ಅಪಘಾತ ಪ್ರಕರಣ: ಶಾಸಕ ಸಿ.ಟಿ. ರವಿ ಕಾರು ಚಾಲಕ ಅರೆಸ್ಟ್

Published : Feb 19, 2019, 06:13 PM ISTUpdated : Feb 19, 2019, 06:21 PM IST
ಅಪಘಾತ ಪ್ರಕರಣ: ಶಾಸಕ ಸಿ.ಟಿ. ರವಿ ಕಾರು ಚಾಲಕ ಅರೆಸ್ಟ್

ಸಾರಾಂಶ

ಶಾಸಕ ಸಿ ಟಿ ರವಿ ಕಾರು ಡಿಕ್ಕಿ ಪ್ರಕರಣದಲ್ಲಿ ಚಾಲಕನನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಊರ್ಕೇನಹಳ್ಳಿ ಬಳಿ ನಡೆದಿದ್ದ ಕಾರು ಅಪಘಾತ.

ತುಮಕೂರು, [ಫೆ.19]: ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ಕಾರು ಡಿಕ್ಕಿ ಪ್ರಕರಣದಲ್ಲಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

 ಸಿ. ಟಿ. ರವಿ ಕಾರು ಚಾಲಕ ರುದ್ರೇಗೌಡ ಅಲಿಯಾಸ್ ಆಕಾಶ್ ನನ್ನು ಇಂದು [ಮಂಗಳವಾರ] ಮಧ್ಯಾಹ್ನ ಕುಣಿಗಲ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸೋಮವಾರ ತಡರಾತ್ರಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಊರ್ಕೇನಹಳ್ಳಿ ಬಳಿ ನಿಂತಿದ್ದ ಕಾರಿಗೆ ಸಿ.ಟಿ ರವಿ ಕಾರು ಡಿಕ್ಕಿ ಹೊಡೆದಿದೆ.

ಅಪಘಾತ ದುರದೃಷ್ಟಕರ, ನಾನು ಮಲಗಿದ್ದೆ: ಸಿ.ಟಿ. ರವಿ ಪ್ರತಿಕ್ರಿಯೆ

ಈ ಘಟನೆಯಲ್ಲಿ ಕನಕಪುರದ ಶಶಿಕುಮಾರ್ ಹಾಗೂ ಸುನೀಲಕುಮಾರ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪುನೀತಗೌಡ ಎಂಬುವರು ಸೇರಿದಂತೆ ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೂರಿನಲ್ಲಿ ಸಿ.ಟಿ. ರವಿ ಹೆಸರಿಲ್ಲ; ಚಾಲಕನ ವಿರುದ್ಧ ಮಾತ್ರ FIR!

ಸ್ಥಳಕ್ಕೆ ಕುಣಿಗಲ್ ಪೊಲೀಸರು ಆಗಮಿಸಿ ಜಾಗವನ್ನು ಮಹಜರು ಮಾಡಿದ್ದು, ಕಾರು ಚಾಲಕ ರುದ್ರೇಗೌಡ ಅಲಿಯಾಸ್ ಆಕಾಶ್ ವಿರುದ್ಧ ಐಪಿಸಿ ಸೆಕ್ಷನ್ 279. 337. 304[ಆ] ಅಡಿ ದೂರು ದಾಖಲಾಗಿತ್ತು.  

ಆದ್ರೆ ಅಪಘಾತಕ್ಕೆ ಸಂಬಂಧಿಸಿಂತೆ ಶಾಸಕ ಸಿ.ಟಿ. ರವಿ ವಿರುದ್ಧ ದೂರು ದಾಖಲಾಗಿಲ್ಲ. ಸಿ.ಟಿ.ರವಿ ಅವರು ಕೆಲಸದ ಮೇಲೆ ಚೆನ್ನೈಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!