ಬಿಗ್ ಬಾಸ್‌ ಸ್ಪರ್ಧಿ ಕಾರಿನ ಮೇಲೆ ದಾಳಿ; ಕಾರಿನ ಟೈಯರ್‌ ಪೀಸ್ ಪೀಸ್

Published : Jul 06, 2020, 11:18 AM IST
ಬಿಗ್ ಬಾಸ್‌ ಸ್ಪರ್ಧಿ ಕಾರಿನ ಮೇಲೆ ದಾಳಿ; ಕಾರಿನ ಟೈಯರ್‌ ಪೀಸ್ ಪೀಸ್

ಸಾರಾಂಶ

ಬಿಗ್ ಬಾಸ್‌ ಸ್ಪರ್ಧಿ ಹಿಮಾನ್ಶಿ ಖುರಾನಾ ಕಾರಿನ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ರಾತ್ರೋರಾತ್ರಿ ಕಾರಿನ ಟೈಯರ್‌ ಹರಿದಿದ್ದಾರೆ. ಘಟನೆ ಬಗ್ಗೆ ನಟಿ ನೀಡಿದ ಹೇಳಿಕೆ ಇದು.....

ಹಿಂದಿ ಬಿಗ್ ಬಾಸ್ ಸೀಸನ್ 15ರ ಸ್ಪರ್ಧಿ ಹಿಮಾನ್ಶಿ ಖುರಾನಾ  ಕಿರುತೆರೆಯಲ್ಲಿ  ಪಾಪ್ಯೂಲರ್ ನಟಿಯಾಗಿದ್ದಾರೆ. ಆಕೆ ಎಲ್ಲೇ ಹೋದರು ಏನೇ ಮಾಡಿದರು ಸುದ್ದಿಯಾಗುತ್ತದೆ. ಇನ್ನು ಲಾಕ್‌ಡೌನ್‌ನಲ್ಲಂತೂ ಕೇಳೊದೇ ಬೇಡ ನೆಚ್ಚಿನ ನಟಿಯ ವರ್ಕೌಟ್, ಕುಕ್ಕಿಂಗ್ ಮತ್ತು ಹಳೆ ಟ್ರ್ಯಾವಲ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿತ್ತು. 

ಇನ್ನು ಲಾಕ್‌ಡೌನ್‌ ಮುಗಿದ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡ ಹಿಮಾನ್ಶಿ ಚಂಡೀಗಡಕ್ಕೆ ತೆರಳಿದ್ದಾರೆ. ಎಷ್ಟು ಫೇಮ್‌ ಇದ್ಯೋ  ಅಷ್ಟೇ ಹೇಟರ್ಸ್‌ ಹೊಂದಿರುವ ಹಿಮಾನ್ಶಿ ಕಾರಿನ ಮೇಲೆ ರಾತ್ರೋರಾತ್ರಿ ದಾಳಿ ಮಾಡಲಾಗಿದೆ. ಇದರ ಬಗ್ಗೆ ಹಿಮಾನ್ಶಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಏನು ಮಾಡೋಕೆ ಆಗಲ್ಲ:

'ನಿನ್ನೆ ರಾತ್ರಿ ಯಾರೋ ನನ್ನ ಕಾರಿನ ಟೈಯರ್ ಹರಿದಿದ್ದಾರೆ. ನಾನು ಶೂಟಿಂಗ್‌ಗೆಂದು ಚಂಡೀಗಡದ ಹಳ್ಳಿಯೊಂದರಲ್ಲಿ ಇರುವೆ. ನೀವು ನಿಮ್ಮನ್ನು ಏನೆಂದುಕೊಂಡಿದ್ದೀರಾ? ನನ್ನ ಮೇಲೆ ಸುಲಭವಾಗಿ ದಾಳಿ ಮಾಡಬಹುದು ಅಂತ ನೀವು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ . ಇಂಥ ಸಣ್ಣಪುಟ್ಟ ನೀಚ ಬುದ್ಧಿಗಳು ಮಾಡುವ ಕೆಲಸದಿಂದ ನನ್ನ ಕಾರ್ಯಕ್ಕೆ ಯಾವುದೇ ರೀತಿಯ ಅಡ್ಡಿ ಮಾಡಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ.

ಲವ್‌ ಸ್ಟೋರಿ:

ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡ ಹಿಮಾನ್ಶಿ, ಅಲ್ಲಿದ್ದ ಮಾಡಲ್ ಕಮ್ ನಟ ಆಸಿಂ ಜೊತೆ ವಿಶೇಷವಾದ ಬಾಂಡ್‌ ಬೆಳೆಯುತ್ತದೆ. ರಿಯಾಲಿಟಿ ಶೋ ಅಂತ್ಯಗೊಳ್ಳುವಷ್ಟರಲ್ಲಿ ಇಬ್ಬರು ಪ್ರೀತಿಸಲು ಆರಂಭಿಸುತ್ತಾರೆ. ಶೋ ನಂತರವೂ ಇಬ್ಬರು ಅನೇಕ ಮ್ಯೂಸಿಕ್‌ ಆಲ್ಬಂನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೆಲ ಮಾಧ್ಯಮಗಳು ಹಿಮಾನ್ಶಿಯನ್ನು ಅಸೀಂ ಗರ್ಲ್‌ಫ್ರೆಂಡ್‌ ಎಂದು ಉದ್ದೇಶಿಸಿ ಮಾತನಾಡಲು ಆರಂಭಿಸಿದರು. ಈ ಬಗ್ಗೆ ಟ್ಟಿಟ್ಟರ್‌ನಲ್ಲಿ ಹಿಮಾನ್ಶಿ ಪ್ರತಿಕ್ರಿಯೆ ನೀಡಿದ್ದಾರೆ.

 

'ಯಾಕೆ ಎಲ್ಲರೂ ನನ್ನನ್ನು ಅಸಿಂ ಗರ್ಲ್‌ಫ್ರೆಂಡ್‌ ಎಂದು ಉದೇಶಿಸುತ್ತೀರಾ ಅದರ ಬದಲು ಅಸಿಂ ನನ್ನ ಬಾಯ್‌ಫ್ರೆಂಡ್‌ ಎಂದು ಹೇಳಿ. ನನಗೆ ಗೊತ್ತು ಇದು ಕಳಂಕ ತರುವ ವಿಚಾರವಲ್ಲ ಆದರೆ ಹೆಣ್ಣುಮಕ್ಕಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೂ ಅವರದೇ ಆದ ವಿಭಿನ್ನ ವ್ಯಕ್ತಿತ್ವ ಇರುತ್ತದೆ. ಯಾಕೆ ಯಾವಾಗಲೂ  ಗಂಡಸರ ಹೆಸರು ಮೊದಲಿರಬೇಕು?' ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಅಮವಾಸ್ಯೆ ಕಳೆ ಹೆಚ್ಚಿಸಿದ ನಟಿ-ನಟಿಯರು!
Karna Serial ಊಹಿಸದ ಟ್ವಿಸ್ಟ್​: ಅತ್ತ ಕರ್ಣನ ರಹಸ್ಯ ಅಪ್ಪಂಗೆ ಗೊತ್ತಾಯ್ತು, ಇತ್ತ ಅಮ್ಮನ ಜಾಡು ಹಿಡಿದು ಹೊರಟ ಮಗ