
ಬೆಂಗಳೂರು (ನ.18) ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ 12ನೇ ಆವೃತ್ತಿ ಆರಂಭದಿಂದಲೇ ವಿವಾದಗಳನ್ನೇ ಸುತ್ತಿಕೊಂಡಿದೆ. ನಿಮಯ ಉಲ್ಲಂಘನೆಯಿಂದ ಎರಡು ದಿನ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿತ್ತು. ಈ ವಿವಾದ ತಣ್ಣಗಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿ, ನಟ ಗಿಲ್ಲಿ ವಿರುದ್ದ ಮಹಿಳಾ ಆಯೋಗಕ್ಕೆ ದೂರು ದಾಖಲಿಸಲಾಗಿದೆ. ಮಹಿಳೆಯರಿಗೆ ನಟ ಗಿಲ್ಲಿ ಅಗೌರವ ನೀಡುತ್ತಿದ್ದಾರೆ ಎಂದು ರಂಗಭೂಮಿ ಕಲಾವಿದೆ ಕುಶಲ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದೀಗ ತಮ್ಮ ದೂರು, ರಿಯಾಲಿಟಿ ಶೋನಲ್ಲಿ ನಡೆಯುತ್ತಿರುವ ಅಗೌರವದ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಮಹಿಳೆಯರಿಗೆ ಅವಮಾನ ಮಾಡದೇ ನಡೆಸಲು ಸಾಧ್ಯವಿಲ್ಲ ಎಂದರೆ ಕಾರ್ಯಕ್ರಮ ಬಂದ್ ಮಾಡಲು ವಾರ್ನಿಂಗ್ ನೀಡಿದ್ದಾರೆ.
ಗಿಲ್ಲಿ ನಟ ಮಹಿಳೆಯರಿಗೆ ತುಂಬ ಅವಮಾನ ಮಾಡುತ್ತಿದ್ದಾನೆ.ಗಿಲ್ಲಿ ನೀನು ಸಮಾಜಕ್ಕೆ ಏನು ಮೆಸೇಜ್ ಕೊಡೋಕೆ ಹೋಗ್ತಿದ್ದಿಯಾ? ಆತ ಮಹಿಳೆಯರ ಬಳಿ ಮಾತ್ರ ಜಗಳ ಆಡುತ್ತಾನೆ. ವಾರದ ಅಂತ್ಯದಲ್ಲಿ ಬರುವ ಕಿಚ್ಚನ ಪಂಚಾಯಿತಿ ಕಟ್ಟೆಯಲ್ಲಿ ಇದನ್ನು ಸರಿಯಾಗಿ ಪ್ರಶ್ನೆ ಮಾಡಿಲ್ಲ. ಮಹಿಳೆಯರ ಬಟ್ಟೆ ಮುಟ್ಟಲು ಯಾರು ಅಧಿಕಾರ ಕೊಟ್ಟರು.ಆತ ಮಹಿಳೆಯರಿಗೆ ಅಗೌರವ ತೋರಿಸಿದ್ದ ಸಹಿಸಲು ಸಾಧ್ಯವಿಲ್ಲ ಎಂದು ಕುಶಲ ಹೇಳಿದ್ದಾರೆ.
ನಾನು 12 ಸೀಸನ್ ನೋಡಿದ್ದೀನಿ. ಇದೇ ಸೀಸನ್ ನಲ್ಲಿ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೆ ಬಿಗ್ ಬಾಸ್ ತಂಡ ಏನು ಮಾಡುತ್ತಿದೆ ಎಂದು ಕುಶಲ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ಮಾಡೋ ತಮಾಷೆಗೆ ನಗುನೆ ಬರೋದಿಲ್ಲ. ಚಾನೆಲ್ TRP ಗೋಸ್ಕರ ಎನ್ ಬೇಕಾದ್ರು ಮಾಡಿ. ಆದ್ರೆ ಮಹಿಳೆಯರಿಗೆ ಅಗೌರವ ತೋರೋದು ಬಿಡಿ. ನಿಮಗೆ ಸರಿಯಾದ ರೀತಿಯಲ್ಲಿ ಶೋ ನಡೆಸಲು ಸಾಧ್ಯವಾಗದಿದ್ದರೆ ಬಂದ್ ಮಾಡಿ ಎಂದು ಕುಶಲ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಎಪಿಸೋಡ್ ನಲ್ಲಿ ಅಶ್ವಿನಿ ಕ್ಷಮೆ ಕೇಳೋಕೆ ಬಂದ್ರೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾನೆ. ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದೀನಿ. ಕ್ರಮ ತೆಗೆದುಕೊಂಡಿಲ್ಲ ಅಂದ್ರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಕುಶಲ ಎಚ್ಚರಿಸಿದ್ದಾರೆ.
ಬಿಗ್ ಬಾಸ್ 12ನೇ ಆವೃತ್ತಿ ಆರಂಭದಿಂದಲೂ ಒಂದಲ್ಲಾ ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಿದೆ. ಹಾಗಂತ ಕನ್ನಡ ಬಿಗ್ ಬಾಸ್ ವಿವಾದಕ್ಕೆ ಗುರಿಯಾಗುವುದು ಇದೇ ಮೊದಲಲ್ಲ. ಆದರೆ ಈ ಬಾರಿ ಮಾತ್ರ ತಾರಕಕ್ಕೇರಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.