ನಕಲಿ ಕಣ್ರೆಪ್ಪೆ ಹಾಕಿಸಿಕೊಂಡ ಬಿಗ್ ಬಾಸ್ ಧನುಶ್ರೀ; ಯಾಕಿಷ್ಟೊಂದು ಶೋಕಿ ಎಂದು ಕಾಲೆಳೆದ ನೆಟ್ಟಿಗರು

Published : Feb 21, 2023, 03:37 PM IST
ನಕಲಿ ಕಣ್ರೆಪ್ಪೆ ಹಾಕಿಸಿಕೊಂಡ ಬಿಗ್ ಬಾಸ್ ಧನುಶ್ರೀ; ಯಾಕಿಷ್ಟೊಂದು ಶೋಕಿ ಎಂದು ಕಾಲೆಳೆದ ನೆಟ್ಟಿಗರು

ಸಾರಾಂಶ

ನಕಲಿ ಕಣ್ರೆಪ್ಪೆ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡ ಬಿಗ್ ಬಾಸ್ ಧನುಶ್ರೀ. ಕಾಲೆಳೆಯುವವರಿಗೆ ಉತ್ತರ ಕೊಟ್ಟ ನಟ.... 

ಸೋಷಿಯಲ್ ಮೀಡಿಯಾ influencer ಧನುಶ್ರೀ ಇದೀಗ ಒಂದೊಳ್ಳೆ ಲವ್‌ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸುವ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹೆಚ್ಚಿಗೆ ಪರಿಚಯವಾದರು. ಇದಾದ ಮೇಲೆ ಫೋಟೋಶೂಟ್‌, ಶಾರ್ಟ್‌ ಫಿಲ್ಮಂ ಅಂತ ಬ್ಯುಸಿಯಾಗಿದ್ದ ಧನು ಸಿನಿಮಾ ಮಾಡಿದ್ದಾರೆ. ಫೆಬ್ರವರಿ 17ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ಸುಂದರಿ ಈಗ ಕಣ್ಣಿಗೆ ನಕಲಿ ರೆಪ್ಪೆ ಹಾಕಿಸಿಕೊಂಡಿದ್ದಾರೆ. 

ಹೌದು! ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್ ಚಾನೆಲ್ ಆರಂಭಿಸಿದ ಧನುಶ್ರೀ ಬ್ಯೂಟಿ, ಫ್ಯಾಷನ್, ಸ್ಕಿನ್ ಕೇರ್, ಟ್ರ್ಯಾವಲ್ ಹೀಗೆ ಪ್ರತಿಯೊಂದರ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಇದೀಗ ನಕಲಿ ಕಣ್ರೆಪ್ಪೆ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಮಾಡಿ ಟ್ರೋಲ್ ಆಗಿದ್ದಾರೆ. 'ನಮ್ಮ ಮನೆಯಲ್ಲಿ ಅತಿ ಶೀಘ್ರದಲ್ಲಿ ಶುಭ ಕಾರ್ಯ ನಡೆಯಲಿದೆ. ನಮ್ಮ ಇಡೀ ಕುಟುಂಬ ಖುಷಿಯಾಗಿದೆ. ತುಂಬಾ ದಿನಗಳಿಂದ ನಾವು ಪ್ಲ್ಯಾನ್ ಮಾಡುತ್ತಿದ್ದೀವಿ' ಎಂದು ಧನುಶ್ರೀ ವಿಡಿಯೋ ಆರಂಭಿಸಿದ್ದಾರೆ. 

ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಹೊಸ ಕಾರು ಖರೀದಿಸಿದ ಧನುಶ್ರೀ!

