ಮೈಸೂರು: ವಾಲ್ಮೀಕಿ ಜಯಂತಿಯಲ್ಲಿ ಕಲ್ಲು ತೂರಾಟ, 32 ಜನರಿಗೆ ನ್ಯಾಯಾಂಗ ಬಂಧನ

By Kannadaprabha NewsFirst Published Oct 15, 2019, 9:07 AM IST
Highlights

ಮಹರ್ಷಿ ವಾಲ್ಮಿಕಿ ಜಯಂತಿಯಂದು ಕಲ್ಲು ತೂರಾಟ ನಡೆಸಿದ್ದ 32 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅ. 28 ರವರೆವಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೈಸೂರು(ಅ.15): ನಂಜನಗೂಡು ಪಟ್ಟಣದಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿಯಂದು ಡಿಜೆಗೆ ಪೊಲೀಸರು ಅವಕಾಶ ನಿರಾಕರಿಸಿದರೆಂದು ಕಲ್ಲು ತೂರಾಟ ನಡೆಸಿದ್ದ 32 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅ. 28 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಶೇಖರ್‌ ಹೇಳಿದ್ದಾರೆ.

ಹೆಡತಲೆ ಗ್ರಾಮದ ಕುಮಾರ್‌ ಬಿನ್‌ ಬಸವನಾಯ್ಕ, ಸುಂದರ್‌ ಬಿನ್‌ ಹನುಮಂತನಾಯ್ಕ, ಕೃಷ್ಣ ಬಿನ್‌ ಆನಂದನಾಯ್ಕ, ಹರತಲೆ ಗ್ರಾಮದ ರಾಜೇಶ್‌ ಬಿನ್ಮಹದೇವನಾಯ್ಕ, ಕೂಗಲೂರು ಗ್ರಾಮದ ರಂಗನಾಯ್ಕ ಬಿನ್‌ ದೊಡ್ಡನಾಯ್ಕ, ಕಳಲೆ ಗ್ರಾಮದ ವಿನೋದ್‌ ಬಿನ್‌ ಅಂಕನಾಯ್ಕ, ತ್ಯಾಗರಾಜ ಕಾಲೋನಿಯ ಗುರುಪ್ರಸಾದ್‌ ಬಿನ್‌ ರಾಮನಾಯ್ಕ, ಸೂರಳ್ಳಿ ಗ್ರಾಮದ ಕೃಷ್ಣನಾಯ್ಕ ಬಿನ್‌ ಕರಿನಾಯ್ಕ, ಬಾಬು ಬಿನ್‌ ಬಸವರಾಜು, ಬಿಳಿಗಿರಿನಾಯ್ಕ ಬಿನ್ಮಹದೇವನಾಯ್ಕ,ಗೀಕಹಳ್ಳಿ ಹುಂಡಿ ಗ್ರಾಮದ ಶ್ರೀಧರ್‌ ಬಿನ್ಮಹದೇವನಾಯ್ಕ, ಗೋಣಹಳ್ಳಿಯ ಸಿದ್ದಪ್ಪ, ಹಾಡ್ಯ ಗ್ರಾಮದ ವಿನೋದ ಕುಮಾರ, ಮಹೇಶ್‌ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.

ಮೈಸೂರು ಮೃಗಾಲಯದ Weekly Off ರದ್ದು: ಪ್ರವಾಸಿಗರು ಎಲ್ಲಾ ದಿನವೂ ಹೋಗ್ಬಹುದು

ಮಲ್ಲಹಳ್ಳಿ ಗ್ರಾಮದ ಶಂಕರ್‌, ತಗಡೂರು ಗ್ರಾಮದ ಕುಮಾರ ನಾಯ್ಕ, ಹೆಡತಲೆ ಗ್ರಾಮದ ಮಹೇಶ, ರಾಘವೇಂದ್ರ, ಗೀಕಹಳ್ಳಿಹುಂಡಿ ಕುಮಾರ, ಅಭಿಲಾಷ, ಯೋಗೀಶ, ಕಳಲೆ ಗ್ರಾಮದ ಮಹೇಶ, ಶಿವಕುಮಾರ ನಾಯ್ಕ, ರಮೇಶ, ನವೀನ, ಸ್ವಾಮಿ, ಸುರೇಶ, ಕುಮಾರ ಅಲಿಯಾಸ್‌ ಶೆಟ್ಟಿ, ಕುಪ್ಪರವಳ್ಳಿಯ ಸಿದ್ದರಾಜು ಸೇರಿದಂತೆ 32 ಜನರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದು ಸೋಮವಾರ ನಂಜನಗೂಡಿನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಬಳಿ ಹಾಜರು ಪಡಿಸಿದಾಗ ನ್ಯಾಯಾಧೀಶರಾದ ಗಣಪತಿ ನಾಯಕ್‌ ಆರೋಪಿಗಳನ್ನು ಅ. 28ರವರೆವಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತೀರ್ಪು ನೀಡಿದ್ದಾರೆ.

