'ಸೀತಾರಾಮ' ಸೀರಿಯಲ್​ ಸೀತಾ ದಿನವಿಡೀ ಏನ್​ ತಿಂತಾರೆ? ಸೆಟ್​ನಲ್ಲಿ ರಾಮ್​ ತಿನ್ನೋದೇನು? ವಿಡಿಯೋದಲ್ಲಿವೆ ಡಿಟೇಲ್ಸ್​

Published : Oct 08, 2023, 03:03 PM ISTUpdated : Oct 08, 2023, 03:04 PM IST
 'ಸೀತಾರಾಮ' ಸೀರಿಯಲ್​ ಸೀತಾ ದಿನವಿಡೀ ಏನ್​ ತಿಂತಾರೆ? ಸೆಟ್​ನಲ್ಲಿ ರಾಮ್​ ತಿನ್ನೋದೇನು? ವಿಡಿಯೋದಲ್ಲಿವೆ ಡಿಟೇಲ್ಸ್​

ಸಾರಾಂಶ

ಸೀತಾರಾಮ ಸೀರಿಯಲ್​ ನಾಯಕ-ನಾಯಕಿ ಶೂಟಿಂಗ್​ ಸೆಟ್​ನಲ್ಲಿ ತಿನ್ನುವ ಆಹಾರವೇನು ಎನ್ನುವುದನ್ನು ರಿವೀಲ್​ ಮಾಡಿದ್ದಾರೆ ನಟಿ ವೈಷ್ಣವಿ.  

ತಮ್ಮ ದೇಹವನ್ನು ಫಿಟ್​ ಆಗಿಟ್ಟುಕೊಳ್ಳಲು ಎಲ್ಲರೂ ಬಯಸಿದರೂ ನಟ-ನಟಿಯರಿಗೆ ಇದು ಅನಿವಾರ್ಯ. ಇದೇ ಕಾರಣಕ್ಕೆ ಡಯೆಟ್​ ಫುಡ್​ ತೆಗೆದುಕೊಳ್ಳುತ್ತಾರೆ. ತಮ್ಮ ಸೌಂದರ್ಯದ ಗುಟ್ಟನ್ನೂ ಕೆಲವು ನಟ-ನಟಿಯರು ಬಿಚ್ಚಿಡುವುದು ಇದೆ. ಇಡೀ ದಿನ ಮಳೆ, ಬಿಸಿಲು, ಚಳಿ ಎನ್ನದೇ ಶೂಟಿಂಗ್​ ಮಾಡುವ ಅನಿವಾರ್ಯದ ನಡುವೆ ಆಹಾರದ ಕಡೆಗೂ ಸರಿಯಾದ ಗಮನ ಕೊಡುವ ಚಾಲೆಂಜ್​ ನಟ-ನಟಿಯರ ಮೇಲಿರುತ್ತದೆ. ಇದೇ ಕಾರಣಕ್ಕೆ ತಮ್ಮ ಆಹಾರದ ಕಡೆಗೆ ಅವರು ವಿಶೇಷ ಗಮನ ಕೊಡಬೇಕು, ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಅವರು ಒಂದು ದಿನ ಶೂಟಿಂಗ್​ಗೆ ಹೋಗಿಲ್ಲವೆಂದರೂ ಶೂಟಿಂಗ್​ನಲ್ಲಿ ಏರುಪೇರಾಗುತ್ತದೆ. ಆದ್ದರಿಂದ ಇವೆಲ್ಲಾ ಕಾಪಾಡಿಕೊಂಡು ಹೇಗೆ ನಟ-ನಟಿಯರು ಹೋಗುತ್ತಾರೆ ಎನ್ನುವ ಕ್ಯೂರಿಯಾಸಿಟಿ ಫ್ಯಾನ್ಸ್​ಗೆ ಇದ್ದೇ ಇರುತ್ತದೆ.

