ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ವಿನೇಶ್ ಪೋಗತ್ ಅಮಾನತು!

By Suvarna News  |  First Published Aug 10, 2021, 9:17 PM IST
  • ಟೋಕಿಯೋ ಒಲಿಂಪಿಕ್ಸ್  ಕುಸ್ತಿಯಲ್ಲಿ ಸೋಲು ಅನುಭವಿಸಿದ್ದ ವಿನೇಶ್ ಪೋಗತ್
  • ಸೋಲಿನ ಬಳಿಕ ಇದೀಗ ಅಮಾನತು ಶಿಕ್ಷೆ ವಿಧಿಸಿದ WFI
  • ಆಗಸ್ಟ್ 16ರೊಳಗೆ ಉತ್ತರಿಸಿದ್ದರೆ ನಿಷೇಧದ ಭೀತಿ

ನವದೆಹಲಿ(ಆ.10): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಭಾರತಕ್ಕೆ ಹೆಚ್ಚು ಸಂತಸ ತಂದಿದೆ. ಒಟ್ಟು7 ಪದಕ ಗೆದ್ದಿರುವ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಇನ್ನು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಹಲವು ಪದಕಗಳು ಕೂದಲೆಳೆಯುವ ಅಂತರದಲ್ಲಿ ಕೈತಪ್ಪಿದೆ. ಕ್ರೀಡಾಪಟುಗಳು ದಿಟ್ಟ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಈ ಸಂಭ್ರಮದ ನಡುವೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕುಸ್ತಿಪಟು ವಿನೇಶ್ ಪೋಗತ್‌ಗೆ ಆಘಾತ ಎದುರಾಗಿದೆ.

ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನ; ಕ್ರೀಡಾಪಟುಗಳ ನೋಡಲು ಮುಗಿಬಿದ್ದ ಫ್ಯಾನ್ಸ್!

Latest Videos

undefined

ಟೋಕಿಯೋ ಒಲಿಂಪಿಕ್ಸ್ ಕುಸ್ತಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ವಿನೇಶ್ ಪೋಗತ್‌ಗೆ ಇದೀಗ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ(WFI) ಶಿಕ್ಷೆ ವಿಧಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ವಿನೇಶ್ ಪೋಗತ್ ಅಮಾನತುಗೊಳಿಸಲಾಗಿದೆ. 

ಟೋಕಿಯೋ ಒಲಿಂಪಿಕ್ಸ್ ಗ್ರಾಮದಲ್ಲಿ ಇತರ ಕ್ರೀಡಾಪಟುಗಳ ಜೊತೆ ಅಭ್ಯಾಸ ಮಾಡಲು ವಿನೇಶ್ ನಿರಾಕರಿಸಿದ್ದರು. ಇನ್ನು ಟೀಂ ಇಂಡಿಯಾ ಪ್ರಾಯೋಜಕತ್ವದ ಕಿಟ್ ಧರಿಸಲು ನಿರಾಕರಿಸಿದ್ದರು. ಇದು ಕ್ರೀಡಾ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಶಿಸ್ತು ತೋರಿದ ಕಾರಣಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.

ಭಾರತವನ್ನು ಪ್ರತಿನಿಧಿಸಿದ ಎಲ್ಲರೂ ಚಾಂಪಿಯನ್‌: ಪ್ರಧಾನಿ ನರೇಂದ್ರ ಮೋದಿ

ವಿನೇಶ್ ಪೋಗತ್‌ಗೆ ನೋಟಿಸ್ ನೀಡಲಾಗಿದೆ. ಆಗಸ್ಟ್ 16ರೊಳಗೆ ಉತ್ತರಿಸಲು ಕೋರಲಾಗಿದೆ. ಸಮಂಜಸ ಹಾಗೂ ತೃಪ್ತಿದಾಯಕ ಉತ್ತರ ನೀಡದಿದ್ದರೆ ನಿಷೇಧದ ಶಿಕ್ಷೆ ವಿಧಿಸಲಾಗುತ್ತದೆ ಎಂದು WFI ಎಚ್ಚರಿಸಿದೆ. 

ವಿನೇಶ್ ಪೋಗತ್‌ಗೆ ಭಾರತ ಹಂಗೇರಿಯಾದಲ್ಲಿ ತರಬೇತಿ ನೀಡಿತ್ತು. ಕೋಚ್ ವೋಲರ್ ಅಕೋಸ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿನೇಶ್ ಹಂಗೇರಿಯಾದಿಂದ ಟೋಕಿಯೋಗೆ ಆಗಮಿಸಿದ್ದರು. ಒಲಿಂಪಿಕ್ಸ್ ಗ್ರಾಮದಲ್ಲಿ ನೀಡಿದ್ದ ಕೋಣೆಯಲ್ಲಿ ಉಳಿದುಕೊಳ್ಳಲು ವಿನೇಶ್ ನಿರಾಕರಿಸಿದ್ದರು. ಭಾರತದ ಇತರ ಕುಸ್ತಿಪಟುಗಳೊಂದಿಗೆ ಉಳಿದುಕೊಳ್ಳಲು ವಿನೇಶ್ ನಿರಾಕರಿಸಿದ್ದರು. ಇಷ್ಟೇ ಅಲ್ಲ ತನಗೆ ಬೇರೆ ಮಹಡಿಯಲ್ಲಿ ರೂಂ ನೀಡುವಂತೆ ಪಟ್ಟು ಹಿಡಿದಿದ್ದರು. 

ವಿಶೇಷ ಕೋಣೆ ನೀಡದಿದ್ದರೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಎಚ್ಚರಿಸಿದ್ದ ವಿನೇಶ್‌ಗೆ ಬೇರೆ ಕೋಣೆ ನೀಡಲಾಗಿತ್ತು. ಇನ್ನು ಭಾರತ ನೀಡಿದ್ದ ಜರ್ಸಿ ತೊಡದೆ ತಮ್ಮದೆ ಜರ್ಸಿ ತೊಟ್ಟು ಅಖಾಡಕ್ಕಿಳಿದಿದ್ದ ವಿನೇಶ್ ಇದೀಗ ಸಂಕಷ್ಟ ಎದುರಿಸಬೇಕಾಗಿದೆ.
 

click me!