ಸಿಹಿ ಕಹಿ ಗೀತಾ 60ನೇ ಹುಟ್ಟು ಹಬ್ಬಕ್ಕೆ ಮಕ್ಕಳಿಂದ ಗ್ರ್ಯಾಂಡ್ ಸರ್ಪೈಸ್ ಪಾರ್ಟಿ

Published : Feb 05, 2025, 09:47 PM ISTUpdated : Feb 06, 2025, 10:46 AM IST
ಸಿಹಿ ಕಹಿ ಗೀತಾ 60ನೇ ಹುಟ್ಟು ಹಬ್ಬಕ್ಕೆ ಮಕ್ಕಳಿಂದ ಗ್ರ್ಯಾಂಡ್ ಸರ್ಪೈಸ್ ಪಾರ್ಟಿ

ಸಾರಾಂಶ

ನಟಿ ಹಾಗೂ ನಿರ್ಮಾಪಕಿ ಸಿಹಿಕಹಿ ಗೀತಾ ಅವರ 60ನೇ ಹುಟ್ಟುಹಬ್ಬವನ್ನು ಮಕ್ಕಳು ಅದ್ಧೂರಿಯಾಗಿ ಆಚರಿಸಿದರು. ಕಿರುತೆರೆ ತಾರೆಯರು ಪಾರ್ಟಿಯಲ್ಲಿ ಸಂಭ್ರಮಿಸಿದರು. ಚಂದ್ರು ಮತ್ತು ಗೀತಾ ದಂಪತಿಗಳು ನೃತ್ಯ ಮಾಡಿದರು.  

ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಹಾಗೂ ಸಿಹಿಕಹಿ ಚಂದ್ರು ಪತ್ನಿಯಾಗಿರುವ ಸಿಹಿ ಕಹಿ ಗೀತಾ (Sihi Kahi Geetha) ಅವರ 60ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಮಕ್ಕಳು ಗ್ರ್ಯಾಂಡ್ ಸರ್ಪೈಸ್ ಪಾರ್ಟಿ ನೀಡಿದ್ದು, ಈ ಅದ್ಧೂರಿ ಪಾರ್ಟಿಯಲ್ಲಿ ಕನ್ನಡ ಕಿರುತೆರೆಯ ಸೆಲೆಬ್ರಿಟಿಗಳು ಸಹ ಆಗಮಿಸಿ, ಸಂಭ್ರಮಿಸಿದ್ದಾರೆ. 

ನನಗೆ ಮಗು ಬೇಡ, ನನ್ನ ನಿರ್ಧಾರವನ್ನು ಅಪ್ಪ-ಅಮ್ಮ ಮತ್ತು ಗಂಡ ಒಪ್ಪಿಕೊಂಡಿದ್ದಾರೆ: ಹಿತಾ ಚಂದ್ರಶೇಖರ್

ಸಿಹಿ ಕಹಿ ಚಂದ್ರು ಅವರ ಪುತ್ರಿಯರಾದ ಹಿತಾ ಚಂದ್ರಶೇಖರ್ (Hitha Chandra Shekhar) ಹಾಗೂ ಖುಷಿ ಚಂದ್ರಶೇಖರ್ ತಮ್ಮ ತಾಯಿಯ 60ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಪ್ಲ್ಯಾನ್ ಮಾಡಿದ್ದರು.  ಬರ್ತ್‌ಡೇಯ ವಿಡಿಯೋವನ್ನು ಕಿರುತೆರೆ ನಟಿ ರೂಪ ಪ್ರಭಾಕರ್ ಹಂಚಿಕೊಂಡಿದ್ದು, ಇದರಲ್ಲಿ ಬರ್ತ್ ಡೇ ಸಂಭ್ರಮದ ಕ್ಷಣಗಳನ್ನು ಕಾಣಬಹುದು. ಅಷ್ಟೇ ಅಲ್ಲ ಬರ್ಟ್ ಡೇ ಪಾರ್ಟಿಯಲ್ಲಿ ಸಿಹಿ ಕಹಿ ಚಂದ್ರು ಹಾಗೂ ಸಿಹಿ ಕಹಿ ಗೀತಾ ಜೊತೆಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇವರ ಡ್ಯಾನ್ಸ್ ಗೆ ಹಿತಾ ಹಾಗೂ ಖುಷಿ ಸಹ ಸಾಥ್ ನೀಡಿದ್ದಾರೆ. 

ಸಿಹಿ ಕಹಿ ಗೀತಾ ಹುಟ್ಟುಹಬ್ಬಕ್ಕೆ ಕಿರುತೆರೆಯ ನಟ, ನಟಿಯರ ಬಳಗವೇ ಆಗಮಿಸಿ ಶುಭ ಕೋರಿದ್ದರು. ನಟಿ ರೂಪಾ ಪ್ರಭಾಕರ್ (Roopa Prabhakar), ಅವರ ಪತಿ ಪ್ರಶಾಂತ್, ಸುಜಾತ ಅಕ್ಷಯ್, ರಮೇಶ್ ಪಂಡಿತ್,  ಹಾಗೂ ಸಿಲ್ಲಿ ಲಲ್ಲಿ ಸೀರಿಯಲ್ ತಂಡ ಕೂಡ ಬರ್ತ್ ಡೇ ಪಾರ್ಟಿಗೆ ಆಗಮಿಸಿ ಸಂಭ್ರಮಿಸಿದ್ದರು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!