ಇದೀಗ ಅದನ್ನು ರಿವೀಲ್​ ಮಾಡಿದ್ದಾರೆ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಾ ಜನಪ್ರಿಯಗೊಂಡಿರುವ ಸೀರಿಯಲ್​ ಸೀತಾರಾಮ ನಟಿ ವೈಷ್ಣವಿ. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಲವಾರು ರೀತಿಯ ವಿಡಿಯೋಗಳನ್ನು ಹಾಕುವ ಇವರು ಇದೀಗ ತಾವು ಮೂರು ಹೊತ್ತು ತಿನ್ನುವುದು ಏನು ಎಂಬುದರ ಜೊತೆಗೆ ಸೀರಿಯಲ್​ ಸೆಟ್​ನಲ್ಲಿ ಆಹಾರ ಸೇವಿಸುವ ಬಗ್ಗೆಯೂ ವಿವರಿಸಿದ್ದಾರೆ. ವೈಷ್ಣವಿ ಅವರು ಹೇಳಿದಂತೆ: ಬೆಳಿಗ್ಗೆ ಎದ್ದ ಮೇಲೆ ಕಷಾಯ ಅಥವಾ ಲೆಮೆನ್​ ಟೀ ಕುಡಿಯುತ್ತೇನೆ. ಅದಾದ ಮೇಲೆ ನ್ಯೂಟ್ರೀಷನ್​ ಬ್ರೇಕ್​ಫಾಸ್ಟ್​ ಸಾಧ್ಯವಾದಷ್ಟು ತಿನ್ನುತ್ತೇನೆ. ಸೌತೆ, ಟೊಮ್ಯೋಟೊ ಹಾಗೂ ಕೆಲವೊಂದು ಬೀಜಗಳನ್ನು ಸೇವನೆ ಮಾಡುತ್ತೇನೆ.  ಬ್ಯಾಲೆನ್ಡ್​ಸ ಡಯೆಟ್​ ಎಲ್ಲರಿಗೂ ಅಗತ್ಯ ಎಂದಿದ್ದಾರೆ. ಹೇರ್​ಫಾಲ್​ ಇಂದಿನವರಿಗೆ ಬೇರೆ ಬೇರೆ ಕಾರಣದಿಂದ ಸಾಮಾನ್ಯವಾಗಿದೆ. ಇದನ್ನು ಸರಿ ಮಾಡಬೇಕಾದರೆ ಆಹಾರದಲ್ಲಿ ನಿಯಂತ್ರಣ ಇರಬೇಕು. ನಾನು ತಿನ್ನುವ ಬ್ರೇಕ್​ಫಾಸ್ಟ್​ನಲ್ಲಿಯೇ ಇದನ್ನೆಲ್ಲಾ ತಿನ್ನುತ್ತೇನೆ. ಚಿಕನ್​, ಮೀನು, ಮಟನ್​ ಇವುಗಳಲ್ಲಿ ಕೆಲವೊಂದು ಪ್ರೊಟೀನ್​, ವಿಟಮಿನ್​ ಅಂಶಗಳು ಇರುತ್ತವೆ. ಆದರೆ ನಾನು ನಾನ್​ವೆಜ್​ ತಿನ್ನದೇ ಇರುವ ಕಾರಣ ಇವುಗಳ ಸೇವನೆ ಮಾಡುತ್ತೇನೆ ಎಂದಿದ್ದಾರೆ ವೈಷ್ಣವಿ. 

