ಷಿತಾ ಪೈ ಏನಂದ್ರು?
“ಬಿಗ್‌ ಬಾಸ್‌ ಜರ್ನಿ ಒಳಗಡೆ ಅಷ್ಟು ಸುಲಭ ಇರಲಿಲ್ಲ, ಹೊರಗಡೆಯೂ ಸುಲಭ ಇರಲಿಲ್ಲ. ನೀವೆಲ್ಲ ನನಗೆ ಮತ ಹಾಕಿ ನಾಲ್ಕನೇ ಸ್ಥಾನ ಕೊಟ್ಟಿರೋದು ತುಂಬ ಖುಷಿ ಕೊಟ್ಟಿದೆ. ಇನ್ಮುಂದೆಯೂ ನಿಮ್ಮ ಪ್ರೀತಿ, ಸಹಕಾರ ಸದಾ ಹೀಗೆ ಇರಲಿ. ನಾನೊಂದು ಸಿನಿಮಾದಲ್ಲಿ ನಟಿಸಿದ್ದೇನೆ, ಆ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿವೆ. ಆ ಬಗ್ಗೆ ತಂಡವೇ ಮಾಹಿತಿ ಕೊಡಲಿದೆ, ನಾನು ಈಗ ಆ ಬಗ್ಗೆ ಏನೂ ಮಾತನಾಡಲಾರೆ. ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ತೀನಿ, ಜನರನ್ನು ರಂಜಿಸುವೆ” ಎಂದು ನಟಿ ಮೋಕ್ಷಿತಾ ಪೈ ಅವರು ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!