ಕೋಟ್​ ಧರಿಸಿಯೇ ಭೂಮಿಕಾ ಜೊತೆ ಮಲಗಿ ನಕ್ಷತ್ರ ಎಣಿಸಿದ ಗೌತಮ್​: ಏನಿದರ ಗುಟ್ಟು?

By Suchethana D  |  First Published Jun 12, 2024, 12:37 PM IST

ಹನಿಮೂನ್​ಗೆ ಹೋಗುವಾಗಲೂ ಕೋಟಿನಲ್ಲೇ ಇದ್ದ ಗೌತಮ್​, ಇದೀಗ ಬೆಡ್​ರೂಮ್​ನಲ್ಲೂ ಕೋಟು ಧರಿಸಿದ್ದಾನೆ. ಪತ್ನಿ ಜೊತೆ ನಕ್ಷತ್ರ ಎಣಿಸುವಾಗಲೂ ಕೋಟು ಬಿಟ್ಟಿಲ್ಲ.  ಏನಿದರ ಗುಟ್ಟು? 
 


 ಗೌತಮ್​ ಮತ್ತು ಭೂಮಿಕಾ ದಾಂಪತ್ಯ ಜೀವನದಲ್ಲಿ ಆಫೀಷಿಯಲ್​ ಆಗಿ ನಾಂದಿಹಾಡಿಯಾಗಿದೆ. ಇವರಿಬ್ಬರ ನಡುವಿನ ನವಿರಾದ ಪ್ರೀತಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಜೋಡಿ ಭಿನ್ನ-ವಿಭಿನ್ನ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದೆ.  ಸದಾ ಕಿತ್ತಾಡುತ್ತಲೇ ಇದ್ದ ಈ ದಂಪತಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ದಾರೆ. ಇದುವರೆಗೂ ಪರಸ್ಪರ ಪ್ರೀತಿಯ ವಿಷಯವನ್ನು ಹಂಚಿಕೊಳ್ಳದಿದ್ದರೂ, ನೇರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳದಿದ್ದರೂ, ಇವರ ಪ್ರೀತಿಗೆ ಇವರೇ ಸಾಟಿ ಎನ್ನುವಂತಿದ್ದ ಜೋಡಿ. ಮನಸಾರೆ ಇಬ್ಬರೂ ಒಂದಾದರೂ ದಂಪತಿಯಂತೆ ಬಾಳುವುದಿಲ್ಲ ಎಂದು ಅರಿತ ಅಜ್ಜಿ ಸುಳ್ಳು ಹೇಳುವ ಮೂಲಕ ಅಂತೂ ಈ ದಂಪತಿಯ ಫಸ್ಟ್​ನೈಟ್​ ಏರ್ಪಡಿಸಿಯೇ ಬಿಟ್ಟಿದ್ದಾಳೆ. ಈ ಮೂಲಕ ದಂಪತಿ ಒಂದಾಗಿದ್ದಾರೆ. ಇವೆಲ್ಲಾ ಓಕೆ, ಆದರೆ ಗೌತಮ್​ ಸದಾ ಕೋಟ್​ ಯಾಕೆ ಎನ್ನುವುದೇ ವೀಕ್ಷಕರ ಪ್ರಶ್ನೆ. ಈ ಹಿಂದೆ ಹನಿಮೂನ್​ಗೆ ಹೋದಾಗಲೂ ಗೌತಮ್​ ಕೋಟ್​ನಲ್ಲಿಯೇ ಹೋಗಿದ್ದ.  

ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವನ್ನು ಅವರು ಸವಿದಿದ್ದರು.   ಈ ಜೋಡಿಯನ್ನು ನೋಡಿ ನೆಟ್ಟಿಗರು ಸೂಪರ್​ ಎಂದು ಹೇಳುತ್ತಿದ್ದರೂ ಹನಿಮೂನ್​ಗೆ ಹೋಗುವಾಗ್ಲೂ ಗೌತಮ್​ ಸಿಂಪಲ್ಲಾಗಿ ಹೋಗೋದನ್ನು ಬಿಟ್ಟು ಒಳ್ಳೆ ಆಫೀಸ್​ ಟೂರ್​ಗೆ ಹೋದ ರೀತಿಯಲ್ಲಿ ಸೂಟು ಬೂಟು ಹಾಕಿಕೊಂಡಿರೋದು ಯಾಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಹನಿಮೂನ್​ಗೆ ಹೋಗುವಾಗ ಮೂಡು ಬೇರೆಯದ್ದೇ ರೀತಿ ಇರುತ್ತದೆ. ಅಂಥ ಸಂದರ್ಭದಲ್ಲಿಯೂ ಸೂಟು ಬೂಟು ಧರಿಸಿ ಹೋಗಿರುವುದಕ್ಕೆ ನೆಟ್ಟಿಗರು ಗೌತಮ್​ ಬಗ್ಗೆ ಮುನಿಸು ತೋರಿದ್ದರು. ಇದೀಗ ಬೆಡ್​ರೂಮ್​ನಲ್ಲಿ ಇರುವಾಗಲೂ ಗೌತಮ್​ ಸೂಟು ಧರಿಸಿದ್ದಾನೆ. ಇದರಿಂದ ಪ್ರೇಕ್ಷಕರು ಮತ್ತೆ ಅಸಮಾಧಾನ ಹೊರಹಾಕುತ್ತಿದ್ದಾರೆ.

