ಮಧುಗಿರಿ ಜಿಲ್ಲಾ ಕೇಂದ್ರ: ಸಿಎಂಗೆ 22 ಪುಟದ ಮನವಿ

By Kannadaprabha NewsFirst Published Oct 17, 2019, 11:01 AM IST
Highlights

ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಶಾಸಕ ಎಂ.ವಿ.ವೀರಭದ್ರಯ್ಯ 2 ಪುಟಗಳ ಸುದೀರ್ಘ ಮನವಿ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷದ ಮುಖಂಡರು ಪಕ್ಷತೀತಾವಾಗಿ ತ್ರಿಕರ್ಣ ವೂರ್ಪಕವಾಗಿ ಜಿಲ್ಲೆ ಮಾಡಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
 

ತುಮಕೂರು(ಅ.17): ರಾಜ್ಯದಲ್ಲಿ ನೂತನ ಜಿಲ್ಲೆಗಳ ಉಗಮವಾಗುತ್ತಿದ್ದು, ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ 22 ಪುಟಗಳ ಸುದೀರ್ಘ ಮನವಿಯನ್ನು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅ.11ರಂದು ಸಲ್ಲಿಸಿದ್ದೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದ್ದಾರೆ.

ಮಧುಗಿರಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಮಧುಗಿರಿ ಕ್ಷೇತ್ರ ತೀರಾ ಹಿಂದುಳಿದ ಹಾಗೂ ಸತತ ಬರಗಾಲದಿಂದ ಕೂಡಿದ ತಾಲೂಕಾಗಿದೆ. ಇಲ್ಲಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಮರಿಚಿಕೆಯಾಗಿದ್ದು, ಬಡತನದಿಂದ ನಿರುದ್ಯೋಗ ಹೆಚ್ಚಾಗಿದೆ ಎಂದಿದ್ದಾರೆ.

ಮತದಾರರಿಗೆ ಹಂಚಲು ತಂದಿದ್ದ ಮದ್ಯ ನಾಶ

1915 ರಲ್ಲೇ ಉಪವಿಭಾಗವಾಗಿದ್ದು ಆಂದ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪಾವಗಡ, ಶಿರಾ, ಕೊರಟಗೆರೆ ಮತ್ತು ಮಧುಗಿರಿ ಈ ನಾಲ್ಕು ತಾಲೂಕುಗಳನ್ನು ಒಳಗೊಂಡಂತೆ ಮಧುಗಿರಿ ಜಿಲ್ಲಾ ಕೇಂದ್ರಕ್ಕೆ ಅಗತ್ಯ ಅರ್ಹತೆ ಪಡೆದಿದೆ. ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿದೆ. ಆದ ಕಾರಣ ಈ ಬಾರಿ ಮಧುಗಿರಿಯನ್ನು ಜಿಲ್ಲಾ ಕೇಂದ್ರಕ್ಕೆ ಪರಿಗಣಿಸಲು ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷದ ಮುಖಂಡರು ಪಕ್ಷತೀತಾವಾಗಿ ತ್ರಿಕರ್ಣ ವೂರ್ಪಕವಾಗಿ ಜಿಲ್ಲೆ ಮಾಡಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ಮನವಿಯನ್ನು ಕಂದಾಯ ಸಚಿವರಿಗೆ ಮತ್ತು ನಮ್ಮ ಜಿಲ್ಲಾ ಮಂತ್ರಿ ಜೆ.ಸಿ.ಮಾಧುಸ್ವಾಮಿ ಅವರಿಗೂ ಸಲ್ಲಿಸಿರುವುದಾಗಿ ವೀರಭದ್ರಯ್ಯ ತಿಳಿಸಿದ್ದಾರೆ.

ಬಿಎಸ್‌ವೈ ಪತ್ನಿ ಹೆಸರಲ್ಲಿ ಸಮುದಾಯ ಭವನ, ಸ್ಥಳ ಪರಿಶೀಲನೆ

click me!