ಅಮೃತಧಾರೆಗೆ 300: ಭೂಮಿಕಾ-ಗೌತಮ್​ ರೀಲ್​ ಜೋಡಿಯ ಪ್ರೇಮ ಪಯಣದ ವಿಶೇಷ ವಿಡಿಯೋ ರಿಲೀಸ್​

By Suchethana D  |  First Published Jun 12, 2024, 2:38 PM IST

ಅಮೃತಧಾರೆ ಸೀರಿಯಲ್​ 300ನೇ ಎಪಿಸೋಡ್​ಗೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ  ಗೌತಮ್​ ಮತ್ತು ಭೂಮಿಕಾರ  ಪ್ರೇಮ ಪಯಣದ   ವಿಶೇಷ ವಿಡಿಯೋ ರಿಲೀಸ್​ ಮಾಡಿದೆ ಜೀ ಕನ್ನಡ ವಾಹಿನಿ.
 


ಅಮೃತಧಾರೆ ಈ ಹೆಸರು ಕೇಳಿದರೆ ಸೀರಿಯಲ್​ ವೀಕ್ಷಕರಿಗೆ ಅದೇನೋ ಒಂಥರಾ ರೋಮಾಂಚನ ಆಗುವುದು ಇದೆ. ಕಾರಣ, ಮಧ್ಯ ವಯಸ್ಕರಾಗಿರುವ ಇಬ್ಬರ ನಡುವಿನ ಅಪರೂಪದ ಪ್ರೇಮ ಕಥೆ ಇದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ ಹಲವು ಸೀರಿಯಲ್​ಗಳಿಗಿಂತಲೂ ಭಿನ್ನವಾಗಿರುವ ಕಾರಣ, ಇದನ್ನು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಸೀರಿಯಲ್​ ಆಗಿದೆ. ಸದ್ಯ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್​ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ. ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಅಳುಮುಂಜಿ ಮಹಿಳೆಯರು, ವಿಲನ್​ಗಳೇ ಭರ್ಜರಿ ಗೆಲುವು ಸಾಧಿಸುತ್ತಿರುವುದನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಅಮೃತಧಾರೆ ನಿಜಕ್ಕೂ ಅಮೃತವನ್ನೇ ಉಣಬಡಿಸುತ್ತಿದೆ. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸದಾ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ. ವಿಲನ್​ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್​ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್​ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ.

ಈ ಸೀರಿಯಲ್​ ಎಲ್ಲರ ಮನ ಗೆಲ್ಲುವಲ್ಲಿ ಕಾರಣ, ಗೌತಮ್​ ಪಾತ್ರಧಾರಿ ರಾಜೇಶ್​ ಹಾಗೂ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್​ ಅವರ ಅಭಿನಯ. ಇವರು ರೀಲ್​ ಜೋಡಿಯಾಗಿದ್ದರೂ ರಿಯಲ್​ ದಂಪತಿಯ ರೀತಿಯಲ್ಲಿಯೇ ಕಣ್ಣಲ್ಲೇ ಆ್ಯಕ್ಟಿಂಗ್​ ಮಾಡುವ ಕಾರಣ ಇವರ ಅಭಿನಯಕ್ಕೆ ಮಾರುಹೋಗದವರೇ ಇಲ್ಲ. ಹಲವಾರು ಸೀರಿಯಲ್​ಗಳ ಜೋಡಿ ನೋಡಿದಾಗ ರಿಯಲ್​ ಲೈಫ್​ನಲ್ಲೂ ಮದ್ವೆಯಾಗಿ ಅನ್ನೋ ಸಲಹೆ ಸೋಷಿಯಲ್​  ಮೀಡಿಯಾಗಳಲ್ಲಿ ಬರುತ್ತಲೇ ಇರುತ್ತದೆ. ಆದರೆ ಗೌತಮ್​ ಮತ್ತು ಭೂಮಿಕಾ ಪಾತ್ರಧಾರಿಗಳಿಗೆ ಇದಾಗಲೇ ಮದುವೆಯಾಗಿರುವ ಕಾರಣ, ಅಭಿಮಾನಿಗಳು ಆ ಒಂದು ಮಾತನ್ನು ಹೇಳುವುದಿಲ್ಲ ಬಿಟ್ಟರೆ, ಇವರನ್ನು ರೀಲ್​ ದಂಪತಿ ಎಂದು ಅಂದುಕೊಂಡಿರುವುದಕ್ಕಿಂತಲೂ ರಿಯಲ್​ ಅಂದುಕೊಂಡವರೇ ಹೆಚ್ಚುಮಂದಿ, ಅಷ್ಟು ಅದ್ಭುತ ಅಭಿನಯ ಇವರಿಬ್ಬರದ್ದು.

Tap to resize

Latest Videos

ಕೋಟ್​ ಧರಿಸಿಯೇ ಭೂಮಿಕಾ ಜೊತೆ ಮಲಗಿ ನಕ್ಷತ್ರ ಎಣಿಸಿದ ಗೌತಮ್​: ಏನಿದರ ಗುಟ್ಟು?

ಇದೀಗ ಅಮೃತಧಾರೆ ಸೀರಿಯಲ್​   300 ನೇ ಎಪಿಸೋಡ್​ಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ಗೌತಮ್​ ಮತ್ತು ಭೂಮಿಕಾ ಅವರ ನವಿರಾದ ಪ್ರೇಮ ಕಥನದ ಅಮೃತಧಾರೆಯ ವಿಶೇಷ ವಿಡಿಯೋ ರಿಲೀಸ್​ ಮಾಡಿದೆ. ಭೂಮಿಕಾ ಅವರ ರಿಯಲ್​ ಹೆಸರು ಛಾಯಾ ಸಿಂಗ್​. ಅಮೃತಧಾರೆಯ ರೀಲ್​ ಲೈಫ್​ನಲ್ಲಿ ಗೌತಮ್​ ಈಕೆಯ ಪತಿಯಾದರೆ, ರಿಯಲ್​ ಲೈಫ್​ ಪತಿಯ ಹೆಸರು. ಕೃಷ್ಣ. ಕೃಷ್ಣ ಎನ್ನುವವರ ಜೊತೆ ಛಾಯಾ ಅವರ ಮದುವೆಯಾಗಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್​  ಮಾಡಿಕೊಳ್ಳುತ್ತಿರುತ್ತಾರೆ.  ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಬೆಂಗಳೂರಿನ ಬೆಡಗಿ  ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್​ ಅಂತೆ. ಅವರಿಗೆ  ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.  ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ.  

 ರಾಜೇಶ್ ನಟರಂಗ ಅವರ ರಿಯಲ್​ ಪತ್ನಿ ಹೆಸರು ಚೈತ್ರಾ. ರಾಜೇಶ್​ ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್‌ ಪಾತ್ರಕ್ಕೆ ಜೀವ ತುಂಬಿರುವ  ರಾಜೇಶ್‌, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.  

ಅಮೃತಧಾರೆ ಗೌತಮ್‌ಗೆ ಹುಟ್ಟುಹಬ್ಬವಿಂದು: ನಟನ ರಿಯಲ್‌ ಜೀವನದ ಇಂಟರೆಸ್ಟಿಂಗ್‌ ವಿಷ್ಯದ ಜೊತೆ ವಿಡಿಯೋ ರಿಲೀಸ್‌

click me!