Tap to resize

Latest Videos

ಹನಿಮೂನೋ, ಆಫೀಸ್​ ಟೂರೋ? ಮಧುಚಂದ್ರಕ್ಕೂ ಸೂಟು ಬೂಟು ಬೇಕಾ? ಗೌತಮ್​ ಕಾಲೆಳೆದ ಫ್ಯಾನ್ಸ್​

ಇದೀಗ ಲವ್​ ಮೂಡ್​ನಲ್ಲಿ ಇರುವ ಗೌತಮ್​ ಮತ್ತು ಭೂಮಿಕಾ ಹೊರಗಡೆ ಕುಳಿತುಕೊಂಡಿದ್ದಾರೆ. ಆಗ ಭೂಮಿಕಾ ತನ್ನ ತವರಿನ ನೆನಪು ಮಾಡಿಕೊಂಡು ಎಲ್ಲರೂ ನಾವು ಕೆಳಗೆ ನೆಲದ ಮೇಲೆ ಹಾಸಿಕೊಂಡು ನಕ್ಷತ್ರ ಎಣಿಸುತ್ತಾ ಇರುತ್ತಿದ್ದೆವು ಎಂದಾಗ ಗೌತಮ್​, ನನಗೂ ಹೀಗೆ ಮಾಡುವ ಆಸೆ ಎಂದಿದ್ದಾನೆ. ಆಗ ಗೌತಮ್​ಗೆ ಭೂಮಿಕಾ, ಬೇಡ ಡ್ರೆಸ್​ ಹಾಳಾಗುತ್ತದೆ ಎಂದರೂ ಗೌತಮ್​, ಬೇಡ ಈ ಕ್ಷಣವನ್ನು ನಾನು ಮಿಸ್​ ಮಾಡಿಕೊಳ್ಳುವುದಿಲ್ಲ ಎಂದಿದ್ದಾನೆ. ಕೊನೆಗೆ ಇಬ್ಬರೂ ಸೇರಿ ಹಾಸಿಕೊಂಡು ಮಲಗಿ ನಕ್ಷತ್ರ ಎಣಿಸುತ್ತಾ ಇದ್ದಾರೆ. ಇವೆಲ್ಲವೂ ಚೆಂದ ಎನ್ನುತ್ತಿರುವ ವೀಕ್ಷಕರು, ಈ ಕೋಟ್​ ವಿಷಯವನ್ನು ಮತ್ತೆ ಕೆದಕಿದ್ದಾರೆ.

ಸೀರಿಯಲ್​ಗಳಲ್ಲಿ ಶ್ರೀಮಂತ ಮಹಿಳೆಯರು ರೇಷ್ಮೆ ಸೀರೆ, ಭರ್ಜರಿ ಆಭರಣ ಹಾಕಿಕೊಂಡು ಮನೆಗೆಲಸ ಮಾಡುವುದು, ಮಲಗುವುದು ಎಲ್ಲವೂ ಇರುತ್ತದೆ. ಇದು ಅತಿ ಎನಿಸುವುದು ಉಂಟು. ಸೀರಿಯಲ್​ಗಳಲ್ಲಿ ವಾಸ್ತವವನ್ನು ದೂರವಿಟ್ಟು ಹೀಗೆ ತೋರಿಸುವುದು ಸರಿಯಲ್ಲ ಎನ್ನುವುದು ವೀಕ್ಷಕರ ಅಭಿಮತ. ಇದೀಗ ದಿನಪೂರ್ತಿ ಕೋಟು ಹಾಕಿಕೊಂಡೇ ಇರುವ ಗೌತಮ್​ ಬಗ್ಗೆ ನೆಟ್ಟಿಗರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. ಏನಿದರ ಗುಟ್ಟು ಎಂದು ಪ್ರಶ್ನಿಸುತ್ತಿದ್ದಾರೆ. 

ಮಾದಕ ನೋಟದಲ್ಲಿ ಅಮೃತಧಾರೆ ಪೆದ್ದಿ ಮಲ್ಲಿ: ಕಣ್ಣಲ್ಲೇ ಕೊಲ್ಲಬೇಡಮ್ಮಾ ಎಂದ ಪಡ್ಡೆ ಹುಡುಗರು

click me!