ಬಿಗ್‌ಬಾಸ್ ಶೋನಲ್ಲಿ ಒಂದು ಕಡೆ ವಿನಯ್ ಬಗ್ಗೆ ತಾರಾಮಾರ ನೆಗೆಟಿವ್ ಕಮೆಂಟ್‌ಗಳು ಹೆಚ್ಚಾಗ್ತಿದ್ರೆ, ಇನ್ನೊಂದು ಕಡೆ ಅವರ ಪತ್ನಿ ಅಕ್ಷತಾ ನನ್ನ ಪತಿ ಕೆಟ್ಟವರಲ್ಲ, ಉದ್ದೇಶಪೂರ್ವಕವಾಗಿ ಅವರನ್ನು ಹಾಗೆ ಬಿಂಬಿಸಲಾಗ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಈಗ ವಿನಯ್‌ದೇ ಹವಾ. ಈ ಕಂಟೆಸ್ಟೆಂಟ್ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ನೆಗೆಟಿವ್ ಕಮೆಂಟ್ ಕೇಳಿ ಬರ್ತಿದೆ. ಇನ್ನೊಂದು ಕಡೆ ಸೋಷಿಯಲ್ ಮೀಡಿಯಾಗಳಲ್ಲಿ ಜನ ಇವ್ರಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಆದರೆ ವಿನಯ್ ಪತ್ನಿಗೆ ಮಾತ್ರ ಇದರಿಂದ ಸಿಕ್ಕಾಪಟ್ಟೆ ನೋವಾಗಿದೆ. ವಿನಯ್ ಕೆಟ್ಟವರಲ್ವೇ ಅಲ್ಲ. ಅವರು ತುಂಬ ಒಳ್ಳೆಯವರು ಅಂತ ಆಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಜೊತೆಗೆ ವಿನಯ್ ಬಗ್ಗೆ ಒಂದಿಷ್ಟು ಇತರ ವಿಚಾರಗಳನ್ನೂ ಹೊರಹಾಕಿದ್ದಾರೆ.
ಹಾಗೆ ನೋಡಿದರೆ ಕಳೆದ ಮೂರು ವಾರಗಳಿಂದ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳ ಗಲಾಟೆ ಜೋರಾಗುತ್ತಿದೆ. ವಿನಯ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತೋಷ್ ಸೇರಿದಂತೆ ಹಲವು ಮಂದಿ ಕೊನೆ ಸುತ್ತು ಪ್ರವೇಶಿಸುವ ಪ್ರಬಲ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಅದರಲ್ಲೂ ವಿನಯ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಅನಿಸಿಕೊಂಡಿದ್ದಾರೆ.
ಆದರೆ ವಿನಯ್ ಅವರ ಒಂದು ಸ್ವಭಾವ ಬಿಗ್ ಬಾಸ್ ಮನೆಯವರಿಗೆ ಮಾತ್ರ ಅಲ್ಲ ವೀಕ್ಷಕರಿಗೂ ಸಿಕ್ಕಾಪಟ್ಟೆ ಸಿಟ್ಟು ತರಿಸಿದೆ. ವಿನಯ್ ಏರು ಧ್ವನಿಯಲ್ಲಿ ಮಾತಾಡುತ್ತಾ ಬಿಗ್ ಬಾಸ್ ಮನೆಯಲ್ಲಿ ಡಾಮಿನೇಟ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಕಿಚ್ಚ ಸುದೀಪ್ ಕೂಡ ವಿನಯ್ ಬಗ್ಗೆ ಮಾತಾಡಿದ್ದರು. ಆದ್ರೀಗ ಬಿಗ್ ಬಾಸ್‌ನಲ್ಲಿ ವಿನಯ್ ಅವರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಅವರ ಪತ್ನಿ ಅಕ್ಷತಾ ವಿನಯ್ ಆರೋಪ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರನ್ನು ಬಿಂಬಿಸುತ್ತಿರುವ ರೀತಿ ಖುಷಿಯಿಲ್ಲ ಎಂದು ಅಕ್ಷತಾ ವಿನಯ್ ಕಣ್ಣೀರು ಹಾಕಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಬಿಗ್ ಬಾಸ್ ಹಾಗೂ ಕಲರ್ಸ್ ಕನ್ನಡ ಚಾನೆಲ್ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ.
ಸೀರಿಯಲ್ ಒಂದೇ ಅನ್ನ ಹಾಕಿಲ್ಲ; ವಿನಯ್ ಗೌಡ ದುರಹಂಕಾರಕ್ಕೆ ಬ್ರೇಕ್ ಹಾಕುವಂತೆ ನೆಟ್ಟಿಗರಿಂದ ಒತ್ತಾಯ!
