ರಸ್ತೆ ಮಧ್ಯೆ ಶಾಲಾ ಬಸ್‌ ನಿಲ್ಲಿಸಿ ಕುಡಿಯಲು ಕುಳಿತ ಚಾಲಕ

Published : Oct 16, 2019, 11:49 AM IST
ರಸ್ತೆ ಮಧ್ಯೆ ಶಾಲಾ ಬಸ್‌ ನಿಲ್ಲಿಸಿ ಕುಡಿಯಲು ಕುಳಿತ ಚಾಲಕ

ಸಾರಾಂಶ

ಬಸ್ ಚಾಲಕನೋರ್ವ ರಸ್ತೆ ಮಧ್ಯದಲ್ಲಿಯೇ ಬಸ್ ನಿಲ್ಲಿಸಿ ಕುಡಿಯಲು ಕುಳಿತ ಘಟನೆ ನಡೆದಿದೆ. 

ತುಮಕೂರು [ಅ.16]:  ಕುಡಿತ ಚಟಕ್ಕಾಗಿ ಶಾಲಾ ಬಸ್‌ ಡ್ರೈವರ್‌ ಒಬ್ಬ ಮಕ್ಕಳನ್ನು ನಡುರಸ್ತೆಯಲ್ಲಿ ನಿಲ್ಲಿಸಿದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ಐ.ಡಿ ಹಳ್ಳಿಯಿಂದ ಖಾಸಗಿ ಪಬ್ಲಿಕ್‌ ಶಾಲೆಗೆ ಪ್ರತಿದಿನ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಂಗಳವಾರ ಸಂಜೆ 4.30ಕ್ಕೆ ಖಾಸಗಿ ಪಬ್ಲಿಕ್‌ ಸ್ಕೂಲ್‌ ಬಿಟ್ಟ ಚಾಲಕ ಮಾರ್ಗ ಮಧ್ಯೆ ರಸ್ತೆ ಪಕ್ಕದಲ್ಲೇ ಬಸ್‌ ನಿಲ್ಲಿಸಿ ಸ್ನೇಹಿತರೊಂದಿಗೆ ಕುಡಿಯಲು ಕುಳಿತಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಜೆ 6 ಗಂಟೆಯಾದರೂ ಮಕ್ಕಳು ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ಶಾಲೆಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಶಾಲಾ ಬಸ್‌ ಚಾಲಕ ರಸ್ತೆ ಪಕ್ಕದಲ್ಲೇ ಬಸ್‌ ನಿಲ್ಲಿಸಿ ಸ್ನೇಹಿತರೊಂದಿಗೆ ಕುಡಿಯುತ್ತಾ ಇರುವ ವಿಷಯ ಬೆಳಕಿಗೆ ಬಂದಿದೆ.

 ಕೂಡಲೇ ಶಾಲಾ ಮುಖ್ಯಸ್ಥರು ಮತ್ತೊಬ್ಬ ಡ್ರೈವರ್‌ನನ್ನು ಕಳಿಸಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಬಂದಿದ್ದಾರೆ. ಬಸ್‌ ಚಾಲಕ ಬಸ್‌ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!