ಜಗದೀಶ್ ಅಲ್ವಂತೆ, ಬಿಗ್‌ಬಾಸ್ ಮನೆಯಲ್ಲಿರೋ ಡೇಂಜರಸ್ ಮ್ಯಾನ್ ಇವರಂತೆ!

By Mahmad Rafik  |  First Published Oct 6, 2024, 2:49 PM IST

ಬಿಗ್‌ಬಾಸ್ ಮನೆಯಲ್ಲಿ ಜಗದೀಶ್ ಅಲ್ಲ, ಬೇರೆಯವರೇ ಅಪಾಯಕಾರಿ ಎಂದು ಯಮುನಾ ಶ್ರೀನಿಧಿ ಹೇಳಿದ್ದಾರೆ.  ಆ ವ್ಯಕ್ತಿ ನಾಟಕ ಮಾಡುತ್ತಿದ್ದಾರೆ, ಅವರು ಅಪಾಯಕಾರಿ ಎಂದು ಯಮುನಾ ಹೇಳಿದ್ದಾರೆ.


ಬೆಂಗಳೂರು: ಮೊದಲ ದಿನದ ಆರಂಭದಿಂದಲೇ ಕನ್ನಡದ ಬಿಗ್‌ಬಾಸ್ ಮನೆ ಗದ್ದಲಗಳಿಂದಲೇ ಸದ್ದು ಮಾಡುತ್ತಿದೆ. ಈಗಾಗಲೇ ಎಲ್ಲಾ ಸ್ಪರ್ಧಿಗಳು ಕರುನಾಡಿನ ಜನತೆಗೆ ಪರಿಚಯವಾಗಿದ್ದಾರೆ. ಇತ್ತ ಮನೆಯಲ್ಲಿರೋ ಸ್ಪರ್ಧಿಗಳು ತಮ್ಮ ಜೊತೆಯಲ್ಲಿರುವ ಸಹಸ್ಪರ್ಧಿಗಳು ಹೇಗೆ ಎಂಬುದರ ಬಗ್ಗೆ ತಿಳಿದುಕೊಂಡಿರುತ್ತಾರೆ. ಮೊದಲ ದಿನದಿಂದಲೇ ಸ್ಪರ್ಧಿ ಜಗದೀಶ್ ತಮ್ಮ ವಿಚಿತ್ರ ವರ್ತನೆಯಿಂದ ಇಡೀ ಮನೆಯವರಿಗೆ ಬೇಡವಾದ ಆಟಗಾರಗಿದ್ದಾರೆ. ಮೊದಲ ವಾರದಲ್ಲಿಯೇ ನಾನು ಮನೆಯಿಂದ ಹೊರಗೆ ಹೋಗಬೇಕು ಅಂತ ಜಗದೀಶ್ ಬ್ಯಾಗ್ ಪ್ಯಾಕ್ ಮಾಡಿಕೊಂಡಿದ್ದರು. ಶನಿವಾರದ ಸಂಚಿಕೆಯಲ್ಲಿಯೇ ಅತಿರೇಕವಾಗಿ ಆಡ್ತಿದ್ದ ಜಗದೀಶ್ ಸರಿಯಾಗಿ ಕ್ಲಾಸ್ ತೆಗೆದುಕೊಂಡದ್ದರು. ಆದ್ರೆ ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿರುವ ಡೇಂಜರಸ್ ವ್ಯಕ್ತಿ ಜಗದೀಶ್ ಅಲ್ಲ ಎಂದು ಯಮುನಾ ಶ್ರೀನಿಧಿ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಬಿಗ್‌ಬಾಸ್ ಮನೆಯಲ್ಲಿರೋ ಡೇಂಜರಸ್ ವ್ಯಕ್ತಿ ಎಂದು ಯಮುನಾ ಕರೆದಿದ್ದು ಯಾರು ಎಂಬುದನ್ನು ನೋಡೋಣ ಬನ್ನಿ. 

ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಗಾರ್ಡನ್ ಏರಿಯಾದ ಬೆಂಚ್ ಮೇಲೆ ಹಂಸ ಮತ್ತು ಯಮುನಾ ಮಾತನಾಡುತ್ತಿರುತ್ತಾರೆ. ಮತ್ತೊಂದೆಡೆ ಗೌತಮಿ ಜಾಧವ್, ಭವ್ಯಾ ಗೌಡ, ಐಶ್ವರ್ಯಾ ಸಿಂಧೋಗಿ ಮತ್ತು ಉಗ್ರಂ ಮಂಜು ಕುಳಿತು ಮಾತನಾಡುತ್ತಾ ಕುಳಿತಿರೋದನ್ನು ತೋರಿಸಲಾಗುತ್ತದೆ. ಹಂಸಾ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲಿ ಯಮುನಾ ಶ್ರೀನಿಧಿಯವರು, ಬೆಳಗ್ಗೆ ಎದ್ದು ಸ್ನಾನ ಮಾಡಿಕೊಂಡು ಬಂದ ತಕ್ಷಣ ತಿಂಡಿ ರೆಡಿನಾ ಅಂತ ಕೇಳುತ್ತಾನೆ. ಅಡುಗೆಮನೆಯಲ್ಲಿ ಕ್ಯಾಮೆರಾ ಇದೆ ಅಂತ ಅಲ್ಲೇ ಇರ್ತಿವಿ ಅಂತ ಹೇಳುತ್ತಾನೆ. ಕಾರಣವಿಲ್ಲದೇ ಮೊದಲ ದಿನದಿಂದಲೂ ಆತ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೇನೆ ಎಂದು ಉಗ್ರಂ ಮಂಜು ವಿರುದ್ಧ ಯಮುನಾ ಆರೋಪ ಮಾಡುತ್ತಾರೆ. 

