
ಹಾರರ್ ಥ್ರಿಲ್ಲರ್ ಸಿನಿಮಾಗಳು ಅನೇಕ ಸಿನಿಮಾ ಪ್ರಿಯರ ಮೊದಲ ಆಯ್ಕೆ. ಆದರೆ ಒಂಟಿಯಾಗಿ ನೋಡುವುದೇ ಹೆದರಿಕೆ ಎನ್ನುವಂಥ ಹಲವು ಹಾರರ್ ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳು ಪ್ರಸ್ತುತ ಇವೆ. ಅಂತಹ ಎಂಟು ಎಪಿಸೋಡ್‌ಗಳ ವೆಬ್ ಸಿರೀಸ್ ಇತ್ತೀಚೆಗೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿದೆ. ಈ ಸಿರೀಸ್‌ನ ಎಲ್ಲಾ ಎಪಿಸೋಡ್‌ಗಳಲ್ಲಿ, ನಿಮಗೆ ದೆವ್ವ ಮತ್ತು ಮಾಟಗಾತಿಯ ದರ್ಶನವಾಗೋದು ಖಂಡಿತ. ಅಷ್ಟೇ ಅಲ್ಲ, ಈ ಸಿರೀಸ್‌ನ ಕಥೆ ತುಂಬಾ ಭಯಾನಕವಾಗಿದ್ದು, ನೀವು ಅದನ್ನು ಒಂಟಿಯಾಗಿ ನೋಡಲು ಬಹುತೇಕ ಸಾಧ್ಯವಿಲ್ಲ. ಒಟಿಟಿ ವೇದಿಕೆಯಲ್ಲಿ ಹವಾ ಸೃಷ್ಟಿಸಿದ ಆ ವೆಬ್ ಸಿರೀಸ್ ಯಾವುದು ಅನ್ನೋದರ ವಿವರ ಇಲ್ಲಿದೆ.
ನಾವು ಹೇಳುತ್ತಿರುವ ಹಾರರ್ ಥ್ರಿಲ್ಲರ್ ವೆಬ್ ಸಿರೀಸ್ ಹತ್ತು ದಿನಗಳ ಹಿಂದೆ ಬಿಡುಗಡೆಯಾಗಿದೆ. ಹಾಗೂ ಹತ್ತೇ ದಿನಗಳಲ್ಲಿ ಓಟಿಟಿ ವೇದಿಕೆಯಲ್ಲಿ ಹೆಚ್ಚು ವೀಕ್ಷಣೆ ಮಾಡಲ್ಪಟ್ಟ ವೆಬ್‌ಸಿರೀಸ್ ಎನಿಸಿಕೊಂಡಿದೆ. ಈ ಸಿರೀಸ್ ತುಂಬಾ ಭಯಾನಕವಾಗಿದ್ದು, ಇದನ್ನು ನೀವು ದೇವರ ನಾಮ ಜಪಿಸುತ್ತಲೇ ನೋಡಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಈ ಸಿರೀಸ್‌ನಲ್ಲಿ ದೆವ್ವಗಳನ್ನು ನೋಡುವ ಚಿಕ್ಕ ಹುಡುಗನ ಬಗ್ಗೆ ಕುತೂಹಲವಾಗೋದು ಖಂಡಿಯ. ಆತ ಆರಂಭದಲ್ಲಿ ತನಗಾದ ಅನುಭವವನ್ನು ನಂಬುವುದಿಲ್ಲ. ಆದರೆ ವಿಮಾನದಲ್ಲಿ ಅವನಿಗೆ ಒಂದು ಘಟನೆ ಸಂಭವಿಸಿದಾಗ, ಅವನು ಎಲ್ಲವನ್ನೂ ಪುನರ್ವಿಮರ್ಶಿಸಿಕೊಳ್ಳಬೇಕಾಗುತ್ತದೆ. ಅದರ ನಂತರ, ಅವನು ಪೈಲಟ್ ಆಗಿ ತನ್ನ ಕೆಲಸವನ್ನು ತ್ಯಜಿಸಿ ಬೇರೆ ಪ್ರಪಂಚದ ಜನರನ್ನು, ಅಂದರೆ ದೆವ್ವಗಳನ್ನು ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಆ ಮೂಲಕ ಅಲೆದಾಡುವ ಆತ್ಮಗಳು ಶಾಂತಿಯನ್ನು ಕಂಡುಕೊಳ್ಳಬೇಕು ಎಂದು ಆಶಿಸುತ್ತಾನೆ. ಆದರೆ ಅವನ ಈ ನಿರ್ಧಾರವು ಅವನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಅವನ ಸಾವಿಗೆ ಕಾರಣವಾಗುತ್ತದೆ.
ಈ ವೆಬ್ ಸಿರೀಸ್‌ನ ಹೆಸರು 'ಭಯ್'. ನಟ ಕರಣ್ ಥಕ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತವಾಗಿ ಈ ಸಿರೀಸ್ ರಚಿಸಲಾಗಿದೆ. 'ಭಯ್: ದಿ ಗೌರವ್ ತಿವಾರಿ ಮಿಸ್ಟರಿ' ಡಿಸೆಂಬರ್ 12 ರಂದು OTT ಪ್ಲಾಟ್‌ಫಾರ್ಮ್ ಅಮೆಜಾನ್ MX ಪ್ಲೇಯರ್‌ನಲ್ಲಿ ಬಿಡುಗಡೆಯಾಯಿತು. ಅಂದಿನಿಂದ, ಈ ಸಿರೀಸ್ OTT ನಲ್ಲಿ 'ನೋಡಲೇಬೇಕಾದ' ಸಿರೀಸ್ ಎನಿಸಿಕೊಂಡಿದೆ. ಈ ಸಿರೀಸ್ ಕಥೆ ತುಂಬಾ ಪ್ರಭಾವಶಾಲಿಯಾಗಿದ್ದು ಮತ್ತು ಅದರಲ್ಲಿನ ನಟರ ನಟನೆ ತುಂಬಾ ಅದ್ಭುತವಾಗಿದೆ, ಈ ಸಿರೀಸ್ IMDB ನಲ್ಲಿ ಹತ್ತರಲ್ಲಿ 8.4 ರ ಅದ್ಭುತ ರೇಟಿಂಗ್ ಅನ್ನು ಪಡೆದುಕೊಂಡಿದೆ. ನೀವು ಹಾರರ್ ಥ್ರಿಲ್ಲರ್ ವೆಬ್ ಸಿರೀಸ್ ನೋಡಲು ಇಷ್ಟಪಟ್ಟರೆ, ನೀವು ಖಂಡಿತವಾಗಿಯೂ ಈ ಇದನ್ನು ನಿಮ್ಮ ವಾಚ್ ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.