
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ವಾರ ವಾರವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮೀರಾ ಗರ್ಭಿಣಿ ಎಂಬ ವಿಚಾರ ತಿಳಿದು ಅಹಲ್ಯಾ ಕೂಡ ಗರ್ಭಿಣಿ ಎಂದು ಜೈಲಿನಲ್ಲಿದ್ದುಕೊಂಡೇ ಕುಟುಂಬಸ್ಥರಿಗೆ ವಿಚಾರ ತಿಳಿಸಿದ್ದಾರೆ. ಅಹಲ್ಯಾ ಮೇಲೆ ರಾಜ್‌ಗುರು ಕುಟುಂಬಕ್ಕೆ ಅನುಕಂಪ ಹುಟ್ಟಿದ್ದರೂ, ಅಹಲ್ಯಾ ತನ್ನ ತಂದೆಗಾಗಿ ಸೇಡಿನ ಬುದ್ಧಿ ಬಿಟ್ಟಿಲ್ಲ.
ಇಷ್ಟು ವರ್ಷ ಎಲ್ಲೋ ಕಾಣೆಯಾಗಿದ್ದ ತಂದೆ ಮರುಳಿ ಬಂದಾಗ ರಾಜ್‌ಗುರು ಕುಟುಂಬವನ್ನೇ ಬಿಟ್ಟು ಅಹಲ್ಯಾ ಹೋಗುತ್ತಾರೆ. ಅಹಲ್ಯಾ ನಡೆನುಡಿಗಳ ಬಗ್ಗೆ ಮೀರಾ ಸದಾ ಕಣ್ಣಿಟ್ಟಿರುತ್ತಾಳೆ. ಆದರೆ ಹಣದ ಆಸೆಗೆ ಮತ್ತೆ ಅಹಲ್ಯಾ ತಂದೆ ರಾಜ್‌ಗುರು ಕುಟುಂಬವನ್ನು ಎದುರು ಹಾಕಿಕೊಳ್ಳುತ್ತಾನೆ. ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಅಹಲ್ಯಾ ಕೆಲಸ ಹುಡುಕಿಕೊಂಡು ನೇತ್ರ ಇಟಗಿ ಬಳಿ ಸೇರುತ್ತಾರೆ.
ಹೂ ಮಳೆ ಧಾರಾವಾಹಿಯಿಂದ ಹೊರ ಬಂದಿದ್ದ ಮೇಘಾ ಈಗ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಮೇಘಾ ಕೊರೋನಾ ಸಮಯದಲ್ಲಿ ಹೈದರಾಬಾದ್ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲವೆಂದು ತಂಡದವರೇ ಪಾತ್ರಧಾರಿಯನ್ನು ಬದಲಾಯಿಸಿದ್ದರು. ಇದೀಗ ನೇತ್ರ ಇಟಗಿ ಪಾತ್ರದ ಮೂಲಕ ಮೇಘನಾ ವಿಲನ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಅಹಲ್ಯಾಳನ್ನು ಬಳಸಿಕೊಂಡು ನೇತ್ರ ಇಟಗಿ ಕೂಡ ರಾಜ್‌ಗುರು ಕುಟುಂಬವನ್ನು ಹಾಳುಗೆಡವಲು ಪ್ರಯತ್ನ ಮಾಡುತ್ತಾಳೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗಳು ಸಸ್ಪೆನ್ಸ್ ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.