ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ತೀವ್ರ ರಂಪಾಟ, ಕಾಲಿನಿಂದ ಒದ್ದು ನಿಯಮ ಉಲ್ಲಂಘನೆ ವಿವಾದ

Published : Nov 28, 2025, 03:03 PM IST
Malti Chahar Farrhana Bhat argument

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ತೀವ್ರ ರಂಪಾಟ, ಕಾಲಿನಿಂದ ಒದ್ದು ನಿಯಮ ಉಲ್ಲಂಘನೆ ವಿವಾದ ಭುಗಿಲೆದ್ದಿದೆ. ಅಗೌರವ ತೋರಿದ ಸ್ಪರ್ಧಿಗೆ ಕಾಲಿನಿಂದಲೇ ಒದ್ದು ಝಾಡಿಸಿದ ಘಟನೆ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಏನಿದು ವಿವಾದ? 

ಮುಂಬೈ (ನ.28) ಬಿಗ್ ಬಾಸ್ ಸ್ಪರ್ಧೆ ತೀರ್ವಗೊಂಡಿದೆ. ಕೆಲ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಫಿನಾಲೆಯಲ್ಲಿ ಕಾಣಿಸಿಕೊಳ್ಳಲು ಸ್ಪರ್ಧಿಗಳು ತಮ್ಮ ಆಟದ ಗತಿ ಬದಲಿಸಿದ್ದಾರೆ. ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದೆ. ಇದರ ನಡುವೆ ಇದೀಗ ಬಿಗ್ ಬಾಸ್ ಮನೆಯಲ್ಲಿ ರಂಪಾಟವೇ ನಡೆದುಹೋಗಿದೆ. ಅಗೌರವ ತೋರಿದ್ದಾರೆ ಎಂದು ಬಿಗ್ ಸ್ಪರ್ಧಿಗೆ ಕಾಲಿನಿಂದ ಒದ್ದ ಘಟನೆ ಮನೆಯೊಳಗೆ ನಡೆದಿದೆ. ಈ ಘಟನೆ ನಡೆದಿರುವುದು ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾಲ್ತಿ ಚಹಾರ್ ಮತ್ತೊರ್ವ ಸ್ಪರ್ಧಿ ಫರಾನ ಭಟ್‌ಗೆ ಕಾಲಿನಿಂದ ಒದ್ದಿದ್ದಾರೆ. ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಫರಾನ ಭಟ್ ಅಗೌರವಕ್ಕೆ ತಿರುಗೇಟು ನೀಡುವಾಗ ಈ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇಂದಿನ ಬಿಗ್ ಬಾಸ್‌ನಲ್ಲಿ ಬೆಂಕಿ ಆಟ

ಹಿಂದಿ ಬಿಗ್ ಬಾಸ್ 19ರ ಕಾರ್ಯಕ್ರಮದ ಇಂದಿನ ಸ್ಪರ್ಧಿಗಳ ಆಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ರಿಲೀಸ್ ಮಾಡಿದ ಪ್ರೋಮೋದಲ್ಲಿ ಈ ಘಟನೆ ದೃಶ್ಯಗಳು ಇದೀಗ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಮನೆಯಲ್ಲಿ ಬಾರಿ ವಾಗ್ವಾದಗಳು ನಡೆದಿರುವುದು ಸ್ಪಷ್ಟವಾಗಿದೆ. ಮಾಲ್ತಿ ಚಹಾರ್ ಹಾಗೂ ಫರಾನ ಭಟ್ ನಡುವಿನ ಜಗಳ ಇದೀಗ ತಾರಕಕ್ಕೇರಿದೆ. ಅಷ್ಟಕ್ಕೂ ಏನಿದು ಜಗಳ

ಮಾಲ್ತಿ ಚಹಾರ್ ಟಿಶ್ಯೂ ಮೇಲೆ ಕಾಲಿಟ್ಟ ಫರಾನಾ ಭಟ್

ಈ ಪ್ರೋಮೋದ ಆರಂಭದಲ್ಲಿ ಸೋಫಾ ಮೇಲೆ ಕುಳಿತುಕೊಂಡಿರುವ ಫರಾನ್ ಭಟ್, ಪಕ್ಕದಲ್ಲೇ ಇದ್ದ ಗೌರವ್ ಖನ್ನಾ ಬಳಿ ಮಾಲ್ತಿ ಕುರಿತು ಆಕ್ರೋಶ ಹೊರಹಾಕಿದ್ದಾಳೆ. ಮಾಲ್ತಿ ಚಹಾರ್ ಮತ್ತೆ ಟಿಶ್ಯೂ ಬಿಟ್ಟು ಹೋಗಿದ್ದಾಳೆ. ಟೇಬಲ್ ಮೇಲೆ ಬಿಟ್ಟು ತೆರಳಿದ್ದಾಳೆ ಎಂದು ಫರಾನ ಆಕ್ರೋಶ ಹೊರಹಾಕಿದ್ದಾಳೆ. ಇತ್ತ ಮಾಲ್ತಿ ಚಹಾರ್ ತಾನು ಬಿಟ್ಟು ಹೋಗಿದ್ದ ಟಿಶ್ಯೂ ಪೇಪರ್ ಸಂಗ್ರಹಿಸಲು ಬಂದಾಗ ಫರಾನ ತನ್ನ ಕಾಲುಗಳನ್ನು ಇದೇ ಟಿಶ್ಯೂ ಪೇಪರ್ ಮೇಲಿಟ್ಟು ದರ್ಪ ತೋರಿದ್ದಾಳೆ.