'ಸುಮಾರು 3 ಸಲ ನಕಲಿ ಕಣ್ರೆಪ್ಪೆ ಹಾಕಿಸಿಕೊಂಡಿರುವೆ ಅದು ಕ್ಲಾಸಿಕ್ . ಇದೆಲ್ಲಾ ಕೇವಲ ಎರಡುವರೆ ಸಾವಿರ ಅಗುತ್ತೆ. ಈ ಸಲ ಡ್ರಮ್ಯಾಟಿಕ್ ಆಗಿರುವ ಕಣ್ರೆಪ್ಪೆ ಹಾಕಿಸಿಕೊಳ್ಳಬೇಕು ಎಂದುಕೊಂಡಿರುವೆ. ಸಿನಿಮಾ ಪ್ರಚಾರ ಮತ್ತು ನಮ್ಮ ಮನೆಯ ಕಾರ್ಯಕ್ರಮಕ್ಕೆ ಸೂಕ್ತವಾಗುವ ರೀತಿಯಲ್ಲಿ ಹಾಕಿಸಿಕೊಳ್ಳಬೇಕು. ಕೈ ಉಗುರು ಕೂಡ ಸ್ಟೈಲ್ ಮಾಡಿಸಬೇಕು. ಡಿಸೈನರ್ ಬೇಕು ಎಂದು ವಿಭಿನ್ನವಾಗಿ ಮಾಡಿಸುತ್ತಿರುವೆ. ಈ ವಿಡಿಯೋ ನೋಡಿ ನೀವು ಯಾಕೆ ಇಷ್ಟೊಂದು ಶೋಕಿ ಎಂದು ಕಾಮೆಂಟ್ ಮಾಡುತ್ತೀರಾ ಅಂತ ಗೊತ್ತಿದೆ. ಹುಡುಗಿಯರಿಗೆ ಶಾಪಿಂಗ್ ಮಾಡಿದರೆ ಖುಷಿಯಾಗುತ್ತದೆ ಹಾಗೂ ದುಃಖ ಕಡಿಮೆಯಾಗುತ್ತದೆ. ನಾವು ಹುಡುಗಿಯರು ಹೀಗೆ ತುಂಬಾನೇ ಸಿಂಪಲ್ ಸಣ್ಣ ಪುಟ್ಟ ವಿಚಾರಗಳಲ್ಲಿ ಖುಷಿ ಕಾಣುತ್ತೀವಿ. ಹುಡುಗರ ಖುಷಿ ಬೇರೆ ರೀತಿ ಇರುತ್ತದೆ' ಎಂದು ಟ್ರೋಲ್ ಮಾಡುವವರೆಗೂ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. 

ಧನುಶ್ರೀ ತಿಂಗಳ ಖರ್ಚು ಎಷ್ಟು?

'Influencer ಆದ ಮೇಲೆ ದಿನಚರಿ ಬೇರೆ ರೀತಿ ಇರುತ್ತದೆ. ಮೊದಲು ಸಿಕ್ಕಿದೆಲ್ಲಾ ತಿನ್ನುತ್ತಿದೆ ಆದರೆ ಈಗ ಡಯಟ್‌ ಪ್ಲ್ಯಾನ್ ಮಾಡಿರುವೆ. ನನ್ನ ಒಂದೊಳ್ಳೆ ಲವ್‌ಸ್ಟೋರಿ ಸಿನಿಮಾ ಆರಂಭದಲ್ಲೂ ನಾನು ಸಣ್ಣಗಾಗಬೇಕು ಎಂದು ನಿರ್ದೇಶಕರು ಹೇಳಿದ್ದರು. ಎಷ್ಟೇ ಡಯಟ್ ಮಾಡಿದ್ದರೂ ಕೆಲವರ ದೇಹ ತೆಗೆದುಕೊಳ್ಳುವುದಿಲ್ಲ ಜಿಮ್‌ ವರ್ಕೌಟ್ ಸರಿಯಾದ ಸಮಯಕ್ಕೆ ಮಾಡಲು ಆಗುವುದಿಲ್ಲ ಏಕೆಂದರೆ ಒಂದು ದಿನ ಶೂಟಿಂಗ್ ಇರುತ್ತೆ ಮತ್ತೊಂದು ದಿನ ಮೇಕಪ್ ಫೋಟೋಶೂಟ್‌ ಇರುತ್ತೆ ಈಗ ಯೂಟ್ಯೂಬ್ ವ್ಲಾಗ್ ಆರಂಭಿಸಿರುವುದಕ್ಕೆ ಆ ಕೆಲಸ ಕೂಡ ಸೇರಿಕೊಂಡಿದೆ. ಹೆಚ್ಚಿನ ಸಮಯವನ್ನು ವಿಡಿಯೋ ಎಡಿಟಿಂಗ್ ಮಾಡಲು ಬೇಕಾಗುತ್ತದೆ. ವಿಡಿಯೋ ಕೆಲವು ನಿಮಿಷಗಳು ನೋಡಲು ಬೇಕಾಗುತ್ತದೆ ಆದರೆ ಎಡಿಟ್ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ' ಎಂದು ಧನುಶ್ರೀ ಹೇಳಿದ್ದಾರೆ.

ನನ್ನ ಲೈಫ್‌ಸ್ಟೈಲ್‌ಗೆ ತಿಂಗಳಲ್ಲಿ 20 ರಿಂದ 30 ಸಾವಿರ ಬೇಕು; ಬಿಗ್ ಬಾಸ್ ಧನುಶ್ರೀ ಸಂಪಾದನೆ ಎಷ್ಟು?

