
ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಅನಿತಾ ಹಾಗೂ ರೋಹಿತ್ ಫೇಬ್ರವರಿ 2021ರಲ್ಲಿ ಕುಟುಂಬಕ್ಕೆ ಲಿಟಲ್ ಸ್ಟಾರ್‌ನನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಸುವರ್ಣ ಸಂಕಲ್ಪ ಮತ್ತು ಬೊಂಬಾಟ್ ಭೋಜನ
ಅನಿತಾ ಪ್ರಗ್ನೆಂಟ್ ಎಂದು ತಿಳಿದಾಗ ರೋಹಿತ್ ಹೇಗೆ ರಿಯಾಕ್ಟ್ ಮಾಡಿದರು? ಅವರಿಬ್ಬರ ನಿರ್ಧಾರ ಏನಾಗಿತ್ತು, ಇದಕ್ಕೆ ಹೇಗೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಅಪ್ಲೋಡ್ ಆದ ಕೆಲವೇ ದಿನಗಳಲ್ಲಿ ಸುಮಾರು 1.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
'Oh my God ನಮಗೆ ಮಗುವಾಗುತ್ತಿದೆ' ಎಂದು ವಿಡಿಯೋ ಪ್ರಾರಂಭದಲ್ಲಿ ಅನಿತಾ ಕೂಗುತ್ತಾರೆ. ಆನಂತರ ಅಪರಿಚಿತ ವ್ಯಕ್ತಿ ರೂಪದಲ್ಲಿ ಯಾರೂ ಪ್ರಶ್ನೆ ಕೇಳಿದ ಧ್ವನಿ ಕೇಳಿಸುತ್ತದೆ. 'ಮಗುವನ್ನು ಬರ ಮಾಡಿಕೊಳ್ಳಲು ಇದು ಸರಿಯಾದ ಸಮಯವೆಂದು ಹೇಗೆ ಅನಿಸಿತು?' ಎಂಬ ಪ್ರಶ್ನೆ ಕೇಳಿ ಬರುತ್ತದೆ. 'ಇದೆಲ್ಲಾ ದೇವರು ನಮಗಾಗಿ ಮಾಡಿರುವ ಪ್ಲಾನ್. ಇದು ನಮಗೆ ಸರಿಯಾದ ಸಮಯ ಎನಿಸಿತು. ಸುಮಾರು 10 ವರ್ಷದಿಂದ ನಮ್ಮಿಬ್ಬರ ಪರಿಚಯವಿದೆ ಅದರಲ್ಲಿ ಮೂರು ವರ್ಷ ಪ್ರೀತಿಸಿದೆವು ಹಾಗೂ 7 ವರ್ಷ ವೈವಾಹಿಕ ಜೀವನವನ್ನು ಯಶಸ್ವಿಯಾಗಿ ಮುಗಸಿದ್ದೇವೆ. ಈ ಹಿಂದೆಯೂ ನಾವು 2020ಯಲ್ಲಿ ಫ್ಯಾಮಿಲಿ, ಮಗು ಬಗ್ಗೆ ಪ್ಲಾನ್ ಮಾಡಿದ್ದೆವು,' ಎಂದು ಅನಿತಾ ಹೇಳಿದ್ದಾರೆ.
ಅಮೆರಿಕನ್ ಕವಿತೆಗೆ ಸ್ವೀಡಿಷ್ ಹಾರ; ಲೋಕ ಗೆದ್ದ ಕವಿತೆ ಲೂಯಿಸ್ ಗ್ಲುಕ್
ಪ್ರಗ್ನೆನ್ಸಿ ವಿಚಾರ ತಿಳಿದು ರೋಹಿತ್ ರಿಯಾಕ್ಷನ್?
'ತುಂಬಾ ಸಂತೋಷವಾಯ್ತು. ನನ್ನ ತಂದೆಗೆ ಹುಷಾರಿರಲಿಲ್ಲ ಕಾರಣಾಂತರಗಳಿಂದ ನಾವು ಜೂನ್ 12ರಿಂದ ಗೋವಾದಲ್ಲಿದ್ದೆವು. ಅನಿತಾ ನಾನು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಳ್ಳುವೆ ಎಂದು ಹೇಳಿದಳು. ಕೆಲವು ನಿಮಿಷಗಳ ನಂತರ ಹೊರ ಬಂದು ನನ್ನ ಕಿವಿಯಲ್ಲಿ 'I think I am pregnant' ಎಂದು ಹೇಳಿದಳು,' ಎಂದು ರೋಹಿತ್ ಹೇಳಿದ್ದಾರೆ.
ಅನಿತಾ ಹೇಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ?
'ಇದರ ಬಗ್ಗೆ ನಾವು ಈಗಾಗಲೇ ಯಾವುದೇ ರೀತಿ ತಯಾರಿ ಮಾಡಿಕೊಂಡಿಲ್ಲ. ಆದರೆ ನಾನು ಗೂಗಲ್ ಮಾಡಿ ಕೆಲವೊಂದು ವಿಚಾರದ ಬಗ್ಗೆ ಗಮನ ಕೊಟ್ಟಿದ್ದೀನಿ. ಸ್ಟ್ರೆಚ್ ಮಾರ್ಕ್, ಡ್ರೈ ಸ್ಕಿನ್ ಎಲ್ಲವೂ ಆಗುತ್ತದೆ. ಅದರೆ ಅದೆಲ್ಲಾ ಆಗಬಾರದು ಅಂತ ಏನೇನೋ ಸೇವಿಸಿ ಮಗುವಿನ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಎನೇ ಇದ್ದರೂ ತಾಯಿತನವನ್ನು ಎಂಜಾಯ್ ಮಾಡಬೇಕೆಂದುಕೊಂಡಿರುವೆ' ಎಂದು ಅನಿತಾ ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.