ಮಾಜಿ ಡಿಸಿಎಂ ಆಪ್ತ ರಮೇಶ್ ಆತ್ಮಹತ್ಯೆ ಹಿನ್ನೆಲೆ IT ಅಧಿಕಾರಿಗಳಿಗೆ ಬಿಗಿ ಭದ್ರತೆ

By Kannadaprabha NewsFirst Published Oct 13, 2019, 8:28 AM IST
Highlights

ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಆಪ್ತ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಐಟಿ ಅಧಿಕಾರಿಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪರಮೇಶ್ವರ್‌ ಆಪ್ತ ರಮೇಶ್‌ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹೊರಬೀಳುತ್ತಿದ್ದಂತೆ ಮೆಡಿಕಲ್‌ ಕಾಲೇಜಿಗೆ ಆಗಮಿಸಿದ ಎಎಸ್ಪಿ ಉದ್ದೇಶ್‌ ಅವರು ಪೊಲೀಸ್‌ ಭದ್ರತೆ ನಿಯೋಜಿಸಿದ್ದರು.

ತುಮಕೂರು(ಅ.13): ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರ ಆಪ್ತ ರಮೇಶ್‌ ಆತ್ಮಹತ್ಯೆ ಬೆನ್ನಲ್ಲಿ ತುಮಕೂರಿನ ಸಿದ್ಧಾರ್ಥ ಮೆಡಿಕಲ್‌ ಕಾಲೇಜಿನಲ್ಲಿ ತನಿಖೆ ನಡೆಸುತ್ತಿರುವ ಐಟಿ ಅಧಿಕಾರಿಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.

ಪರಮೇಶ್ವರ್‌ ಆಪ್ತ ರಮೇಶ್‌ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹೊರಬೀಳುತ್ತಿದ್ದಂತೆ ಮೆಡಿಕಲ್‌ ಕಾಲೇಜಿಗೆ ಆಗಮಿಸಿದ ಎಎಸ್ಪಿ ಉದ್ದೇಶ್‌ ಅವರು ಪೊಲೀಸ್‌ ಭದ್ರತೆ ನಿಯೋಜಿಸಿದ್ದಾರೆ. ಒಂದು ಡಿಆರ್‌ಡಿ ತುಕಡಿ ನಿಯೋಜಿಸಿರುವ ಎಎಸ್ಪಿ ಉದ್ದೇಶ್‌ ಅವರು ಒಬ್ಬರು ಎಎಸ್‌ಐ, ಎಎಸ್‌ಐ, 10 ಮಂದಿ ಪೇದೆಗಳನ್ನು ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಸೂಚಿಸಿದ್ದಾರೆ.

ಹೆಚ್ಚಿನ ಭದ್ರತೆಗೆ ಆಗಮಿಸಿದ ಸಿಬ್ಬಂದಿ:

ಪರಮೇಶ್ವರ್‌ ಆಪ್ತ ರಮೇಶ್‌ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಪರಮೇಶ್ವರ್‌ ಬೆಂಬಲಿಗರು ದೂರಿದ ಬೆನ್ನಲ್ಲೇ ಮತ್ತೊಂದು ವಾಹನದಲ್ಲಿ ಪೊಲೀಸರು ಭದ್ರತೆಗೆ ಆಗಮಿಸಿದರು. ಕಳೆದ ಎರಡು ದಿವಸಗಳಿಂದ ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮೂರನೇ ದಿನವಾದ ಶನಿವಾರ ಕೂಡ ಶೋಧ ಮುಂದುವರಿಸಿದ್ದರು.

60 ಗಂಟೆಗಳ ಪರಶೀಲನೆ ಅಂತ್ಯ:

ಡಾ. ಜಿ. ಪರಮೇಶ್ವರ್‌ ಮಾಲಿಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಸುದೀರ್ಘ 60 ಗಂಟೆಗಳ ಕಾಲ ತಪಾಸಣೆ ನಡೆಸಿ ದಾಳಿ ಅಂತ್ಯಗೊಳಿಸಿದ್ದಾರೆ.

ಪರಮೇಶ್ವರ್ ಒಡೆತನದ ಕಾಲೇಜು ಒಮ್ಮೆಯೂ ತೆರಿಗೆ ಕಟ್ಟಿಲ್ಲ..! ಕೋಟಿ ಕೋಟಿ ವಂಚನೆ

ಮಾಜಿ ಡಿಸಿಎಂ ಒಡೆತನದ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಕಳೆದು ಎರಡು ದಿನಗಳಿಂದ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದರು. ಆದರೆ, ಶನಿವಾರ ಪರಮೇಶ್ವರ್‌ ಅವರ ಅಪ್ತ ರಮೇಶ್‌ ಅತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ದಾಳಿ ಮೊಟಕುಗೊಳಿಸಿದ 19 ಜನ ಅಧಿಕಾರಿಗಳ ತಂಡ ಸಿಕ್ಕ ಎಲ್ಲಾ ದಾಖಲೆಪತ್ರಗಳನ್ನು ತೆಗೆದುಕೊಂಡು ಬೆಂಗಳೂರಿಗೆ ವಾಪಾಸ್‌ ಆಯಿತು.

ಐಟಿ ದಾಳಿ: ಮಾಜಿ ಡಿಸಿಎಂ ಕಾಲೇಜಿನಲ್ಲಿ ಹುಂಡಿ ಹಣ..!

click me!