ಹನಿಮೂನ್ ಮುಗೀತು, ಶೂಟಿಂಗ್ ಶುರು ಆಯ್ತು, ಹೊಸ ಶೋನಲ್ಲಿ ವೈಷ್ಣವಿ ಗೌಡ

Published : Sep 24, 2025, 01:38 PM IST
Vaishnavi Gowda

ಸಾರಾಂಶ

Vaishnavi Gowda : ಸೀತಾರಾಮ ನಟಿ ವೈಷ್ಣವ ಗೌಡ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಪ್ರಾಜೆಕ್ಟ್ ನಲ್ಲಿ ಅವ್ರು ಕೆಲ್ಸ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದ್ರ ಬಗ್ಗೆ ವೈಷ್ಣವಿ ಮಾಹಿತಿ ನೀಡಿದ್ದಾರೆ. 

ಮದುವೆ, ಹನಿಮೂನ್ ಮೂಡಿನಿಂದ ಹೊರ ಬಂದ ವೈಷ್ಣವಿ ಗೌಡ (Vaishnavi Gowda) ಮತ್ತೆ ಆಕ್ಟಿಂಗ್ ನತ್ತ ಮುಖ ಮಾಡಿದ್ದಾರೆ. ಮದುವೆ ಆದ್ಮೇಲೆ ರೀಲ್ಸ್, ಯುಟ್ಯೂಬ್ ವಿಡಿಯೋದಲ್ಲಿ ಆಕ್ಟಿವ್ ಇದ್ರೂ ಶೂಟಿಂಗ್, ಸೀರಿಯಲ್ ಅಂತ ಯಾವುದನ್ನೂ ವೈಷ್ಣವಿ ಗೌಡ ಒಪ್ಪಿಕೊಂಡಿರಲಿಲ್ಲ. ಸೀತಾರಾಮ ಸೀರಿಯಲ್ (Seetharama Serial) ಮುಗಿಯುತ್ತಿದ್ದಂತೆ ವೈಷ್ಣವಿ, ಎಂಗೇಜ್ಮೆಂಟ್ ಮಾಡ್ಕೊಂಡು ಜೂನ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದಾದ್ಮೇಲೆ , ಮನಾಲಿ, ಕಾಶ್ಮೀರ್ ಅಂತ ಹನಿಮೂನ್ ಮುಗಿಸಿ ಬಂದು ಸ್ವಲ್ಪ ದಿನ ಮನೆಯಲ್ಲಿ ರೆಸ್ಟ್ ತೆಗೆದುಕೊಂಡಿದ್ರು. ಈಗ ಹೊಸ ಪ್ರಾಜೆಕ್ಟ್ ಜೊತೆ ವೈಷ್ಣವಿ ಎಲ್ಲರ ಮುಂದೆ ಬರಲಿದ್ದಾರೆ.

ಹೊಸ ಪ್ರಾಜೆಕ್ಟ್ ಶೂಟಿಂಗ್ ಶುರು ಮಾಡಿದ ವೈಷ್ಣವಿ ಗೌಡ :

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ವೈಷ್ಣವಿ ಗೌಡ, ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡ್ತಿರ್ತಾರೆ. ಈಗ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ವೈಷ್ಣವಿ ಹೇಳಿಕೊಂಡಿದ್ದಾರೆ. ಈ ಬಾರಿ ವೈಷ್ಣವಿ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಳ್ತಿಲ್ಲ. ಬದಲಾಗಿ ಅವರು ವೆಬ್ ಸಿರೀಸ್ ನಲ್ಲಿ ಮಿಂಚಲಿದ್ದಾರೆ.

ರಿಯಾಲಿಟಿ ಶೋ ಬಗ್ಗೆ ಕೆಟ್ಟದಾಗಿ ಮಾತನಾಡ್ಬೇಡಿ, ಮಾಜಿ ಸ್ಪರ್ಧಿಗಳಿಗೆ ಕೋಳಿ ರಮ್ಯಾ ಕ್ಲಾಸ್

ವೆಬ್ ಸಿರೀಸ್ಗೆ ಸಹಿ ಹಾಕಿದ ವೈಷ್ಣವಿ ಗೌಡ : 

ಜೀ 5, ವೆಬ್ ಸಿರೀಸ್ ಸ್ಟ್ರೀಮಿಂಗ್ ಮಾಡಿದೆ. ವೆಬ್ ಸಿರೀಸ್ ಗಳ ಅಬ್ಬರ ಶುರುವಾಗಿದೆ. ಅನೇಕ ಸಿರೀಯಲ್ ಕಲಾವಿದರು ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ವೈಷ್ಣವಿ ಗೌಡ ಕೂಡ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀತಮ್ ಗುಬ್ಬಿ ಅವರ ಜೊತೆ ವೈಷ್ಣವಿ ಕೆಲ್ಸ ಮಾಡಲಿದ್ದಾರೆ. ಆದ್ರೆ ಅದು ಯಾವುದ್ರಲ್ಲಿ ಪ್ರಸಾರ ಆಗಲಿದೆ ಅನ್ನೋದನ್ನು ವೈಷ್ಣವಿ ಹೇಳಿಲ್ಲ. ಈವರೆಗೂ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದೇನೆ ಎಂದಷ್ಟೇ ವೈಷ್ಣವಿ ಗೌಡ ಹೇಳಿದ್ದಾರೆ.