ಹೊಟ್ಟೆ ಕರಗಿಸುವ ಮ್ಯಾಜಿಕ್​! ಎರಡು ಗಂಟೆಯ ಸೀಕ್ರೆಟ್​ ಹೇಳಿದ ಜಗ್ಗೇಶ್ ಹೆಂಡತಿ ಪರಿಮಳ

ಇದಾದ ಮೇಲೆ ಶೂಟಿಂಗ್​ ಸ್ಪಾಟ್​ಗೆ ಕರೆದುಕೊಂಡು ಹೋಗಿದ್ದಾರೆ ವೈಷ್ಣವಿ. ಅಲ್ಲಿ ಸೀತಾರಾಮ ಸೀರಿಯಲ್​ನ ರಾಮನ ಪಾತ್ರಧಾರಿ ಗಗನ್​ ಚಿನ್ನಪ್ಪ ಮಿಲಟ್​ ರೈಸ್​, ಪಾಲಕ್​ ಚಿಕನ್​ ಮತ್ತು ಸೋಯಾ ಆರ್ಡರ್​ ಮಾಡಿ ತರಿಸಿಕೊಂಡಿದ್ದಾರೆ.  ಇದರ ಜೊತೆಗೆ ಪ್ರತ್ಯೇಕವಾಗಿ ಹಪ್ಪಳದ ಆರ್ಡರ್​ ಮಾಡಿದ್ದಾರೆ. ನನಗೆ ಸಿಂಪ್ಲಿಸಿಟಿ ಎಂದರೆ ಇಷ್ಟ ಎಂದ ಗಗನ್​ ಅವರು, ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಅನ್ನೋ ಹಾಡೂ ತಮಗೂ ಅನ್ವಯ ಆಗುತ್ತದೆ ಎಂದಿದ್ದಾರೆ. ಇದರ ಜೊತೆ ಸ್ವಲ್ಪ ತಮಾಷೆಯ ವಾಕ್ಯ ಸೇರಿಸಿ ತುಂಡು ಬಟ್ಟೆ ಸಾಕು ಎನಗೆ ಬದಲು ಉದ್ದನೆ ಬಟ್ಟೆ ಸಾಕು ಎನಗೆ ಎಂದಿದ್ದಾರೆ. ಇವಿಷ್ಟೇ ರಾಮ್​ ಪಾತ್ರಧಾರಿ ಗಗನ್​ ಸೆಟ್​ನಲ್ಲಿದ್ದಾಗ ತಿನ್ನುವುದು. 

ಇನ್ನು ಸೀತೆ ಅಲಿಯಾಸ್​ ವೈಷ್ಣವಿ ಶೂಟಿಂಗ್ ಸೆಟ್​ನಲ್ಲಿ ಏನು ತಿನ್ನುತ್ತಾರೆ ನೋಡೋಣ. ಒಂದು ಸೇಬು, ಕಾಳಿನ ಸಾಂಬಾರು, ಅನ್ನ ತೆಗೆದುಕೊಂಡು ಹೋಗುತ್ತಾರೆ.  ಜೊತೆಗೆ ಸೌತೆಕಾಯಿ, ನವಿಲುಕೋಸು, ಕ್ಯಾರೆಟ್​ ಅವರ ಮಧ್ಯಾಹ್ನದ ಡಯೆಟ್​ನಲ್ಲಿ ಇದ್ದೇ ಇರುತ್ತದೆ.  ಇದರ ಜೊತೆಗೆ ಒಂದಿಷ್ಟು ಡ್ರೈಫ್ರುಟ್ಸ್​ ತೆಗೆದುಕೊಂಡು ಹೋಗುತ್ತಾರೆ. ವಾಟರ್​ ಬಾಟಲಿನಲ್ಲಿ ಕಾಮಕಸ್ತೂರಿ ಬೀಜವನ್ನು ಹಾಕಿರುತ್ತೇನೆ, ಇದರಿಂದ ದೇಹ ತಂಪಾಗಿರುತ್ತದೆ ಎಂದಿದ್ದಾರೆ ವೈಷ್ಣವಿ. ಇನ್ನು ರಾತ್ರಿಯ ವೇಳೆ ಒಂದು ಸೇಬು ಮತ್ತು ಕಾಮಕಸ್ತೂರಿ ಇರುವ ನೀರನ್ನು ಕುಡಿದು ಮಲಗುವುದಾಗಿ ಹೇಳಿದ್ದಾರೆ. 

ಬಿಗ್​ಬಾಸ್​ ವೇದಿಕೆಯಲ್ಲಿ ಡ್ರೋಣ್​ ಪ್ರತಾಪ್​ ಪ್ರತ್ಯಕ್ಷ! ಕಾಗೆ ಹಾರಿಸೋಕೆ ರೆಡಿನಾ ಅಂತಿದ್ದಾರೆ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?
ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?