ಭೂಮಿಕಾ ಕಿಡ್ನ್ಯಾಪ್​: ಸೀತಾಮಾತೆಯ ಐಡಿಯಾನೇ ಫಾಲೋ ಮಾಡಿದ ನಾಯಕಿಗೆ ಭೇಷ್​ ಎಂದ ಫ್ಯಾನ್ಸ್​

Published : May 23, 2024, 10:36 AM IST
ಭೂಮಿಕಾ ಕಿಡ್ನ್ಯಾಪ್​: ಸೀತಾಮಾತೆಯ ಐಡಿಯಾನೇ ಫಾಲೋ ಮಾಡಿದ ನಾಯಕಿಗೆ ಭೇಷ್​ ಎಂದ ಫ್ಯಾನ್ಸ್​

ಸಾರಾಂಶ

ಹನಿಮೂನ್​ಗೆ ಹೋದ ಭೂಮಿಕಾಳನ್ನು ಅಪಹರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಸೀತಾಮಾತೆಯ ಐಡಿಯಾನೇ ಫಾಲೋ ಮಾಡಿದ್ದಾಳೆ ಇವಳು. ಅದೇನದು?  

ಐ ಲವ್​ ಯೂ ಎಂದು ಹೇಳಲು ಪರದಾಡುತ್ತಿದ್ದ ಗೌತಮ್​ ಕೊನೆಗೂ ತನ್ನ ಪ್ರೀತಿಯನ್ನು ಪತ್ನಿ ಭೂಮಿಕಾ ಎದುರು ನಿವೇದನೆ ಮಾಡಿಕೊಂಡಿದ್ದಾನೆ. ಬೇಗ ಐ ಲವ್​ ಯೂ ಹೇಳಪ್ಪಾ ಗೌತಮ್​. ಎಷ್ಟೂ ಅಂತ ಕಾಯಿಸ್ತಿಯಾ... ಅದೂ ನಿನ್ನ ಪತ್ನಿಗೆ ಹೇಳೋಕೂ ಇಷ್ಟು ನಾಚಿಕೆನಾ? ಅದ್ಯಾಕೆ ಲವ್​ ಅಂದ್ರೆ ಬೆವರುತ್ತೀಯಾ ಎಂದೆಲ್ಲಾ ಪ್ರಶ್ನಿಸಿ ಪ್ರಶ್ನಿಸಿ ಅಮೃತಧಾರೆ ಫ್ಯಾನ್ಸ್​ಗೆ ಸಾಕಾಗಿ ಹೋಗಿತ್ತು. ಆದರೆ ಈಗ ಆ ಕ್ಷಣ ಕೊನೆಗೂ ಬಂದೇ ಬಿಟ್ಟಿತು. ಬೆಟ್ಟದ ಮೇಲೆ ಭೂಮಿಕಾಳನ್ನು ಕರೆದುಕೊಂಡು ಹೋಗಿರುವ ಗೌತಮ್​, ನೇರವಾಗಿ ಭೂಮಿಕಾ ಮುಖ ನೋಡಿ ಪ್ರೀತಿಯ ನಿವೇದನೆ ಮಾಡಿಕೊಳ್ಳದಿದ್ದರೂ ಬೆನ್ನು ಹಿಂದಕ್ಕೆ ಮಾಡಿ ಐ ಲವ್​ ಯೂ ಅಂದೇ ಬಿಟ್ಟಿದ್ದ .  ನನಗೆ ಗೊತ್ತಿಲ್ಲದ ಹಾಗೆಯೇ ನಿಮ್ಮ ಮೇಲೆ ನನಗೆ ಪ್ರೀತಿ ಹುಟ್ಟಿದೆ. ಎಂಥ ಪ್ರೀತಿ ಎಂದು ನನಗೆ  ಹೇಳಿಕೊಳ್ಳಲು ಆಗ್ತಿಲ್ಲ. ನನ್ನಲ್ಲಿ ಆಗಿರೋ ಚೇಂಜಸ್​ ಹೇಳಿಕೊಳ್ಳಲು ನನಗೆ ಆಗ್ತಿಲ್ಲ. ಐ ಲವ್​ ಯೂ ಎಂದು ಹೇಳಿದ್ದಾನೆ. ಇದನ್ನು ಕೇಳಿ ಭೂಮಿಕಾಗಿಂತಲೂ ಹೆಚ್ಚು ಖುಷಿ ಸೀರಿಯಲ್​ ಫ್ಯಾನ್ಸ್​ಗೆ ಆಗಿತ್ತು.

