ಮಕ್ಕಳಾಟವೇ ಇಬ್ಬರು ಮುದ್ದು ಮಕ್ಕಳ ಜೀವಕ್ಕೆ ಮೃತ್ಯುವಾದ ಘಟನೆ ತುಮಕೂರಿನ ಮಧುಗಿರಿಯಲ್ಲಿ ನಡೆದಿದೆ. ಆಟವಾಡುತ್ತಿದ್ದವ ಅಣ್ಣ ತಂಗಿ ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪಿದ್ದಾರೆ.
ತುಮಕೂರು(ಅ.18): ಮಕ್ಕಳಾಟವೇ ಮೃತ್ಯುವಾಗಿ ಎರಗಿ ಅಣ್ಣ ತಂಗಿ ದಾರುಣವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಮಧುಗಿರಿಯ ಬ್ಯಾಲ್ಯ ಕೆರೆಯಲ್ಲಿ ನಡೆದಿದೆ.
ಶಾಲೆಗೆ ರಜೆ ಇದ್ದುದ್ದರಿಂದ 8 ಮಂದಿ ಪುಟಾಣಿ ಮಕ್ಕಳೆಲ್ಲೆ ಸೇರಿ ಅಪ್ಪ, ಅಮ್ಮನ ಆಟವಾಡುವ ರೀತಿ ಗಣೇಶನನ್ನು ಕೂರಿಸುವ ಆಟ ಆಡುತ್ತಿದ್ದರು. ಜೇಡಿಮಣ್ಣಿನಲ್ಲಿ ತಾವೇ ಗಣೇಶನ ವಿಗ್ರಹ ಮಾಡಿ ಅದಕ್ಕೆ ಕಾಡಿನಲ್ಲಿ ಸಿಗುವ ಹೂಗಳನ್ನು ತಂದು ಪೂಜೆ ನೆರವೇರಿಸಿ ಮೂರ್ತಿ ವಿಸರ್ಜಿಸುವ ವೇಳೆ ಅಣ್ಣ ತಂಗಿ ನೀರುಪಾಲಾಗಿದ್ದಾರೆ.
'JDS ಶಾಸಕರು BJP ಸಚಿವರನ್ನು ಭೇಟಿ ಮಾಡೋದು ಅನಿವಾರ್ಯ'..!
ಜೇಡಿ ಮಣ್ಣಿನಿಂದ ತಯಾರಾದ ಮಣ್ಣಿನ ಮೂರ್ತಿಯನ್ನು 8 ವರ್ಷದ ಅಶ್ವಿನಿ ಕೆರೆಗೆ ಬಿಡಲು ಹೋದಾಗ ಕಾಲು ಜಾರಿ ಬಿದ್ದಳು. ತನ್ನ ತಂಗಿ ನೀರಿಗೆ ಬಿದ್ದಿದ್ದನ್ನು ನೋಡಿದ ಆಕೆಯ ಅಣ್ಣ ದಿಲೀಪ್(11) ರಕ್ಷಿಸಲು ಹೋಗಿ ಆತ ಕೂಡ ಸಾವನ್ನಪ್ಪಿದ್ದಾನೆ.
ಬೆಳಗ್ಗೆಯಿಂದ ಮನೆ ಮುಂದೆ ಮಕ್ಕಳೆಲ್ಲಾ ಒಟ್ಟಾಗಿ ಕೈಯೆಲ್ಲಾ ಕೆಸರು ಮಾಡಿಕೊಂಡು ಗಣೇಶಮೂರ್ತಿಯನ್ನು ಮಾಡಿದರು. ಅರ್ಧ ಗಂಟೆ ಪೂಜೆ ಮಾಡಿ ವಿಸರ್ಜಿಸುವ ವೇಳೆ ಈ ದಾರುಣ ಘಟನೆ ನಡೆದಿದೆ.
ಬೈಕ್ ಸವಾರರವೇ ಹುಷಾರ್, ರಸ್ತೆ ನಡುವಲ್ಲೇ ತಡೆದು ವಾಹನ ದೋಚಿದ್ರು ಖತರ್ನಾಕ್ ಕಳ್ಳರು
ಗಣೇಶನ ಆಟವಾಡುತ್ತಿದ್ದ ಮಕ್ಕಳು ಇನ್ನು ಗಣೇಶಮೂರ್ತಿಯನ್ನು ವಿಸರ್ಜಿಸಿ ಮನೆಗೆ ಮರಳಿ ತಮ್ಮ ಪೋಷಕರನ್ನು ಸೇರಿಕೊಳ್ಳುವ ಕಾತುರದಲ್ಲಿದ್ದಾಗ ಈ ಘಟನೆ ನಡೆದಂತೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.
ಗ್ರಾಮದ ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿದ್ದು ಅವರ ಕುಟುಂಬದವರಿಗಷ್ಟೆಅಲ್ಲ ಇಡೀ ಗ್ರಾಮದ ಜನರನ್ನು ಕಣ್ಣೀರಿನಲ್ಲಿ ತೋಯಿಸುವಂತೆ ಮಾಡಿದೆ. ಸ್ಥಳಕ್ಕೆ ಕೊಡಿಗೇನಹಳ್ಳಿ ಪಿಎಸ್‌ಐ ಪಾಲಾಕ್ಷ ಪ್ರಭು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ದೇವರ ದರ್ಶನದ ವೇಳೆ ಸಿಎಂ ಯಡಿಯೂರಪ್ಪ ಕಾಲು ತೊಳೆದ ಅಭಿಮಾನಿ!