ತುಮಕೂರು ವಂಚನೆಯಲ್ಲಿ ಮಹಿಳಾ ಹಸ್ತ? ಸಫೀಯಾ ಖಾನ್ ಬಂಧನ

By Web DeskFirst Published Jun 16, 2019, 6:49 PM IST
Highlights

ತುಮಕೂರಿನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ  ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ತುಮಕೂರು[ಜೂ. 16]  ತುಮಕೂರಿನ  ಈಝಿ ಮೈಂಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು  ಆರೋಪಿ ಮಹಮದ್ ಅಸ್ಲಾಂ ಪತ್ನಿ ಸಫೀಯಾ ಖಾನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಸ್ಲಾಂ ಸಂಬಂಧಿ ಇಬ್ರಾಹಿಂ ಕಲಿಲ್ ಉಲ್ಲಾ ಅವರನ್ನು ಸಹ ಬಂಧಿಸಲಾಗಿದೆ.

ಜನರಿಗೆ ಕೋಟ್ಯಂತರ ರೂ. ವಂಚಿಸಿದ್ದ ಆರೋಪ ಈಜಿ ಮೈಂಡ್ ಮೇಲೆ ಕೇಳಿ ಬಂದಿತ್ತು. ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಮಹಮದ್ ಪತ್ನಿ ಸಫೀಯಾ ಖಾನ್ ಎರಡನೇ ಆರೋಪಿಯಾಗಿ ವಿಚಾರಣೆ ಎದುರಿಸಬೇಕಾಗಿದೆ.

ತುಮಕೂರಿನಲ್ಲೂ IMA ರೀತಿಯದ್ದೇ ಭಾರೀ ವಂಚನೆ ಕೇಸ್

ಜತೆಗೆ ಅಸ್ಲಾಂ ಸಂಬಂಧಿ ಇಬ್ರಾಹಿಂ ಖಲೀಲ್, ಈಝಿ ಮೈಂಡ್ ಮ್ಯಾನೇಜರ್ ಶುಮಾಜ್ ಅಹಮದ್,  ಅಸಾದ್ ಎಂಬುವರ ಮೇಲೆ  ತುಮಕೂರು ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ತುಮಕೂರು ಶಾದಿ ಮಹಲ್‌ ಬಳಿ ಇರುವ ಈಝಿ ಮೈಂಡ್‌ ಮಾರ್ಕೆಟಿಂಗ್‌ ಲಿಮಿಟೆಡ್‌ ಎಂಬ ಸಂಸ್ಥೆ ಊಬರ್‌ ಮತ್ತು ಓಲಾ ಹಾಗೂ ಪೌಲ್ಟ್ರಿ ಫಾರಂಗಳಲ್ಲಿ ಹಣ ತೊಡಗಿಸಿ ಪ್ರತಿ ತಿಂಗಳು ಆದಾಯ ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ಭಾರೀ ಮೊತ್ತದ ಹಣ ಸಂಗ್ರಹಿಸಿತ್ತು. ಈ ಸಂಬಂಧ ಹೂಡಿಕೆದಾರರಿಗೆ ಬಾಂಡ್‌ ಕೂಡ ನೀಡಿತ್ತು.  ತುಮಕೂರಿನವನೇ ಆದ ಮಹಮ್ಮದ್‌ ಅಸ್ಲಂ ಎಂಬಾತ ಈ ವಂಚನೆ ಎಸಗಿದ್ದ ಆರೋಪ ಕೇಳಿ ಬಂದಿತ್ತು.

click me!