ಎರಡು ಕಾಲಿಟ್ಟು ದರ್ಪ ತೋರಿದ ಫರನಾ

ಫರನಾ ಭಟ್ ತಾನು ಸಂಗ್ರಹಿಸಲು ಬಂದ ಟಿಶ್ಯೂ ಮೇಲೆ ಕಾಲಿಟ್ಟಾಗ ಮಾಲ್ತಿ ಚಹಾರ್ ಆಕ್ರೋಶಗೊಂಡಿದ್ದಾಳೆ. ಆಕ್ರೋಶದಿಂದಲೇ ಕಾಲು ತೆಗೆಯಲು ಸೂಚಿಸಿದ್ದಾಳೆ. ಆದರೆ ಕಾಲು ತೆಗೆಯಲು ನಿರಾಕರಿಸಿದ ಫರನಾ ಮತ್ತೊಂದು ಕಾಲು ಒಟ್ಟು ಎರಡು ಕಾಲು ಟಿಶ್ಯೂ ಮೇಲೆ ಇಟ್ಟಿದ್ದಾಳೆ. ಇದು ಮಾಲ್ತಿ ಚಹಾರ್ ಪಿತ್ತ ನೆತ್ತಿಗೇರುವಂತೆ ಮಾಡಿದೆ. ತಾಳ್ಮೆ ಕಳೆದುಕೊಂಡ ಮಾಲ್ತಿ ಚಹಾರ್ ಟೇಬಲ್‌ಗೆ ಕಾಲಿನಿಂದ ಒದ್ದಿದ್ದಾರೆ. ಆಕ್ರೋಶದಲ್ಲಿ ಒದ್ದಾಗ ಟೇಬಲ್ ಮಾತ್ರವಲ್ಲ ಫರಾನಾ ಭಟ್ ಕಾಲಿಗೂ ಒದ್ದಿದ್ದಾರೆ.

ಮನೆಯಿಂದ ಹೊರ ದಬ್ಬುತ್ತೇನೆ ಎಂದು ಆಕ್ರೋಶ

ಮಾಲ್ತಿ ಚಹಾರ್ ಕಾಲಿನಿಂದ ಒದ್ದ ಬೆನ್ನಲ್ಲೇ ಫರಾನ ಭಟ್ ಆಕ್ರೋಶಗೊಂಡಿದ್ದಾರೆ. ಈ ರೀತಿ ನನ್ನ ಜೊತೆ ವರ್ತನೆ ತೋರಿದರೆ ಮನೆಯಿಂದ ಹೊರದಬ್ಬುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಇತ್ತ ಮಾಲ್ತಿ ಕೂಡ ವಾಗ್ವಾದ ಆರಂಭಿಸಿದ್ದಾರೆ, ರಸ್ತೆ ಬದಿಯಲ್ಲಿರುವ ವ್ಯಕ್ತಿಗಳ ನಿನಗಿಂತ ಉತ್ತಮ ಮ್ಯಾನರ್ಸ್ ಹೊಂದಿದ್ದಾರೆ ಎಂದಿದ್ದಾರೆ. ಅಲ್ಲಿಗೆ ಇಬ್ಬರ ಜಗಳ ತಾರಕಕ್ಕೇರಿದೆ. ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ. ಈ ಪ್ರೋಮೋದಲ್ಲಿ ಮಾಲ್ತಿ ಚಹಾರ್ ಹಾಗೂ ಫರನಾ ಭಟ್ ನಡುವಿನ ಜಗಳವೇ ಪ್ರಮುಖ ಹೈಲೈಟ್ಸ್.

ವೀಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ

ಈ ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ. ಹಲವರು ಫರಾನಾ ಭಟ್ ನಡೆದುಕೊಂಡ ರೀತಿಗೆ ಆಕ್ರೋಶ ಹೊರಹಾಕಿದ್ದಾರೆ. ಕಾಲು ಮೇಲಿಟ್ಟು ದರ್ಪ ತೋರಿದ ಕಾರಣ ಮಾಲ್ತಿ ಚಹಾರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಗೆ ಫರನಾ ಭಟ್ ಕಾರಣ ಎಂದು ಹಲವರು ಟೀಕಿಸಿದ್ದಾರೆ. ಇತ್ತ ಕಾಲಿಟ್ಟಿದ್ದು ತಪ್ಪು, ಆದರೆ ಕಾಲಿನಿಂದ ಒದ್ದಿರುವುದು ಇನ್ನಷ್ಟು ತಪ್ಪು ಎಂದು ಸಮತೋಲನ ಕಾಪಾಡಿಕೊಂಡಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!