'ಬಿಗ್‌ ಬಾಸ್‌ ಮನೇಲಿ ಪುರುಷನ ಜೊತೆ ಬೆಡ್‌ ಶೇರ್‌ ಮಾಡಲ್ಲ'-1.6 ಕೋಟಿ ರೂ. ಆಫರ್‌ ರಿಜೆಕ್ಟ್‌ ಮಾಡಿದ ನಟಿ

Published : Sep 17, 2025, 03:30 PM IST
actress tanushree dutta

ಸಾರಾಂಶ

Bigg Boss Offer: ಬಿಗ್‌ ಬಾಸ್‌ ಶೋನಲ್ಲಿ ಒಂದೇ ಮಂಚದ ಮೇಲೆ ಪುರುಷನ ಜೊತೆ ಮಲಗೋಕೆ ಆಗೋದಿಲ್ಲ ಎಂದು ಕಾರಣ ನೀಡಿದ ಖ್ಯಾತ ನಟಿಯೋರ್ವರು ಬಿಗ್‌ ಬಾಸ್‌ ಆಫರ್‌ನ್ನು ರಿಜೆಕ್ಟ್‌ ಮಾಡಿದ್ದಾರೆ. ಈ ಬಗ್ಗೆ ಅವರು ವಿವರಣೆ ನೀಡಿದ್ದಾರೆ. 

ಬಿಗ್‌ ಬಾಸ್‌ ಆಫರ್‌ಗೋಸ್ಕರ ಅನೇಕರು ಕಾದು ಕುಳಿತಿರುತ್ತಾರೆ. ಇನ್ನೂ ಕೆಲವರು ಬಿಗ್‌ ಬಾಸ್‌ ಶೋವನ್ನು ಖಡಾಖಂಡಿತವಾಗಿ ತಿರಸ್ಕಾರ ಮಾಡೋದುಂಟು. ಈಗ ಖ್ಯಾತ ನಟಿ ತನುಶ್ರೀ ದತ್ತ ಅವರು ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡ್ತಿದೀನಿ ಎಂದು ಹೇಳಿದ್ದಾರೆ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಸೃಷ್ಟಿಮಾಡಿಕೊಳ್ಳುವ ತನುಶ್ರೀ ದತ್ತ ಈ ಬಾರಿ, “ರಿಯಾಲಿಟಿ ಶೋಗೋಸ್ಕರ ಪುರುಷನ ಜೊತೆ ಬೆಡ್‌ ಹಂಚಿಕೊಳ್ಳಲ್ಲ” ಎಂದು ಹೇಳಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಅವರಿಗೆ ಆಫರ್‌ ಬರ್ತಿದೆ, ಆದರೆ ಅವರು ಒಪ್ಪಿಕೊಳ್ತಿಲ್ಲವಂತೆ.

ಬಿಗ್‌ ಬಾಸ್‌ನಲ್ಲಿ ಭಾಗವಹಿಸೋದಿಲ್ಲ

ಬಿಗ್‌ ಬಾಸ್‌ ಹಿಂದಿ 19 ಶೋವನ್ನು ಸಲ್ಮಾನ್‌ ಖಾನ್‌ ಅವರು ನಿರೂಪಣೆ ಮಾಡುತ್ತಿದ್ದಾರೆ. ಈ ಶೋನಲ್ಲಿ ಶೆಹಬಾಜ್‌, ತಾನ್ಯಾ ಮಿತ್ತಲ್‌, ಕುನಿಕಾ, ಅಮಾಲ್‌ ಮಲಿಕ್‌, ಪ್ರಣೀತ್‌ಮೋರ್‌, ಗೌರವ್‌ಖನ್ನಾ ಮುಂತಾದವರು ಭಾಗವಹಿಸಿದ್ದಾರೆ. ಎಲ್ಲ ಭಾಷೆಗಳಿಗೆ ಹೋಲಿಕೆ ಮಾಡಿದರೆ, ಹಿಂದಿಯಲ್ಲಿ ಸಾಕಷ್ಟು ವಿವಾದಗಳು ಆಗುತ್ತವೆ, ಅಂದಹಾಗೆ ಒಂದೇ ಬೆಡ್‌ನ್ನು ಹುಡುಗ, ಹುಡುಗಿ ಶೇರ್‌ ಮಾಡೋದು ಹಿಂದಿಯಲ್ಲಿ ಮಾತ್ರ ಇದ್ದಂತಿದೆ. “ನನಗೆ ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸುವ ಯಾವುದೇ ಆಸಕ್ತಿ, ಉದ್ದೇಶ ಇಲ್ಲ” ಎಂದು ತನುಶ್ರೀ ಹೇಳಿದ್ದಾರೆ.

