ಖಿನ್ನತೆಯಿಂಬ ಬಳಲುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಖಿನ್ನತೆಯಲ್ಲಿ ಬಳಲುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಮಾಡಗಿ ರಸ್ತೆಯಲ್ಲಿವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾನ್ ಸರಿ ಇಲ್ಲ, ನಾನು ಸಾಯಬೇಕು: ಕನ್ನಡ ನಟಿಯ ಮತ್ತೊಂದು ಆಘಾತಕಾರಿ ಪೋಸ್ಟ್
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಜನಪ್ರಿಯತೆ ಪಡೆದುಕೊಂಡ ನಂತರ ಜಯಶ್ರೀ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಆ ನಂತರ ಹಲವು ವರ್ಷಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 2020ರ ಜೂನ್ 24ರಂದು ಫೇಸ್‌ಬುಕ್ ಲೈವ್ ಮಾಡಿ ಆತ್ಮಹತ್ಯೆ ಯತ್ನ ಮಾಡಿದ್ದರು ಆದರೆ ಕಿಚ್ಚ ಸುದೀಪ್ ಮಾತನಾಡಿ ಜಯಶ್ರೀಗೆ ಧೈರ್ಯ ತುಂಬಿದ್ದರು.
ಜಯಶ್ರೀ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ವಿವಾದಗಳು ನಡೆಯುತ್ತಲೇ ಇತ್ತು. ಹಿಂದೊಮ್ಮೆ ಜಯಶ್ರೀ ತಮ್ಮ ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಕ್ಕಿದಂತೆ ನಟಿ ಜಯಶ್ರೀ ತಲೆ ಬೋಳಿಸಿಕೊಳ್ಳಲು ಕಾರಣವೇನು?
ಜಯಶ್ರೀ ಇನ್ನಿಲ್ಲ ಎಂದು ತಿಳಿಯುತ್ತಿದ್ದಂತೆ ಇಡೀ ಕಿರುತೆರೆ ಚಿತ್ರರಂಗ ಶಾಕ್ ಆಗಿದೆ. ಜಯಶ್ರೀ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.