
ನನಗೆ 44 ಆಯ್ತು, ಮಗು ಬೇಕು ಎನ್ನೋ ಆಸೆ ಇದೆ, ಹೆಂಡತಿ ಒಪ್ಪುತ್ತಿಲ್ಲ. ಅವಳ ಅಭಿಪ್ರಾಯವನ್ನು ನಾನು ಗೌರವಿಸಬೇಕು ಎಂದು ಬಿಗ್ ಬಾಸ್ 19 ವಿಜೇತ ಗೌರವ್ ಖನ್ನಾ ಅವರು ಮನೆಯೊಳಗಡೆ ಹೇಳಿದ್ದರು. ಈಗ ಪತ್ನಿ ಸುದ್ದಿಗೋಷ್ಠಿಯಲ್ಲಿ ಡ್ಯಾನ್ಸ್ ಮಾಡಿದ್ದು, ಚರ್ಚೆ ಹುಟ್ಟುಹಾಕಿದೆ.
Bas Tu Hi Tu ಎನ್ನುವ ರೊಮ್ಯಾಂಟಿಕ್ ವಿಡಿಯೋದಲ್ಲಿ ಆಕಾಂಕ್ಷಾ ಅವರು ಕಾಣಿಸಿಕೊಂಡಿದ್ದಾರೆ. ಇಲ್ಲಿ ಅತಿಯಾದ ಬೋಲ್ಡ್ ದೃಶ್ಯಗಳು, ರೊಮ್ಯಾನ್ಸ್ ಕೂಡ ಇದೆ. ಈ ಹಾಡಿಗೂ ಮುನ್ನ ಡಿವೋರ್ಸ್ ಆಗುವ ಅನುಮಾನ ತರಿಸುವಂತೆ ಆಕಾಂಕ್ಷಾ ಅವರು ಪೋಸ್ಟ್ ಕೂಡ ಹಂಚಿಕೊಂಡಿದ್ದರು. ಗೌರವ್ ಖನ್ನಾ, ಆಕಾಂಕ್ಷಾ ಬೇರೆ ಬೇರೆ ಆಗುತ್ತಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದರು. ಇದೆಲ್ಲವೂ ಪ್ರಚಾರ, ನಾವು ಡಿವೋರ್ಸ್ ತಗೊಳ್ತಿಲ್ಲ ಎಂದು ಆಕಾಂಕ್ಷಾ ಹೇಳಿದ್ದಾರೆ.
Bas Tu Hi Tu ಹಾಡಿನ ಸಂಬಂಧಿತ ಸುದ್ದಿಗೋಷ್ಠಿ ಏರ್ಪಡಿಸಲಾಗಿದೆ. ಆ ವೇಳೆ ಆಕಾಂಕ್ಷಾ ಚಮೋಲ ಅವರು ಕೆಂಪು ಬಣ್ಣದ ಡ್ರೆಸ್ ಧರಿಸಿ, ಕಂಗೊಳಿಸುತ್ತಿದ್ದರು. ಅವರ ಜೊತೆ ಇಬ್ಬರು ನಟರು ಕೂಡ ಇದ್ದರು. ಈ ಇಬ್ಬರೂ ನಟರು ಆಕಾಂಕ್ಷಾರನ್ನು ಎಳೆದು, ತಳ್ಳಾಡಿ ಡ್ಯಾನ್ಸ್ ಮಾಡಿದ್ದಾರೆ. ಗೌರವ್ ಅವರನ್ನು ನೋಡಿದರೆ ಬೇಸರ ಆಗುತ್ತದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.
“ನಮಗೆ ಇದನ್ನು ಸಹಿಸೋಕೆ ಆಗ್ತಿಲ್ಲ, ಮಾನ ಮರ್ಯಾದೆ ಬಿಟ್ಟ ಗೌರವ್ ಖನ್ನಾ ಪತ್ನಿಯಂಥ ಹೆಂಗಸನ್ನು ನಾವು ಎಲ್ಲಿಯೂ ನೋಡಿಲ್ಲ, ಆ ಇಬ್ಬರು ನಟರ ಜೊತೆ ನೀವು ಹೇಗೆ ಕಂಫರ್ಟ್ ಆಗಿದ್ದೀರಿ? ಪ್ರಚಾರ ಮಾಡೋದು ಒಂದುಕಡೆಯಾದರೆ, ಹೀಗೆಲ್ಲ ಆಡಬಾರದು, ಅದಕ್ಕೂ ಲಿಮಿಟ್ ಇದೆ. ಗೌರವ್ ಖನ್ನಾಗೆ ಇವರಿಗಿಂತ ಒಳ್ಳೆಯ ಹೆಂಡತಿ ಸಿಗಬೇಕು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಗೌರವ್ ಖನ್ನಾ ಅವರು ಟ್ರೋಫಿ ಗಳಿಸಿದ ಬಳಿಕ ಎಲ್ಲ ಕಡೆ ಪತ್ನಿ ಜೊತೆಗೆ ಓಡಾಡಿದ್ದರು. ಗೌರವ್ ಹಾಗೂ ಆಕಾಂಕ್ಷಾ ಅವರು ಗ್ರ್ಯಾಂಡ್ ಆಗಿ ಜನ್ಮದಿನ ಆಚರಿಸಿಕೊಂಡಿದ್ದರು. ಪಾರ್ಟಿಯಲ್ಲಿ ಇವರ ಡ್ಯಾನ್ಸ್ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಂದಹಾಗೆ ಕಿರುತೆರೆಯಲ್ಲಿ ಅನುಪಮಾ ಧಾರಾವಾಹಿಯಲ್ಲಿ ಗೌರವ್ ಖನ್ನಾ ಅವರು ಅನೂಜ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕಾಂಕ್ಷಾಗೆ ಕಿರುತೆರೆಯಲ್ಲಿ ಅಷ್ಟು ಜನಪ್ರಿಯತೆ ಸಿಕ್ಕಿಲ್ಲ. ಇವರಿಬ್ಬರು ಲವ್ ಮ್ಯಾರೇಜ್ ಆಗಿದ್ದು 11 ವರ್ಷಗಳ ನಡುವಿನ ಅಂತರವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.