
ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಯಾರಿಗೆ ಗೊತ್ತಿಲ್ಲ. ಚಿನಕುರುಳಿಯಂತೆ ಪಟಪಟನೆ ಮಾತನಾಡುವ ನಟಿ, ನಿರೂಪಕಿ ಅನುಶ್ರೀ, ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ಕಾರ್ಯಕ್ರಮಗಳ ಮನಮೆಚ್ಚಿದ ಆಂಕರ್. ಅನುಶ್ರೀಗೆ ಇರುವಷ್ಟು ಅಭಿಮಾನಿಗಳು ಕನ್ನಡದಲ್ಲಿ ಇನ್ನೊಬ್ಬರು ನಿರೂಪಕರಿಗೆ ಇರುವುದು ಸಂದೇಹವೇ ಎನ್ನಬಹುದು. ಅಂಥ ಆಂಕರ್ ಅನುಶ್ರೀ ಇಂದು, ಅಂದರೆ 30 ಮೇ 2024ರಂದು ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಸೀತಾ ಟಾರ್ಚರ್: ರಾಮ್, ನಿಂಗಿದು ಬೇಕಿತ್ತಾ ಮಗನೇ..ವಾಪಸ್ ಹೊಂಟೋಗು ಶಿವನೇ..!
ಹೌದು, ಇಂದು ಕನ್ನಡಿಗರ ಪ್ರೀತಿಯ ರವಿಮಾಮ ಅಂದರೆ ನಟ ವಿ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡದ ಹಲವು ತಾರೆಯರು, ಅಭಿಮಾನಿಗಳು ನಟ ರವಿಚಂದ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಜನುಮದಿನದ ಶುಭಾಶಯ ಕೋರಿದ್ದಾರೆ. ಅದರಂತೆ, ನಿರೂಪಕಿ ಅನುಶ್ರೀ ಕೂಡ ನಟ ರವಿಚಂದ್ರನ್ ಅವರಿಗೆ ಶುಭಾಶಯ ಕೋರಿದ್ದಾರೆ.
ಸ್ಯಾಂಡಲ್‌ವುಡ್ ಬಗ್ಗೆ ಹೀಗೆ ಹೇಳ್ಬಿಟ್ರಾ 'ದಿಯಾ' ನಟಿ ಖುಷಿ; ಅದರಲ್ಲೇನು ತಪ್ಪು ಅಂತೀರಾ?
ಹಾಗಿದ್ದರೆ ನಟಿ ಅನುಶ್ರೀ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಅದೇನು ಬರೆದುಕೊಂಡಿದ್ದಾರೆ ಗೊತ್ತಾ?
ಕನ್ನಡಿಗರ ಪ್ರೀತಿಯ Crazy Star…. ಪ್ರೀತಿಗೆ ಇವರೇ SuperStar
ರವಿಯಂತೇ ಹೊಳೆಯುವ ಚಂದ್ರನಂತೆ ಬೆಳಗುವ !!!!
@theravichandrav sir ಹುಟ್ಟು ಹಬ್ಬದ ಶುಭಾಶಯಗಳು …
Happiest bday Ravi sir🤗❤️🤗..'
ಎಂದು ಅನುಶ್ರೀ ಶುಭಾಶಯ ಕೋರಿದ್ದಾರೆ.
ದೇವಸ್ಥಾನದ ಪ್ರಸಾದಕ್ಕಾಗಿ ಕಾಯುತ್ತಿದ್ದ ರವಿ ಬಸ್ರೂರ್ ಲೈಫ್ ಟರ್ನಿಂಗ್ ಪಾಯಿಂಟ್ ಏನು?
ನಟಿ-ನಿರೂಪಕಿ ಅನುಶ್ರೀ ತಮ್ಮ ಆಂಕರಿಂಗ್ ಜೊತೆಜೊತೆಗೇ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಯಾವತ್ತೂ ಫುಲ್ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ಫೋಟೋಗಳು, ವೀಡಿಯೋಗಳು ಹಾಗೂ ಸಂದೇಶಗಳ ಮೂಲಕ ಟಚ್ ಇಟ್ಟುಕೊಳ್ಳುತ್ತಾರೆ. ಫ್ಯಾನ್ಸ್ ಫಾಲೋ ಮಾಡುತ್ತ ಅವರೂ ತಮ್ಮನ್ನು ಬಿಟ್ಟೂಬಿಡದೇ ಫಾಲೋ ಮಾಡುತ್ತಿರುವಂತೆ ನೋಡಿಕೊಳ್ಳುತ್ತಾರೆ.
ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.