ಆರೋಪಗಳೇನೇನು?

ಆರೋಪಿಗಳ ಮೇಲೆ ಅಕ್ರಮ ಕೂಟ, ಸರ್ಕಾರಿ ವಾಹನಗಳ ಮೇಲೆ ಕಲ್ಲು ಎಸೆತ, ಸಾರ್ವಜನಿಕರ ಮೇಲೆ ಕಲ್ಲು ತೂರಾಟ, ವಾಹನ ಸಂಚಾರಕ್ಕೆ ಅಡ್ಡಿ, ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಗಳ ಮೇಲೆ ಕಲ್ಲು ಎಸೆತ, ಕೆಎಸ್‌ಆರ್‌ಟಿಸಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲು ಮಾಡಲಾಗಿದೆ.

ಸಿದ್ದು-ಪ್ರಸಾದ್ ಮುಖಾಮುಖಿ: ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು! ಮುಂದೇನಾಯ್ತು?

ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ನಾಯಕರ ಸಂಘದ ವತಿಯಿಂದ ಮಹರ್ಷಿ ವಾಲ್ಮಿಕಿ ಜಯಂತೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೆರವಣಿಗೆಗೆ ಒಂದು ಡಿಜೆ ಸೌಂಡ್‌ ಸಿಸ್ಟಮ್‌ಗೆ ಮಾತ್ರ ಅವಕಾಶ ನೀಡಲಾಗಿತ್ತು, ಆದರೆ ಸೂರಳ್ಳಿ ಮತ್ತು ಕಳಲೆ ಗ್ರಾಮದಿಂದ ಮತ್ತೆ ಎರಡು ಡಿಜೆ ಬಂದಿದ್ದರಿಂದ ಪೊಲೀಸರು ಡಿಜೆಗೆ ಅವಕಾಶ ನಿರಾಕರಿಸಿ ವಾಪಸ್‌ ಕಳುಹಿಸಲು ಮುಂದಾದರು.

ಮೈಸೂರು ವಿಭಜನೆಗೆ ಒತ್ತಾಯ : ವಿಶ್ವನಾಥ್ ‘ದೂರದೃಷ್ಟಿ’ಗೆ ಸಾ.ರಾ. ಮಹೇಶ್ ಕುಚೋದ್ಯ!

ಇದರಿಂದ ಜಯಂತಿಯಲ್ಲಿ ಉದ್ರಿಕ್ತಗೊಂಡ ಯುವಕರ ಗುಂಪು ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾಗಿ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಎರಡು ಕೆಎಸ್‌ಆರ್‌ಟಿಸಿ ಬಸ್‌ನ ಮೇಲೆ ಕಲ್ಲು ತೂರಾಟ ನಡೆಸಿ ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಜಖಂಗೊಳಿಸಿ ದಾಂಧಲೆ ನಡೆಸಿದ್ದಾರೆ.

ಅಲ್ಲದೆ ಕಲ್ಲು ತೂರಾಟದ ವೇಳೆಯಲ್ಲಿ ಡಿವೈಎಸ್ಪಿ ಮಲ್ಲಿಕ್‌ ಅವರ ಬೆನ್ನಿನ ಭಾಗಕ್ಕೆ ಬಿದ್ದು ಗಾಯ ಗೊಂಡಿದ್ದಲ್ಲದೆ, ಶ್ರೀಕಂಠೇಶ್ವರ ದೇವಾಲಯದ ಕಲಾಮಂದಿರದಲ್ಲಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ಶಾಸಕ ಬಿ. ಹರ್ಷವರ್ಧನ್‌ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಜಯಂತೋತ್ಸವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ನಂಜನಗೂಡು : ಪೊಲೀಸ್ ಅಧಿಕಾರಿ ಜೇಬಿನಿಂದ ಕಳ್ಳತನ

ವೇದಿಕೆಯ ಚಾವಣಿ ಮತ್ತು ಕಿಟಕಿಗಳ ಮೇಲೆ ಕಲ್ಲು ತೂರಾಟ ನಡೆಸದ್ದರಿಂದಾಗಿ ಸ್ಥಳಕ್ಕೆ ಆಗಮಿಸಿದ ಎಸ್ಪಿ ರಿಷ್ವಂತ್‌, ಎಸ್ಪಿ ಸ್ನೇಹಾ ಕಲ್ಲು ತೂರಾಟ ನಡೆಸುತ್ತಿದ್ದ ಸುಮಾರು 50 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದರು.

'ಮೈಸೂರಲ್ಲಿ ಮತ್ತೊಂದು ಹೊಸ ತಾಲೂಕು’

click me!