
ತುಮಕೂರು(ಅ.17): ಅಬಕಾರಿ ಅಧಿಕಾರಿಗಳು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಜಪ್ತಿ ಮಾಡಿದ್ದ ಸುಮಾರು 1.75 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಬುಧವಾರ ಪಾವಗಡದಲ್ಲಿ ತಾಲೂಕು ಕಚೇರಿ ಬಳಿ ನಾಶಮಾಡಲಾಯಿತು.
ಚುನಾವಣೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ ಅಕ್ರಮವಾಗಿ ಸಂಗ್ರಹಿಸಿದ್ದ ಹಾಗೂ ಮಾರಾಟ ಮಾಡಲು ತಂದಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ವಶಪಡಿಸಿಕೊಂಡಿದ್ದರು.
ರಸ್ತೆ ಮಧ್ಯೆ ಶಾಲಾ ಬಸ್ ನಿಲ್ಲಿಸಿ ಕುಡಿಯಲು ಕುಳಿತ ಚಾಲಕ
ಈ ಹಿನ್ನೆಲೆಯಲ್ಲಿ ಜಪ್ತಿ ಮಾಡಿದ್ದ ಅಕ್ರಮ ಮದ್ಯವನ್ನು ರಾಜ್ಯ ಅಬಕಾರಿ ಇಲಾಖೆ ಉಪಯುಕ್ತರ ಆದೇಶ ಮೇರೆಗೆ ಸ್ಟಾಕ್ ಮಾಡಿದ್ದ 487,980 ಲೀಟರ್ ಬಿಯಾರ್, 10,550 ಲೀಟರ್ ಸೇಂದಿ, 99,660 ಲೀಟರ್ ಇತರೆ ವೈನ್ ಸೇರಿ ಸುಮಾರು .1.75 ಲಕ್ಷ ಮೌಲ್ಯದ ಮದ್ಯದ ಬಾಟಲ್ಗಳನ್ನು ಸಾವರ್ಜನಿಕರ ಸಮ್ಮುಖದಲ್ಲಿಯೆ ನಾಶ ಮಾಡಲಾಯಿತು.
ಮೈಸೂರು: ವಾಲ್ಮೀಕಿ ಜಯಂತಿಯಲ್ಲಿ ಕಲ್ಲು ತೂರಾಟ, 32 ಜನರಿಗೆ ನ್ಯಾಯಾಂಗ ಬಂಧನ
ಅಬಕಾರಿ ಇಲಾಖೆ ವಲಯ ವಿಭಾಗದ ಸಿಪಿಐ ಎಚ್.ಕೆ.ನಾಗರಾಜ್, ಸಹಾಯಕ ಅಬಕಾರಿ ನಿರೀಕ್ಷಕ ಶಿವಬಸಯ್ಯ, ಎಸ್ಬಿಸಿಎಲ್ ಡಿಪೋ ಚಳ್ಳಕರೆ ವ್ಯವಸ್ಥಾಪಕ ಬಸವರಾಜ್, ಪೃಥ್ವಿ, ಕೆ.ರಾಜು ಸೇರಿದಂತೆ ಸ್ಥಳೀಯ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿದ್ದರು.
‘ಸೇವಾ ಸರ್ವೀಸ್' ರೈಲು ಸೇವೆ ಶೀಘ್ರ ಆರಂಭ