ಝೀಬ್ರಾ ಕ್ರಾಸ್‌ನಲ್ಲೇ ವಾಹನ ತಡೆದು ತಪಾಸಣೆ, ಟ್ರಾಫಿಕ್ ಪೊಲೀಸರ ಕಿರಿಕ್..!

By Kannadaprabha NewsFirst Published Oct 19, 2019, 11:07 AM IST
Highlights

ನೂತನ ಕಾನೂನು ನಿಯಮಗಳು ಬಂದ ನಂತರ ಪೊಲೀಸರು ಫುಲ್‌ ಸ್ಟ್ರಿಕ್ಟ್ ಆಗಿದ್ದಾರೆ. ಅದರೊಂದಿಗೇ ಒಂದಷ್ಟು ಎಡವಟ್ಟುಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಝೀಬ್ರಾ ಕ್ರಾಸ್‌ನಲ್ಲಿಯೇ ವಾಹನ ನಿಲ್ಲಿಸಿ ತಪಾಸಣೆ ನಡೆಸಿ ಉದ್ಧಟತನ ತೋರಿಸಿದ್ದಾರೆ.

ಮಂಗಳೂರು(ಅ.19): ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಚಾರಿ ಪೊಲೀಸರು, ತಮ್ಮಿಷ್ಟಬಂದ ಸ್ಥಳದಲ್ಲಿ ವಾಹನ ನಿಲ್ಲಿಸಿ ತಪಾಸಣೆ ನಡೆಸುವ ಮೂಲಕ ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ನಗರದಲ್ಲಿ ಝೀಬ್ರಾ ಕ್ರಾಸ್‌ನಲ್ಲಿ ವಾಹನ ನಿಲ್ಲಿಸಿ ತಪಾಸಣೆ ನಡೆಸುವ ಮೂಲಕ ನಾಗರಿಕರ ಸಂಚಾರಕ್ಕೆ ಅಡ್ಡಿಪಡಿಸಿದ ಕುರಿತಂತೆ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಂಗಳೂರಿನ ಜಿಎಚ್‌ಎಸ್ ರಸ್ತೆಯಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ.

ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!

ಸಾರ್ವಜನಿಕರಿಗೆ ರಸ್ತೆ ದಾಟಲು ನೆರವಾಗುವ ಝೀಬ್ರಾ ಕ್ರಾಸಿಂಗ್‌ನಲ್ಲೇ ವಾಹನಗಳನ್ನು ನಿಲ್ಲಿಸಿ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿರುವುದನ್ನು ರಹಸ್ಯವಾಗಿ ಚಿತ್ರೀಕರಿಸಿ ದೃಶ್ಯಮಾಧ್ಯಮಗಳಿಗೆ ಹರಿಯಬಿಟ್ಟಿದ್ದಾರೆ. ಪೊಲೀಸರ ಈ ಸ್ವೇಚ್ಛಾಚಾರ ವರ್ತನೆ ಈಗ ಯೂಟ್ಯೂಬ್ ಮೂಲಕ ವೈರಲ್ ಆಗುತ್ತಿದೆ.

ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ತಪಾಸಣೆ ನಡೆಸುವ ಪೊಲೀಸರ ಕ್ರಮಕ್ಕೆ ಆಕ್ಷೇಪವೂ ವ್ಯಕ್ತವಾಗುತ್ತಿದೆ. ಈ ಹಿಂದೆ ಕೂಡ ಮಂಗಳೂರಿನಲ್ಲಿ ಸಂಚಾರಿ ಪೊಲೀಸರು ತಮಗೆ ಯಾವುದೇ ಸಂಚಾರಿ ಕಾನೂನು ಅನ್ವಯವಾಗುವುದಿಲ್ಲ ಎಂಬಂತೆ ವರ್ತಿಸಿರುವುದು ಸಾಕಷ್ಟು ಟೀಕೆಗೆ ಒಳಗಾಗಿತ್ತು.

ಸಂಚಾರಿ ಪೊಲೀಸರ ಜತೆ ಕಿರಿಕ್‌ : ಇಬ್ಬರು ಯುವಕರ ಅರೆಸ್ಟ್...

ಈ ಬಗ್ಗೆ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರು, ಪೊಲೀಸರಿಗೂ ಸಂಚಾರಿ ನಿಯಮ ಅನ್ವಯವಾಗುತ್ತದೆ, ಅದನ್ನು ಪಾಲಿಸುವಂತೆ ಪೊಲೀಸ್ ಪರೇಡ್‌ನಲ್ಲಿ ಸೂಚನೆ ನೀಡಿದ್ದರು.

click me!