ವಿನಯ್ ಬಿಗ್ ಬಾಸ್ (Bigboss) ಮನೆಗೆ ಹೋಗಿದ್ದು ಖುಷಿಯಿದೆ. ಆದರೆ, ಅವರನ್ನು ತೋರಿಸುತ್ತಿರೋದು ಖುಷಿಯಿಲ್ಲ. ಅವರನ್ನು ಬಿಂಬಿಸುತ್ತಿರುವ ರೀತಿ ಖುಷಿಯಿಲ್ಲ. ಯಾಕೆ ಆ ರೀತಿ ಮಾಡುತ್ತಿದ್ದಾರೆ ಅನ್ನೋ ಬಗ್ಗೆ ನನಗೆ ತುಂಬಾನೇ ಬೇಜಾರಿದೆ. ಅವರೆಲ್ಲರನ್ನು ನೋಡಿದರೆ ವಿನಯ್ ಮಾತ್ರ ಡಿಫರೆಂಟ್ ಆಗಿದ್ದಾರೆ ಅಂತ ಅನಿಸುತ್ತೆ. ಮನೆಯೊಳಗೆ ಎಲ್ಲರೊಂದಿಗೂ ಫ್ರೆಂಡ್ಲಿಯಾಗಿದ್ದಾರೆ (friendlyness). ಆ ಬಗ್ಗೆ ಖುಷಿಯಾಗಿದೆ. ಆದರೆ, ಯಾಕೆ ಹೀಗೆ ಬಿಂಬಿಸುತ್ತಿದ್ದಾರೆ ಅಂತ ಬೇಜಾರಿದ. ಅವರ ಒಳ್ಳೆತನವನ್ನು ಹೈಲೈಟ್ ಮಾಡುತ್ತಿಲ್ಲ. ಮನೆಯಲ್ಲಿ ಇದ್ಮೇಲೆ ಕತ್ತೆ ಅನ್ನೋದು ಅದು ಇದೂ ಅಂತ ಮಾತಾಡುತ್ತಾರೆ. ತಮಾಷೆಗೂ ಅದನ್ನು ಹೇಳಬಹುದು. ತಮಾಷೆಗೆ ಹೇಳಿರುವುದನ್ನೂ ಸೀರಿಯಸ್ ಆಗಿ ತೆಗೆದುಕೊಂಡು ಅದನ್ನೇ ಪ್ರೋಮೊ (promo) ಮಾಡಿ ಹಾಕುತ್ತಿದ್ದಾರೆ. ಅದ್ಯಾಕೆ ಅಂತ ಕೇಳೋಣ ಅಂತ ಚಾನೆಲ್‌ಗೆ ಬಹಳಷ್ಟು ಬಾರಿ ಫೋನ್ ಮಾಡಿದೆ. ಆದರೆ, ಅವರು ಪ್ರತಿಕ್ರಿಯೆ ನೀಡಲಿಲ್ಲ' ಎಂದು ಅಕ್ಷತಾ ನೋವು ತೋಡಿಕೊಂಡಿದ್ದಾರೆ.
'ನಾನು ಎರಡು ವಾರ ಕಾದೆ. ಮೂರನೇ ವಾರನೂ ಕಂಟಿನ್ಯೂ ಆಯ್ತು. ನಾಲ್ಕನೇ ವಾರ ಇನ್ನೂ ಹೆಚ್ಚಾಯ್ತು. ವಿನಯ್ ವಿನಯ್ ಅಂತಲೇ Promo ಬಿಡುತ್ತಿದ್ದಾರೆ ಹೊರತು, ಅಲ್ಲಿ ವಿನಯ್ ಬಗ್ಗೆ ಇವತ್ತಿನವರೆಗೂ ಒಳ್ಳೆಯದನ್ನು ತೋರಿಸಿಲ್ಲ. ವಿನಯ್ ಈ ರೀತಿ ತೋರಿಸೋ ಉದ್ದೇಶವಿರಲಿಲ್ಲ. ಆದರೂ ಯಾಕೆ ಹೀಗೆ ತೋರಿಸುತ್ತಿದ್ದಾರೋ ಗೊತ್ತಿಲ್ಲ. ಅವರು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅಂತ ವ್ಯಕ್ತಿ (person) ಅಲ್ಲ. ನನಗೆ ಅವರನ್ನು ಹಾಗೇ ನೋಡುವುದಕ್ಕೆ ಆಗುತ್ತಿಲ್ಲ. ಅಲ್ಲಿ ಅವರಿಗೆ ಮರ್ಯಾದೇನೆ ಇಲ್ಲ ಅನ್ನೋ ಹಾಗೆ ಮಾಡಿದ್ದಾರೆ' ಎಂದು ಅಕ್ಷತಾ ಕಣ್ಣೀರು ಹಾಕಿದ್ದಾರೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ನಯನಾ; ನವೆಂಬರ್‌ನಲ್ಲಿ ಹುಟ್ಟಿದ ಕನ್ನಡಾಂಬೆ ಎಂದ ನೆಟ್ಟಿಗರು!