ತುಮಕೂರು: ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ ಬಯಲಿಗೆಳೆದ ACB

Published : Apr 30, 2019, 02:15 PM ISTUpdated : Apr 30, 2019, 02:18 PM IST
ತುಮಕೂರು: ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ ಬಯಲಿಗೆಳೆದ ACB

ಸಾರಾಂಶ

ತುಮಕೂರು ಜಿಲ್ಲೆ ತಿಪಟೂರು  ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ| ಎಸಿಬಿ ಅಧಿಕಾರಿಗಳಿಗೆ ಬಲೆಗೆ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್|  20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಪಿಪಿ| ಕೆ ಇ‌ ಬಿ‌ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ

ತುಮಕೂರು, (ಏ.30): ತಿಪಟೂರು ನ್ಯಾಯಾಲಯ ಆವರಣದಲ್ಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. 

ತುಮಕೂರು  ಜಿಲ್ಲೆಯ ತಿಪಟೂರು ಮುನಿಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ. ಲಂಚ ಸ್ವೀಕರಿಸುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಕೆಇ‌ಬಿ ಇಂಜಿನಿಯರ್ ಗುರುಬಸವಸ್ವಾಮಿ ಎಂಬುವರರಿಂದ  20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳು ಹಿಡಿದಿದ್ದಾರೆ.

ಎಸಿಬಿ ದಾಳಿಗೊಳಗಾದವರಿಗೆ ಶಿಕ್ಷೆ ಆಗುತ್ತಿಲ್ಲ ಏಕೆ?

2015ರಲ್ಲಿ ವಿದ್ಯುತ್ ಕಂಬ ವೃದ್ದೆ ಮೇಲೆ ಬಿದ್ದು ಕಾಲು ತುಂಡಾಗಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಈ ಪ್ರಕರಣದ ವಕಾಲತ್ತು ವಹಿಸಿದ್ದರು. ನಿನ್ನೆ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಗೊಂಡಿತ್ತು. 

ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಸದಿರಲು 40000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಮೊದಲಿಗೆ 20 ಸಾವಿರ ಅಕೌಂಟ್ ಮೂಲಕ ಪಡೆದಿದ್ದರು. ನಂತರ  20 ಸಾವಿರ ಹಣ ನೇರವಾಗಿ ಪಡೆಯುವಾಗ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಸಿಕ್ಕಿ ಬಿದ್ದಿದ್ದಾರೆ. 

PREV
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು