41ರಲ್ಲೂ ಅದೇ ಗ್ಲಾಮರ್: ಜ್ಯೋತಿ ರೈ ಹುಟ್ಟುಹಬ್ಬಕ್ಕೆ ಪತಿ ಸುಕು ಪೂರ್ವಜ್ ಸ್ಪೆಷಲ್ ವಿಶ್ ವೈರಲ್

Published : Jul 05, 2026, 06:08 PM IST
Jyothi Rai

ಸಾರಾಂಶ

Jyothi Rai 41st Birthday: ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಕನ್ನಡಿಗರ ಮನ ಗೆದ್ದಿದ್ದ ಜ್ಯೋತಿ ರೈ ಹಲವು ವರ್ಷಗಳ ಕಾಲ ನಾಯಕಿಯಾಗಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಜ್ಯೋತಿ ರೈ ಹಲವು ವರ್ಷಗಳ ಕಾಲ ನಾಯಕಿಯಾಗಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಸಾಂಪ್ರದಾಯಿಕ ಉಡುಗೆ ಮತ್ತು ಗಂಭೀರ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಅವರು, ಈಗ ತಮ್ಮ ಹೊಸ ಅವತಾರದಿಂದಲೂ ಗಮನ ಸೆಳೆಯುತ್ತಿದ್ದಾರೆ.

ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಜ್ಯೋತಿ ರೈ ಅವರ ವೃತ್ತಿಜೀವನದ ಜೊತೆಗೆ ಅವರ ಲುಕ್ ಕೂಡ ಸಾಕಷ್ಟು ಬದಲಾಗಿದೆ. ಕನ್ನಡ ಕಿರುತೆರೆಯ ‘ಮನೆಮಗಳು’ ಎಂಬ ಇಮೇಜ್‌ನಿಂದ ಹೊರಬಂದು, ತೆಲುಗು ಸಿನಿಮಾಗಳು ಹಾಗೂ ವೆಬ್‌ ಸೀರೀಸ್‌ಗಳಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಹೊಸ ಗುರುತನ್ನು ಕಟ್ಟಿಕೊಂಡಿದ್ದಾರೆ. ತಮ್ಮ ಗ್ಲಾಮರಸ್ ಫೋಟೋಶೂಟ್‌ಗಳು ಮತ್ತು ಸ್ಟೈಲಿಶ್ ಲುಕ್‌ನಿಂದ ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತಾರೆ.

ಇದೀಗ ನಟಿ ತಮ್ಮ 41ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರ ಪತಿ, ತೆಲುಗು ನಿರ್ದೇಶಕ ಸುಕು ಪೂರ್ವಜ್, ಜ್ಯೋತಿ ರೈ ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಜ್ಯೋತಿ ರೈ ಕೂಡ ಪತಿಯೊಂದಿಗೆ ಕೇಕ್ ಕಟ್ ಮಾಡಿ ಈ ಸಂಭ್ರಮವನ್ನು ಆಚರಿಸಿರುವ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಜ್ಯೋತಿ ರೈ ಅವರು ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿದಂತೆ 18ಕ್ಕೂ ಹೆಚ್ಚು ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಚಿತ್ರರಂಗದಲ್ಲಿ ಸಕ್ರಿಯ

ಪ್ರಸ್ತುತ ಕನ್ನಡದಿಂದ ಸ್ವಲ್ಪ ದೂರ ಉಳಿದಿರುವ ಅವರು, ತೆಲುಗು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರನ್ನು ವಿವಾಹವಾದ ಬಳಿಕ ಅಲ್ಲಿಯೇ ನೆಲೆಸಿರುವ ಜ್ಯೋತಿ ರೈ, ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಮದ್ವೆಗೆ ಸಿದ್ಧವಾದ ಸಿಂಚನಾ ಸೀರಿಯಲ್​ನಿಂದ ಹೊರಕ್ಕೆ: ಮರಳಿ ಬಂದ ಹಳೆಯ 'ಸಿಂಚನಾ'
ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ ಕಪಿಲ್ ಶರ್ಮಾ ಶೋ ಖ್ಯಾತಿಯ ಸುಮೋನಾ, ಭಾವುಕ ಪೋಸ್ಟ್