ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೇಖಕ ಕೆ.ಬಿ.ಸಿದ್ದಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ತುಮಕೂರು(ಅ.19): ಕವಿ, ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೇಖಕ ಕೆ.ಬಿ.ಸಿದ್ದಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೂಲತಃ ಮಾಗಡಿ ತಾಲೂಕು ಕುದೂರು ಹೋಬಳಿ ಕೆಂಕೆರೆ ಗ್ರಾಮದ ಸಿದ್ದಯ್ಯ ತುಮಕೂ ರಿನ ಸಿದ್ದಾ ರ್ಥ ಪದ ವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆ ಶಿಕ್ಷ ಕರಾಗಿ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿ ದ್ದರು. 1970-80ರ ದಶಕದಲ್ಲಿ ದಲಿತ ಚಳವಳಿಗೆ ಪಾದಾರ್ಪಣೆ ಮಾಡಿದ ಅವರು, ಈವರೆಗೆ ದಕ್ಕಲ ಕಥಾದೇವಿ, ಬಕಾಲ, ಗಲ್ಲೆ ಭಾನಿ, ಅನಾ ಥ್ಮ ಖಂಡಕಾವ್ಯ ರಚಿಸಿದ್ದಾರೆ.
undefined
ಝೀಬ್ರಾ ಕ್ರಾಸ್‌ನಲ್ಲೇ ವಾಹನ ತಡೆದು ತಪಾಸಣೆ, ಟ್ರಾಫಿಕ್ ಪೊಲೀಸರ ಕಿರಿಕ್..!
ಅವರು ಪತ್ನಿ, ಪುತ್ರ.ಪುತ್ರಿ ಹಾಗೂ ಶಿಷ್ಯ ವೃಂದ ಅಗಲಿದ್ದಾರೆ. ಅಪಘಾತದಲ್ಲಿ ಗಾಯಾಗೊಂಡಿದ್ದ ಸಿದ್ದಯ್ಯ: ಕೆಲ ದಿನಗಳ ಹಿಂದೆ ತುಮಕೂರು ತಾಲೂಕು ಗೂಳೂರು ಬಳಿ ನಡೆದ ಅಪಘಾತ ದಲ್ಲಿ ಗಾಯ ಗೊಂಡಿದ್ದ ಇವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
18 ದಿವಸಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗಿನ ಜಾವ ೪.೩೦ಕ್ಕೆ ನಿಧನರಾಗಿ ದ್ದಾರೆ. ಕೆ.ಬಿ.ಸಿದ್ದಯ್ಯ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ದುಃ ಖತಪ್ತರಾದರು.
20 ವರ್ಷಗಳಿಂದ ತುಮಕೂರಲ್ಲೇ ವಾಸ:
20 ವರ್ಷಗಳಿಂದ ತುಮಕೂರಿನ ಉಪ್ಪಾರ ಹಳ್ಳಿಯಲ್ಲಿ ವಾಸವಿದ್ದ ಇವರು ಪಾವಗಡದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಚೀನಾ ದೇಶದಲ್ಲಿ ನಡೆದ ಬರಹಗಾ ರರ ಸಮಾವೇಶದಲ್ಲಿ ಕೆ.ಬಿ.ಸಿದ್ದಯ್ಯ ಕರ್ನಾಟಕ ವನ್ನು ಪ್ರತಿನಿಧಿಸಿದ್ದರು. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂದು ಜಿಲ್ಲೆಯಲ್ಲಿ ದೊಡ್ಡದಾಗಿ ಧ್ವನಿ ಎತ್ತಿದ್ದರು.
ಬೆಂಗಳೂರಿನಿಂದ ಸಿದ್ದಯ್ಯ ಪಾರ್ಥಿವ ಶರೀರರವನ್ನು ಮಧ್ಯಾಹ್ನ 2 ಗಂಟೆಗೆ ತುಮಕೂರಿಗೆ ತಲುಪಿತು. ಅಲ್ಲಿಂದ ನೇರವಾಗಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಟೌನ್‌ಹಾಲ್‌ಗೆ ತರಲಾಯಿತು. ಬಳಿಕ ಅವರ ಹುಟ್ಟೂರು ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ತುಮಕೂರು: ಚಿರತೆ ದಾಳಿಗೆ ವೃದ್ಧೆ ಬಲಿ..
ಸಾವಿರಾರು ಮಂದಿಯಿಂದ ಅಂತಿ ದರ್ಶನ ತುಮಕೂರಿನ ಟೌನ್‌ಹಾಲ್‌ನಲ್ಲಿ ಸಿದ್ದಯ್ಯ ಅವರ ಪಾರ್ಥಿವ ಶರೀರ ವೀಕ್ಷಿಸಲು ಸಾವಿರಾರು ಮಂದಿ ಹೋರಾಟಗಾರರು, ಸಾಹಿತಿಗಳು ಆಗಮಿಸಿದ್ದರು.
ಖ್ಯಾತ ಸಾಹಿತಿ ದೇವನೂರು ಮಹಾದೇವ, ದಲಿತ ಕವಿ ಸಿದ್ದಲಿಂಗಯ್ಯ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಎಚ್.ಗೋವಿಂದಯ್ಯ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಜನಪರ ಚಿಂತಕ ಕೆ.ದೊರೈರಾಜ್, ಜಿ.ಎಂ.ಶ್ರೀನಿವಾಸಯ್ಯ, ಹಿರಿಯ ಕಲಾವಿದ ಕೆ.ಟಿ.ಶಿವಪ್ರಸಾದ್, ಕೋಲಾರದ ವೆಂಕಟೇಶ್, ಮಾದಾರ ಚನ್ನಯ್ಯ ಸ್ವಾಮೀಜಿ, ವಿಮರ್ಶಕ ನಟರಾಜ್ ಹುಳಿಯಾರ್, ಸಾಹಿತಿ ನಟರಾಜ್ ಬೂದಾಳ್, ವಡ್ಡಗೆರೆ ನಾಗರಾಜಯ್ಯ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ರಾಕೇಶ್ ಸಿಂಗ್, ಸಾಹಿತಿ ಎನ್.ನಾಗಪ್ಪ, ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅಂತಿಮ ನಮನ ಸಲ್ಲಿಸಿದರು.