* ಟೋಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
* ದಿಗ್ಗಜ ಮಿಲ್ಖಾ ನೆನಪು ಮಾಡಿಕೊಂಡ ಕ್ರೀಡಾಪಟು
* ಇದು ಇಡೀ ದೇಶದ ಆಶೀರ್ವಾದ
* ಮಧ್ಯಮ ವರ್ಗದಿಂದ ಬಂದ ಕ್ರೀಡಾಪಟು ಶ್ರಮ ಪಡಲೇಬೇಕಾಗುತ್ತದೆ
ನವದೆಹಲಿ(ಆ. 10) ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ ಬಂಗಾರದ ಪದಕವನ್ನು ದಿಗ್ಗಜ ಮಿಲ್ಖಾ ಸಿಂಗ್ ಅವರಿಗೆ ಅರ್ಪಣೆ ಮಾಡಿದ್ದರು.
ಮಿಲ್ಖಾ ಸಿಂಗ್ ಮತ್ತು ಪಟಿ ಉಷಾ ಕೊಂಚದರಲ್ಲಿ ಪದಕ ತಪ್ಪಿಸಿಕೊಂಡಿದ್ದರು. ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ನೀರಜ್ ಚೋಪ್ರಾ ಮಿಲ್ಕಾ ಸಿಂಗ್ ಸ್ಮರಣೆ ಮಾಡಿದ್ದಾರೆ.
undefined
ನಾನು ಯಾವಾಗಲೂ ಮಿಲ್ಖಾ ಸಿಂಗ್ ಅವರನ್ನು ಭೇಟಿ ಮಾಡಲು ಬಯಸುತ್ತಿದ್ದೆ. ಭಾರತದ ಅಥ್ಲೀಟ್ ಒಬ್ಬರು ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲವುದನ್ನು ಟಿವಿಯಲ್ಲಿ ಮಿಲ್ಖಾ ಸಿಂಗ್ ವೀಕ್ಷಣೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಮಿಲ್ಖಾ ಕನಸು ನನಸು ಮಾಡಿದ ನೀರಜ್ ಚೋಪ್ರಾ
ಹಲವಾರು ಸಂದರ್ಶನದಲ್ಲಿ ಮಿಲ್ಖಾ ಸಿಂಗ್ ಭಾರತದ ಅಥ್ಲೀಟ್ ಗಳ ಪ್ರಶಂಸೆ ಮಾಡಿದ್ದರು. ಪದಕ ಗೆಲ್ಲಬೇಕು ಎಂದು ಸದಾ ಬಯಸುತ್ತಿದ್ದರು. ನಾನು ಚಂಡೀಘಡ ಅಥವಾ ಪಟಿಯಾಲಕ್ಕೆ ತೆರಳಿದರೆ ಮಿಲ್ಖಾ ಅವರ ಆಶೀರ್ವಾದ ಪಡೆದುಕೊಳ್ಳಲು ಮುಂದಾಗುತ್ತಿದ್ದೆ ಎಂದು ತಿಳಿಸಿದ್ದಾರೆ.
ನಾನು ಸೇನೆಯಲ್ಲಿ ಸೇವೆ ಮಾಡುತ್ತಿರುವವನು, ದೇಶದಕ್ಕಾಗಿ ಆಡುವುದು ಬಹಳ ಖುಷಿ ನೀಡುವ ವಿಚಾರ. ಆಟದ ಅಂಕ ಗಳಿಕೆಯಲ್ಲಿ ಒಮ್ಮೆ ಹಿಂದಿದ್ದೆ. ಆದರೆ ಅಂತಿಮವಾಗಿ ಪದಕ ನನ್ನದು ಎಂದಾಗ ರಿಲಾಕ್ಸ್ ಆದೆ. ಆಟ ಯಾವುದೇ ಹಂತದಲ್ಲಿ ಬದಲಾಗಬಹುದು ಎಂಬುದು ಕ್ರೀಡಾಪಟುವಿಗೆ ಗೊತ್ತಿರಬೇಕು ಎಂದು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಜಾವೆಲಿನ್ ಥ್ರೋ ದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಯಾವ ಥ್ರೋ ಬೆಸ್ಟ್ ಎನ್ನುವ ಅರಿವು ಇರುತ್ತದೆ. ಇದು ಇಡೀ ದೇಶದ, ನನ್ನ ಕುಟುಂಬದ, ದಿಗ್ಗಜ ಆಟಗಾರರ ಆಶೀರ್ವಾದದಿಂದ ದಕ್ಕಿದ ಗೆಲುವು ಎಂದು ತಿಳಿಸಿದ್ದಾರೆ.
ನಾನು ಪದಕ ಗೆದ್ದಾಗ ಮಿಲ್ಖಾ ಸಿಂಗ್ ಮತ್ತು ಪಿಟಿ ಉಷಾ ಅವರಂತಹ ಪದಕದಿಂದ ತಪ್ಪಿಸಿಕೊಂಡ ಪೌರಾಣಿಕ ಕ್ರೀಡಾಪಟುಗಳ ಬಗ್ಗೆ ಯೋಚಿಸಿದೆ. ಮಿಲ್ಖಾ ಸಿಂಗ್ ಅವರು ಇನ್ನು ಮುಂದೆ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ಮೇಲಿನಿಂದ ನನ್ನನ್ನು ನೋಡುತ್ತಿದ್ದಾರೆ ಮತ್ತು ಆಶೀರ್ವದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, "ನೀರಜ್ ಹೇಳಿದರು.