ಬೆಳಗ್ಗೆ ಎದ್ದು ನಾವು ದೇವರ ಫೋಟೋ ನೋಡುವುದಿಲ್ಲ ಬದಲಿಗೆ ಪೋನ್ ನೋಡುವುದು ಏಕೆಂದರೆ ಅದೇ ನಮಗೆ ದೇವರು. ನನಗೆ ಲೈಫ್ ಕೊಟ್ಟಿದ್ದು ನನ್ನ ಫೋನ್, ನಿನ್ನೆ ಅಪ್ಲೋಡ್ ಮಾಡಿರುವುದಕ್ಕೆ ಎಷ್ಟು ವೀಕ್ಷಣೆ ಬಂದಿದೆ ಇಂದು ಎನು ಮಾಡಬೇಕು ಏನೆಂದು ಕಾಮೆಂಟ್ ಬಂದಿದೆ ಎಂದು ಚೆಕ್ ಮಾಡಬೇಕು. ಶೂಟ್‌ಗಳಿದ್ದರೆ ಬೆಳಗ್ಗೆಯಿಂದ ಸಂಜೆವರೆಗೂ ಇರುತ್ತದೆ. ರೀಲ್ಸ್‌ ಮಾಡಲು ಅಥವಾ ವಿಡಿಯೋನ ಬೆಳಗ್ಗೆ ಮಾಡುತ್ತೀವಿ ಏಕೆಂದರೆ ಲೈಟ್ ಅದ್ಭುತವಾಗಿರುತ್ತದೆ ರಾತ್ರಿ ಏನೂ ಶೂಟ್‌ ಮಾಡಲಾಗದು. ನಾವು ಮಿಡಲ್ ಕ್ಲಾಸ್ ಮನೆಯಿಂದ ಬಂದಿರುವುದು ನಮ್ಮ ಕೈಯಲ್ಲಿ ಎಷ್ಟು ಆಗುತ್ತೆ ಅಷ್ಟು ಶ್ರಮ ಹಾಕಬಹುದು ಕೆಲವೊಂದು ಸಲ ಸ್ಥಳ ಚೆನ್ನಾಗಿ ಬರುವುದಿಲ್ಲ ಅದನ್ನು ಹುಡುಕಬೇಕು ಅಲ್ಲಿ ಹೋಗಿ ವಿಡಿಯೋ ಮಾಡಬೇಕು' ಎಂದಿದ್ದಾರೆ ಧನು.  

'ಸಂಜೆ ಜಿಮ್ ಅಥವಾ ಶಾಪಿಂಗ್ ಮಾಡುವೆ ,Influencer ಜೀವನ ಹೇಗೆ ಅಂದ್ರೆ ನಾವು ಒಳ್ಳೆ ಬಟ್ಟೆ ಧರಿಸಬೇಕು ನಮ್ಮನ್ನು ನಾವು ನೀಟ್‌ ಆಗಿ ಕ್ಯಾರಿ ಮಾಡಬೇಕು ಜನ ನಮ್ಮನ್ನು ನೋಡಿ ಫಾಲೋ ಮಾಡುತ್ತಾರೆ. ನಾನೇ ಅದೆಷ್ಟೋ ಜನರನ್ನು ಫಾಲೋ ಮಾಡುವೆ. ನಾನು ತಿಂಗಳಲ್ಲಿ ಮಾಡುವ ಸಂಪಾದನೆ ಇದಕ್ಕೆ ಅಂತ ಇಡಬೇಕು. ಒಂದೊಂದು ತಿಂಗಳು ಒಂದೊಂದು ರೀತಿ ಆದಾಯ ಇರುತ್ತದೆ ಆದರೆ ನನ್ನ ಲೈಫ್‌ ಸ್ಟೈಲ್‌ಗೆಂದು 20-30 ಸಾವಿರ ಹಣ ಬೇಕಾಗುತ್ತದೆ. ಇದೆಲ್ಲಾ ಬಿಟ್ಟು ಮನೆ ಖರ್ಚು ಹೆಚ್ಚಿಗೆ ಇರುತ್ತದೆ. ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದರು ಅದನ್ನು ಬಿಡಿಸಿ ಮನೆ ಖರ್ಚು, ಮನೆ ಲೋನ್‌ ನನ್ನ ಲೋನ್‌ ತುಂಬಾ ಇದೆ ಅದೆಲ್ಲಾ ನೋಡಿಕೊಳ್ಳಬೇಕು' ಎಂದು ಧನುಶ್ರೀ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?