ವೈಷ್ಣವಿ ಜೊತೆ ಕೆಲ್ಸ ಮಾಡ್ತಿದ್ದಾರೆ ಸ್ಕಂದ : ವೈಷ್ಣವಿ ತಮ್ಮ ಇನ್ನೊಂದು ವಿಡಿಯೋದಲ್ಲಿ ಶೂಟಿಂಗ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಪಾರ್ಟನರ್ ಸ್ಕಂದ ಅವರನ್ನು ತೋರಿಸಿದ್ದಾರೆ. ಸ್ಕಂದ ಹಾಗೂ ವೈಷ್ಣವಿ ಈ ವೆಬ್ ಸಿರೀಸ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಸೀತಾ-ರಾಮ ಸೀರಿಯಲ್ಲನ್ನು ಸ್ಕಂದ ಮಾಡ್ಬೇಕಿತ್ತಂತೆ. ಕಾಲಿಗೆ ಗಾಯವಾದ ಕಾರಣ ಸ್ಕಂದ ಪ್ರಾಜೆಕ್ಟ್ ನಿಂದ ಹೊರಗೆ ಬಿದ್ದಿದ್ದರು. ಈಗ ಸ್ಕಂದ ಹಾಗೂ ವೈಷ್ಣವಿ ಒಟ್ಟಿಗೆ ಮೈಕ್ರೋ ವೆಬ್ ಸಿರೀಸ್ ಮಾಡ್ತಿದ್ದಾರೆ. ಶೀಘ್ರದಲ್ಲೇ ಈ ವೆಬ್ ಸಿರೀಸ್ ಪ್ರಸಾರ ಆಗ್ತಿದ್ದು, ಎಲ್ಲರೂ ನೋಡಿ ಅಂತ ವಿಡಿಯೋದಲ್ಲಿ ವೈಷ್ಣವಿ ರಿಕ್ವೆಸ್ಟ್ ಮಾಡಿದ್ದಾರೆ.

'ಕಾಂತಾರ ಚಾಪ್ಟರ್ 1'ಗೆ ಯಾಕೆ ಹೆಚ್ಚು ಪ್ರಚಾರ ಮಾಡ್ತಿಲ್ಲ? ರಿಷಬ್ ಶೆಟ್ಟಿ ಹೇಳಿದ ಸೀಕ್ರೆಟ್ ಏನು?

ವೈಷ್ಣವಿ ದಾಂಪತ್ಯ ಜೀವನ : ದೇವಿ ಸೀರಿಯಲ್ ಮಾಡಿದ್ರೂ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದವರು ವೈಷ್ಣವಿ ಗೌಡ. ನಂತ್ರ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ವೈಷ್ಣವಿ, ಶೀಘ್ರವೇ ಮದುವೆ ಆಗ್ತೇನೆ ಎಂದಿದ್ರು. ಆದ್ರೆ ಕೆಲ ಸಮಸ್ಯೆಯಿಂದ ಮದುವೆ ಮುಂದೂಡಲ್ಪಟ್ಟಿತ್ತು. ಈ ವರ್ಷ ಜೂನ್ 4 ರಂದು ವೈಷ್ಣವಿ ಗೌಡ, ಏರ್ ಪೋರ್ಸ್ ನಲ್ಲಿ ಕೆಲ್ಸ ಮಾಡ್ತಿರುವ ಅನುಕೂಲ್ ಮಿಶ್ರಾ ಅವರ ಕೈ ಹಿಡಿದಿದ್ದಾರೆ. ಏಪ್ರಿಲ್ 14 ರಂದು ಅವರ ನಿಶ್ಚಿತಾರ್ಥ ನಡೆದಿತ್ತು. ಮದುವೆ ನಂತ್ರ ಹನಿಮೂನ್ ಮುಗಿಸಿರುವ ವೈಷ್ಣವಿ, ಆಕ್ಟಿಂಗ್ ಬಿಡೋದಿಲ್ಲ ಅಂತ ಮದುವೆಗೂ ಮುನ್ನ ಒಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಭರವಸೆ ನೀಡಿದ್ದರು. ಅದ್ರಂತೆ ಈಗ ವಾಪಸ್ ಆಗಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