ಇನ್ನೇನು ಇಬ್ಬರೂ ಒಂದಾಗುತ್ತಾರೆ, ಮುಂದೇನು ಎನ್ನುವ ಹೊತ್ತಲ್ಲೇ ಬರಿಸಿಡಿಲು ಬಡಿದಿದೆ. ಭೂಮಿಕಾಳ ಅಪಹರಣವಾಗಿದೆ. ಕೆಲವು ಮಂದಿ ಬಂದು ಭೂಮಿಕಾಳನ್ನು ಕರೆದುಕೊಂಡು ಹೋಗಿದ್ದಾರೆ. ಇತ್ತ ಪತ್ನಿ ಕಾಣದೇ ಗೌತಮ್​ ಚಡಪಡಿಸುತ್ತಿದ್ದಾನೆ. ಗೆಳೆಯ ಆನಂದ್​ಗೆ ಕರೆ ಮಾಡಿ ಎಲ್ಲಾ ವಿಷಯ ಹೇಳಿದ್ದಾನೆ. ಆನಂದ್​  ಮತ್ತು ಆತನ ಪತ್ನಿ ಸ್ಥಳಕ್ಕೆ ಧಾವಿಸಿದ್ದಾರೆ. ಭೂಮಿಕಾಳ ಹುಡುಕಾಟ ಶುರುವಾಗಿದೆ.

ಅಮೃತಧಾರೆಯ ಮುಗ್ಧ, ಪೆದ್ದಿ ಮಲ್ಲಿ ಇಷ್ಟೊಂದು ಕ್ಯೂಟಾ? ನಟಿಯ ಕುರಿತು ಒಂದಿಷ್ಟು ಇಂಟರೆಸ್ಟಿಂಗ್​ ಮಾಹಿತಿ...

ಅದೇ ಇನ್ನೊಂದೆಡೆ ಜಾಣ ಭೂಮಿಕಾ ರಾಮಾಯಣದ ಸೀತಾಮಾತೆಯ  ಐಡಿಯಾನೇ ಫಾಲೋ ಮಾಡಿದ್ದಾಳೆ. ತನ್ನನ್ನು ಅಪಹರಿಸಿರುವ ಗುರುತು ಸಿಗಲೆಂದು ಅಪಹರಣದ ದಾರಿಯುದ್ದಕ್ಕೂ ಸೀತೆ ಕುರುಹು ಬಿಟ್ಟು ಸಾಗಿರುತ್ತಾಳೆ. ಅದೇ ರೀತಿ ಭೂಮಿಕಾ ಅಪಹರಣಕಾರರು ತನ್ನನ್ನು ಕರೆದುಕೊಂಡು ಹೋಗುತ್ತಿರುವ ದಾರಿಯಲ್ಲಿ ಕಿವಿಯೋಲೆ, ಬಳೆಗಳನ್ನು ಎಸೆಯುತ್ತಾ ಸಾಗುತ್ತಾಳೆ. ಗೌತಮ್​ಗೆ ಭೂಮಿಕಾಳ ಕಿವಿಯೋಲೆ ಸಿಗುತ್ತದೆ. ಇದೇ ದಾರಿಯಲ್ಲಿ ಅವಳ ಅಪಹರಣ ಮಾಡಿರುವುದು ತಿಳಿದು ಅದೇ ದಾರಿಯಲ್ಲಿ ಸಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

ಅಷ್ಟಕ್ಕೂ ಈ ಅಪಹರಣದ ಹಿಂದಿರುವ ಕುತಂತ್ರ ಬುದ್ಧಿ ಗೌತಮ್​ ಚಿಕ್ಕಮ್ಮ ಶಕುಂತಲಾ ದೇವಿಯದ್ದು ಎಂದು ಬೇರೆ ಹೇಳಬೇಕಾಗಿಲ್ಲ. ಹೌದು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಮನೆಗೆ ಬಂದು ಧಮ್ಕಿ ಹಾಕಿ ಹೋಗಿದ್ದರು. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್​ಗೆ ಯಾವುದೇ ಮಾಹಿತಿ ಇಲ್ಲ.  ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್​ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್​ ಮಾಡಿದ್ದಳು. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. ಇದೇ ಕಾರಣಕ್ಕೆ ಇದೀಗ ಸಂಚು ರೂಪಿಸಿದ್ದಾಳೆ. ಮುಂದೇನಾಗುತ್ತದೆಯೋ ನೋಡಬೇಕಿದೆ. 
ಅಮೃತಧಾರೆ ಭೂಮಿಕಾಗೆ ಹುಟ್ಟುಹಬ್ಬ ಸಂಭ್ರಮ: ರೀಲ್​ ಗಂಡ ಎಸ್ಟೇಟ್​ ಕೊಟ್ಟ, ರಿಯಲ್​ ಗಂಡ ಏನ್​ ಕೊಡ್ತಾರೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?