ತುಮಕೂರು: ದೇವರ ಪ್ರಸಾದ ಸ್ವೀಕರಿಸಿದ 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

By Web DeskFirst Published Apr 28, 2019, 6:41 PM IST
Highlights

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ಪ್ರಸಾದ ದುರಂತ ಮಾಸವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದೇವಸ್ಥಾನದ ಪ್ರಸಾದ ದುರಂತ ಸಂಭವಿಸಿದೆ.

ತುಮಕೂರು, [ಏ.28]: ದೇವರ ಪ್ರಸಾದ ಸೇವಿಸಿದ 40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ.

ಚಿನ್ನಪ್ಪನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಇಂದು [ಭಾನುವಾರ] ಹರಿಸೇವೆ ಕಾರ್ಯಕ್ರಮ ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಅನ್ನಪ್ರಸಾದ ವಿತರಿಸಲಾಗಿತ್ತು. ಈ ಪ್ರಸಾದ ಸ್ವೀಕರಿಸಿದ ಭಕ್ತರಲ್ಲಿ 40ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ.

ಸುಳ್ವಾಡಿ ವಿಷ ಪ್ರಕರಣ: ಪ್ರಸಾದದಲ್ಲಿತ್ತು ಮಾರಾಣಾಂತಿಕ ಕೀಟನಾಶಕ

ಅಸ್ವಸ್ಥಗೊಂಡವರನ್ನು  ಕೂಡಲೇ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಭಕ್ತರಲ್ಲಿ ಆತಂಕ ಮೂಡಿದೆ. ಈ ಕುರಿತು ಕಳ್ಳಂಬೆಳ್ಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ಕೆಲತಿಂಗಳ ಹಿಂದೆ ದುಷ್ಕರ್ಮಿಗಳು ಪ್ರಸಾದಕ್ಕೆ ವಿಷ ಬೆರೆಸಿದ್ದರಿಂದ, ಅದನ್ನು ಸೇವಿಸಿದ 17ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಶಿರಾದಲ್ಲೂ ಅಂಥದ್ದೇ ಘಟನೆ ನಡೆದಿರುವುದು ವಿಪರ್ಯಾಸ.

click me!