
ಬಿಗ್ ಬಾಸ್ 19 ಶೋನಲ್ಲಿ ಫ್ಯಾಮಿಲಿ ವೀಕ್ ಇತ್ತು. ಮೂರು ತಿಂಗಳುಗಳ ಬಳಿಕ ಮನೆಯವರ ಜೊತೆ ಸ್ಪರ್ಧಿಗಳಿಗೆ ಭೇಟಿಯಾಗುವ, ಮಾತನಾಡುವ ಅವಕಾಶ ಇತ್ತು. ಆಗ ನಟ ಗೌರವ್ ಖನ್ನಾ ಪತ್ನಿ ಆಕಾಂಕ್ಷಾ ಬಂದಿದ್ದರು. ಇವರು ಬಿಗ್ ಬಾಸ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.
ರೆಡ್ ಹಾಗೂ ಬಿಳಿ ಬಣ್ಣದ ಮಿನಿ ಸ್ಕರ್ಟ್ ಹಾಕಿ ಬೋಲ್ಡ್ ಅವತಾರದಲ್ಲಿ ಬಂದಿದ್ದ ಆಕಾಂಕ್ಷಾ ನೋಡಿ ಗೌರವ್ ಅಂತೂ ಫುಲ್ ಖುಷಿಯಾದರು. ಆಕಾಂಕ್ಷಾ ಎಂಟ್ರಿ ಕೊಟ್ಟಾಗ, ಗೌರವ್ ಅವರಿಗೆ ಫ್ರೀಜ್ ಎಂದು ಹೇಳಲಾಗಿತ್ತು. ಹೀಗಾಗಿ ಅವರು ಮಾತನಾಡಲಾಗದೆ, ಅಲುಗಾಡದೆ ಕೂತಿದ್ದರು. ಆಕಾಂಕ್ಷಾ ಅವರು ಬಿಗ್ ಬಾಸ್ ಶೋಗೆ ಮನವಿ ಮಾಡಿ, ಗಂಡನನ್ನು ರಿಲೀಸ್ ಮಾಡಿಕೊಂಡು, ಅಪ್ಪಿಕೊಂಡು ಕುಶಲೋಪಚರಿ ಮಾತನಾಡಿಸಿದರು. ಇದನ್ನು ನೋಡಿದವರಿಗೆ ಎಮೋಶನಲ್ ಆಗಿದೆ. ಇದರ ಜೊತೆಗೆ ರೊಮ್ಯಾಂಟಿಕ್ ಹಾಡು ಕೇಳಿಬರುತ್ತದೆ.
ಗೌರವ್ ಖನ್ನಾ ಹಾಗೂ ಆಕಾಂಕ್ಷಾ ಅವರು ಒಂದಿಷ್ಟು ಸಮಯ ಮಾತನಾಡಿಕೊಳ್ಳುತ್ತಾರೆ, ಅಲ್ಲೇ ಹತ್ತಿರದಲ್ಲೇ ಇದ್ದ ಅಮಾಲ್ ಮಲಿಕ್ ಅವರು "ನಾನು ಕಣ್ಮುಚ್ಚಿಕೊಂಡಿದ್ದೇನೆ" ಎಂದು ಹೇಳಿ, ತಮಾಷೆ ಮಾಡುತ್ತಾರೆ. ಅದಾದ ಮೇಲೆ ಗೌರವ್ ಅವರಿಗೆ ಫ್ರೀಜ್ ಎಂದು ಬಿಗ್ ಬಾಸ್ ಹೇಳುತ್ತಾರೆ. ಆಗ ಆಕಾಂಕ್ಷಾ, “ಬಿಗ್ ಬಾಸ್, ನೀವು ರಿಲೀಸ್ ಮಾಡಿಲ್ಲ ಅಂದ್ರೆ ಅಡಲ್ಟ್ ಕಿಸ್ ಕೊಡ್ತೀನಿ” ಎಂದು ಹೇಳುತ್ತಾರೆ. ಆಗ ಬಿಗ್ ಬಾಸ್ ಕೂಡ ಫ್ರೀಜ್ ಅಂತಲೇ ಹೇಳಿ ಚಮಕ್ ಕೊಡುತ್ತಾರೆ.
ಗೌರವ್ ಖನ್ನಾ ಅವರಂತೂ ಕಳೆದ ಕೆಲವು ದಿನಗಳಿಂದ ಫ್ಯಾಮಿಲಿ ಸೆಗ್ಮೆಂಟ್ ಬರಲಿ ಎಂದು ಕಾಯುತ್ತಿದ್ದರು, ಇದನ್ನು ಸಹ ಸ್ಪರ್ಧಿಗಳಿಗೆ ಹೇಳಿದ್ದರು.
ಈ ವಾರದ ಆರಂಭದಲ್ಲಿಯೇ ಸೆಲೆಬ್ರಿಟಿ ಜ್ಯೋತಿಷಿ ಜೈ ಮದನ್ ಬಿಗ್ ಬಾಸ್ ಮನೆಯೊಳಗಡೆ ಬಂದಿದ್ದರು. ಅವರು ಹೋಗುವಾಗ, ಗೌರವ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದ್ದರು. ನಾವು ಏನೂ ಪ್ಲಾನ್ ಮಾಡಿಲ್ಲ. ನನಗೆ, ಆಕಾಂಕ್ಷಾಗೆ ಮಕ್ಕಳಾಗುತ್ತವೆಯೇ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಮದನ್, "ಆಕಾಂಕ್ಷಾ ಯೋಚನೆ ಮಾಡುತ್ತಿದ್ದಾರೆ" ಎಂದು ಹೇಳಿದ್ದರು. ಆಗ ಗೌರವ್ ಮುಖದಲ್ಲಿ ನಗು ಬಂತು.
ಈ ಪ್ರೋಮೋ ರಿಲೀಸ್ ಆಗುತ್ತಿದ್ದಂತೆಯೇ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ ಸುರಿಸಿದರು. "ಓ ಮೈ ಗಾಡ್, ಆಕಾಂಕ್ಷಾ ಅವರು ತುಂಬ ಕ್ಯೂಟ್ ಆಗಿದ್ದಾರೆ. ಅವರಿಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣುತ್ತಾರೆ"ಜಿಕೆ, ಆಕಾಂಕ್ಷಾ ಮೇಡ್ ಫಾರ್ ಈಚ್ ಅದರ್" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಅತ್ಯುತ್ತಮ ಜೋಡಿ, ಅವರು ಪ್ರಬುದ್ಧರು, ಮಗುವಿನಂತೆ," ಎಂದು ಕಮೆಂಟ್ ಮಾಡಿದ್ದಾರೆ.
ಆರಂಭದಲ್ಲಿ ಸೈಲೆಂಟ್ ಆಗಿದ್ದ ಗೌರವ್ ಖನ್ನಾ ಈಗ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಯಾರು ಶೋ ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.