ಪುರುಷನ ಜೊತೆ ಬೆಡ್‌ ಶೇರ್‌ ಮಾಡಲ್ಲ

“ನನಗೆ ಬಿಗ್‌ ಬಾಸ್‌ ಶೋನಲ್ಲಿ 1.65 ಕೋಟಿ ರೂಪಾಯಿ ಆಫರ್‌ಕೊಟ್ಟಿದ್ದರು. ಆಫರ್‌ಕಡಿಮೆ ಆಯತಿತು ಎನ್ನೋದು ಅವರ ಸಮಸ್ಯೆ ಅಲ್ಲ., ಬದಲಿಗೆ ಶೋ ಫಾರ್ಮ್ಯಾಟ್‌ ಸರಿ ಇಲಲ ಎನಿಸಿದೆಯಂತೆ. ಬಿಗ್‌ ಬಾಸ್‌ ತಂಡದವರು ತುಂಬ ಸಲ ಫೋನ್‌ಮಾಡಿದ್ದಾರೆ, ಎಷ್ಟೇ ಬಾರಿ ಫೋನ್‌ಮಾಡಿದರೂ ಕೂಡ ನನ್ನ ಉತ್ತರ ನೋ ಎನ್ನೋದಾಗಿರುತ್ತದೆ. ನನಗೆ ಆ ರೀತಿ ಜಾಗದಲ್ಲಿ ಇರೋಕೆ ಇಷ್ಟವಿಲ್ಲ. ನಾನು ಕುಟುಂಬದ ಜೊತೆಯೇ ಇರೋದಿಲ್ಲ” ಎಂದು ತನುಶ್ರೀ ಹೇಳಿದ್ದಾರೆ.

ನಾನು ಅಷ್ಟು ಚೀಪ್‌ ಅಲ್ಲ

“ಒಂದೇ ಹಾಲ್‌ನಲ್ಲಿ ಹುಡುಗ, ಹುಡುಗಿ ನಿದ್ದೆ ಮಾಡ್ತಾರೆ, ಅವರು ಫೈಟ್‌ಮಾಡ್ತಾರೆ, ಅಳ್ತಾರೆ, ಬೆಡ್‌ ಶೇರ್‌ ಮಾಡ್ತಾರೆ. ರಿಯಾಲಿಟಿ ಶೋಗೋಸ್ಕರ ಒಂದೇ ಬೆಡ್‌ನಲ್ಲಿ ಪುರುಷನ ಜೊತೆ ಮಲಗುವ ಹುಡುಗಿ ಥರ ನಾನ್‌ ಕಾಣ್ತೀನಾ? ನಾನು ಅಷ್ಟು ಚೀಪ್‌ ಅಲ್ಲ” ಎಂದು ತನುಶ್ರೀ ಹೇಳಿದ್ದಾರೆ.

ಕೆಲವೇ ಸಿನಿಮಾಗಳಲ್ಲಿ ನಟನೆ

ಅಂದಹಾಗೆ ತನುಶ್ರೀ ದತ್ತ ಅವರು ಒಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದವರು. ಆ ಬಳಿಕ ಮೀಟೂ ಅಭಿಯಾನದಲ್ಲಿ ಕೂಡ ದನಿ ಎತ್ತಿದರು. Aashiq Banaya Aapne ಸಿನಿಮಾದಲ್ಲಿ Aashiq Banaya Aapne ಹಾಡಿನಲ್ಲಿ ತನುಶ್ರೀ ಅವರ ಹಾಟ್‌ ಅವತಾರಕ್ಕೆ ಪಡ್ಡೆಹೈದರು ಬಿದ್ದಿದ್ದುಂಟು. 2005-2013 ರವರೆಗೆ ಕೆಲವೇ ಸಿನಿಮಾಗಳಲ್ಲಿ ತನುಶ್ರೀ ನಟಿಸಿದ್ದರು. ಇಷ್ಟು ವರ್ಷಗಳಲ್ಲಿ ಅವರು ಬೆರಳಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.

ತನುಶ್ರೀ ಇನ್ನೂ ಸಿಂಗಲ್‌ ಆಗಿದ್ದಾರೆ. ಆದಿತ್ಯ ದತ್ತ ಜೊತೆ ಅವರು ಲವ್‌ನಲ್ಲಿದ್ದರು, ಬ್ರೇಕಪ್‌ ಆಗಿತ್ತು. ಆ ಬಳಿಕ ಡಿಪ್ರೆಶನ್‌ನಲ್ಲಿದ್ದರು. ಆಶ್ರಮದಲ್ಲಿ ಕೂಡ ಅವರು ಕಾಲಕಳೆದಿದ್ದುಂಟು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