ಐಟಿ ದಾಳಿ: ಮಾಜಿ ಡಿಸಿಎಂ ಕಾಲೇಜಿನಲ್ಲಿ ಹುಂಡಿ ಹಣ..!

By Kannadaprabha NewsFirst Published Oct 12, 2019, 9:37 AM IST
Highlights

ಮಾಜಿ ಸಿಎಂ ಜಿ. ಪರಮೇಶ್ವರ್ ಅವರ ಒಡೆತನದ ಕಾಲೇಜಿನಲ್ಲಿ ದೇವಸ್ಥಾನದ ಹುಂಡಿ ಹಣ  ದೊರೆತಿದೆ. ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹುಂಡಿ ಒಡೆದ ಹಣ ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ.

ತುಮಕೂರು(ಅ.12): ಮಂಡ್ಯ ಜಿಲ್ಲೆಯ ಮುಳಕಟ್ಟಮ್ಮ ದೇವಾಲಯಕ್ಕೆ ಸೇರಿರುವ ಹಣ ಕೂಡ ದಾಳಿ ವೇಳೆ ಸಿಕ್ಕಿದೆ ಎನ್ನಲಾಗಿದೆ. ಕಳೆದ ಎರಡು ದಿವಸದ ಹಿಂದೆ ದೇವಾಲಯದ ಹುಂಡಿ ಹೊಡೆಯಲಾಗಿತ್ತು.

ಹುಂಡಿ ಹಣವನ್ನು ಸಿದ್ಧಾರ್ಥ ಕಾಲೇಜಿನಲ್ಲಿ ಇಡಲಾಗಿತ್ತು. ಮುಳಕಟ್ಟಮ್ಮ ಡಾ.ಜಿ.ಪರಮೇಶ್ವರ್‌ ಅವರ ಮನೆ ದೇವರು. ಈ ದೇವಸ್ಥಾನವನ್ನು ಪರಮೇಶ್ವರ್‌ ಅವರನ್ನೇ ಕಟ್ಟಿಸಿದ್ದರು. ಅಲ್ಲದೆ, ದೇವಸ್ಥಾನದ ಟ್ರಸ್ಟಿಕೂಡ. ಆ ಹಣ .40 ಲಕ್ಷ ಇದೆ ಎನ್ನಲಾಗಿದೆ.

ನಾಲ್ವರ ಮೇಲೆ ಅಧಿಕಾರಿಗಳ ಕಣ್ಣು:

ದಾಳಿ ಬೆನ್ನಲ್ಲೇ ಮೆಡಿಕಲ್‌ ಸೀಟು ಕೊಡಿಸುವ ಸಂಬಂಧ ನಾಲ್ವರ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದರು. ರವಿ, ಸೀಜು, ರಾಬಿನ್‌ ಹಾಗೂ ಸುಪ್ರೀತ್‌ ಅವರ ಮೇಲೆ ಕಣ್ಣು ನೆಟ್ಟಿದ ಐಟಿ ಅಧಿಕಾರಿಗಳು ಈ ನಾಲ್ವರ ಪೈಕಿ ಸುಪ್ರೀತ್‌ ಹೊರೆತುಪಡಿಸಿ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಪುತ್ರನಿಗೆ ಸಮನ್ಸ್‌..!

ಮೆಡಿಕಲ್‌ ಸೀಟು ಕೊಡಿಸುವ ವಿಚಾರದಲ್ಲಿ ಮಧ್ಯವರ್ತಿಗಳು ಕೂಡ ಇದ್ದು, ಈ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂಬಂಧ ಸುಪ್ರೀತ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಕೇರಳ ಮೂಲದವರಾದ ಸೀಜು ಮತ್ತು ರಾಬಿನ್‌ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ.

ಮೆಡಿಕಲ್ ಸೀಟ್‌ಗಳನ್ನು ಬ್ಲಾಕ್‌ ಮಾಡಿಸಿ ನಂತರ ಅದನ್ನು ಪೇಮೆಂಟ್‌ ಸೀಟ್‌ಗಳನ್ನಾಗಿ ಮಧ್ಯವರ್ತಿಗಳು ಪರಿವರ್ತಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಮೂವರು ಹಣಕಾಸಿನ ವ್ಯವಹಾರ ಮತ್ತು ಸೀಟು ಕೊಡಿಸುವ ಉಸ್ತುವಾರಿ ನೋಡಿಕೊಳ್ಳುತಿದ್ದರು ಎನ್ನಲಾಗಿದೆ.

ಪರಮೇಶ್ವರ್ ಒಡೆತನದ ಕಾಲೇಜು ಒಮ್ಮೆಯೂ ತೆರಿಗೆ ಕಟ್ಟಿಲ್ಲ..! ಕೋಟಿ ಕೋಟಿ ವಂಚನೆ

click me!