
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ಸಂಗೀತ ನಿರ್ದೇಶಕ, ಗಾಯಕ ಹಾಗೂ ರಿಯಾಲಿಟಿ ಶೋ ತೀರ್ಪುಗಾರ ಸಾಧು ಕೋಕಿಲ ಅವರು ಇದೇ ಮೊದಲ ಬಾರಿ ಧಾರಾವಾಹಿ ನಿರ್ದೇಶಕರಾಗಿ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ, ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಅನೇಕ ಚಿತ್ರಗಳಿಗೆ ತಮ್ಮ ಸಂಗೀತದ ಛಾಪು ಮೂಡಿಸಿರುವ ಸಾಧು ಮಹಾರಾಜ್ ಹೊಸ ಪ್ರಯತ್ನಕ್ಕೆ ಇಡೀ ಚಿತ್ರರಂಗವೇ ಸಾಥ್ ನೀಡುತ್ತಿದೆ.
ಸಾಧು ಕೋಕಿಲ ಜೊತೆ ಕ್ರಿಸ್ಮಸ್ ಆಚರಿಸಿದ ದರ್ಶನ್; ಹೇಗಿತ್ತು ಸೆಲೆಬ್ರೇಷನ್?
ಮಾರ್ಚ್ 15ರಂದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಗೌರಿಪುರದ ಗಯ್ಯಾಳಿಗಳು' ಧಾರಾವಾಹಿಯನ್ನು ಸಾಧು ಕೋಕಿಲ ನಿರ್ಮಾಣ ಮಾಡುತ್ತಿದ್ದಾರೆ. ರವಿತೇಜ ಆಕ್ಷನ್ ಕಟ್ ಹೇಳುತ್ತಿರುವ ಈ ಧಾರಾವಾಹಿಯಲ್ಲಿ ರೋಹಿಣಿ, ದಿವ್ಯಾ, ವೀಣಾ, ರಚನಾ, ಆರ್ವ ಬಸವಟ್ಟಿ, ನವ್ಯಾ ಅಭಿನಯಿಸುತ್ತಿದ್ದಾರೆ.
ಈ ಧಾರಾವಾಹಿಗೂ 'ಕಿರುಗೂರಿನ ಗಯ್ಯಾಳಿಗಳು' ಸಿನಿಮಾಗೂ ಏನೋ ಸಂಬಂಧ ಇದೆ ಎಂದೆನಿಸುತ್ತದೆ ಅಲ್ವಾ? ಹೌದು! 2016ರಲ್ಲಿ ಸಾಧು ಕೋಕಿಲ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದರು. ಸೋವಾದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಗೌರಿಪುರದ ಗಯ್ಯಾಳಿಗಳು ಪ್ರಸಾರವಾಗಲಿದೆ. ಗೌರಿಪುರ ಒಂದು ಮಧ್ಯಮ ವರ್ಗದ ಜನರು ವಾಸಿಸುವ ಕಾಲೋನಿ. ನಾಲ್ವರು ಗಯ್ಯಾಳಿಗಳು ಸ್ತ್ರೀ ಸಂಘ ಕಟ್ಟಿಕೊಂಡು ಹಪ್ಪಳ- ಸಂಡಿಗೆ ತಯಾರಿ ಮಾಡುತ್ತಾರೆ, ಇವರಿಗೆ ಇಡೀ ಕಾಲೋನಿಯ ಜನರೇ ಹೆದರುತ್ತಾರೆ. ಇವರಲ್ಲಿ ಎಷ್ಟೇ ಸಮಸ್ಯೆ ಇದ್ರು, ಹೊರಗಿನವರು ಬಂದರೆ ಮಾತ್ರ ಒಂದಾಗುತ್ತಾರೆ. ಈ ಗಯ್ಯಾಳಿಗರ ನಡುವೆ ಹುಡುಗಿಯೊಬ್ಬಳು ತಮ್ಮ ತಂದೆಯ ನಿಗೂಢ ಸಾವಿಗೆ ಕಾರಣ ಹುಡುಕಿಕೊಂಡು ಬರುತ್ತಾಳೆ. ಗಯ್ಯಾಳಿಗಳ ಗಲಾಟೆ ಹುಡುಗಿಯ ಹುಡುಕಾಟ ಧಾರಾವಾಹಿ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.