Tap to resize

Latest Videos

undefined

ಬಿಗ್‌ಬಾಸ್ ಎಂಟ್ರಿ ಪ್ರೋಮೋದಲ್ಲಿಯೇ ಅಚ್ಚರಿ ವಿಷಯ ಹಂಚಿಕೊಂಡ ಚೈತ್ರಾ ಕುಂದಾಪುರ!

ಈ ವೇಳೆ ಮಧ್ಯ ಪ್ರವೇಶಿಸಿದ ಹಂಸಾ, ಹೌದು, ಅವನು ನನ್ನನ್ನು ಸಹ ಟಾರ್ಗೆಟ್ ಮಾಡುತ್ತಿದ್ದಾನೆ ಎಂದು ಹೇಳುತ್ತಾರೆ. ತಮ್ಮ ಮಾತು ಮುಂದುವರಿಸಿದ ಯಮುನಾ, ಈ ನಡವಳಿಕೆ ಒಳ್ಳೆಯದಲ್ಲ, ನಿಮ್ಮ ಧ್ವನಿ ಕೇಳಿದ್ರೆ ಭಯ ಆಗುತ್ತೆ ಅಂತ ಎಲ್ಲರ ಮುಂದೆ ಹೇಳುತ್ತಾನೆ. ನಾನು ಡಾಮಿನೇಟ್ ಮಾಡುತ್ತೇನೆ ಎಂದು ಹೇಳಿ ಅದೇ ಕೆಲಸ ಆತ ಮಾಡುತ್ತಿದ್ದಾನೆ ನೋಡಿ ಎಂದು ಮಂಜು ಕಡೆ ಬೆರಳು ಮಾಡಿ ಯಮುನಾ ತೋರಿಸುತ್ತಾರೆ. 

ಉಗ್ರಂ ಮಂಜು ಗುಂಪು ಕಟ್ಟಿಕೊಂಡು ಡಾಮಿನೇಟ್ ಮಾಡುತ್ತಿದ್ದಾನೆ. ನಾನು ಎಲ್ಲವನ್ನು ಸಹಿಸಿಕೊಂಡು ಬರುತ್ತಿದ್ದೇನೆ. ಆತ ನಾಟಕದ ಮನುಷ್ಯ. ಈ ಮನೆಯಲ್ಲಿ ನಾಟಕ ಮಾಡುತ್ತಿರೋದು ಆತ ಒಬ್ಬನೇ. ಜಗದೀಶ್ ಇರೋದನ್ನು ಹೊರಗಿನ ಪ್ರಪಂಚಕ್ಕೆ ತೋರಿಸುತ್ತಾರೆ. ಆದ್ರೆ ಈ ಮನುಷ್ಯ ಹಾಗಲ್ಲ. ಇದು ಮೋಸ್ಟ್ ಡೇಂಜರಸ್, ಒಳಗೊಂದು-ಹೊರಗೊಂದು ಇರೋದು ತುಂಬಾ ಅಪಾಯಕಾರಿ ಎಂದು ಯಮುನಾ ಹೇಳುತ್ತಾರೆ. ಅತ್ತ ಉಗ್ರಂ ಮಂಜು ಸಹ ಗೌತಮಿ, ಭವ್ಯಾ ಹಾಗೂ ಐಶ್ವರ್ಯಾ ಮುಂದೆ ಯಮುನಾ ಬಗ್ಗೆ ಮಾತನಾಡುತ್ತಾರೆ. ಇದಾದ ನಂತರ ಯಮುನಾ ಬಳಿ ಬರುವ ಮಂಜು ಕ್ಷಮೆ ಕೇಳುತ್ತಾರೆ. ಆದ್ರೆ ಕ್ಷಮೆಯನ್ನು ಸ್ವೀಕರಿಸಲ್ಲ.

ಬಿಗ್‌ಬಾಸ್ ಮನೆಯಿಂದ ಹೊರ ಹೋಗುವ ಮೊದಲ ಸ್ಪರ್ಧಿ ಯಾರು?

click me!