ಕ್ರಿಕೆಟ್ ಬಿಟ್ಟರು ಭಾರತೀಯರು...ಒಲಿಂಪಿಕ್ಸ್ ಸಾಧನೆ ನಂತರ ಬದಲಾವಣೆ ಗಾಳಿ!

By Suvarna NewsFirst Published Aug 10, 2021, 6:50 PM IST
Highlights

* ಒಲಿಂಪಿಕ್ಸ್ ಪದಕ ಸಾಧನೆ ನಂತರ ದೇಶದಲ್ಲಿ ಕ್ರೀಡಾ ಬದಲಾವಣೆ ಗಾಳಿ
* ಕ್ರಿಕೆಟ್ ಬಿಟ್ಟು ಉಳಿದ ಆಟದ ಕಡೆ ಪಾಲಕರ ಒಲವು
* ಹಾಕಿ ಮತ್ತು ಫುಟ್ ಬಾಲ್ ಕಲಿಕೆಗೆ ಹೆಚ್ಚಾದ ನೋಂದಣಿ
* ಸಮೀಕ್ಷೆಯಲ್ಲಿ ಬಹಿರಂಗವಾದ ಪ್ರಮುಖ ಅಂಶಗಳು

ನವದೆಹಲಿ(ಆ.  10)  ಈ ಸಾರಿಯ ಒಲಿಂಪಿಕ್ಸ್ ನಲ್ಲಿ ಭಾರತ ಏಳುಪದಕ ಸಾಧನೆ ಮಾಡಿದೆ. ದೇಶದಲ್ಲಿ ಕ್ರಿಕೆಟ್ ಗೆ ಮೊದಲ ಆದ್ಯತೆ ಎನ್ನುವ ವಾತಾವರಣವೂ ನಿಧಾನಕ್ಕೆ ಬದಲಾವಣೆಯಾಗುತ್ತಿದೆ.

ಈ ಬಗ್ಗೆ ಸಮೀಕ್ಷೆ ಒಂದು ನಡೆದಿದ್ದು ಶೇ.  71  ರಷ್ಟು ಪಾಲಕರು ತಮ್ಮ ಮಕ್ಕಳಿಗೆ ಕ್ರಿಕೆಟ್ ಹೊರತಾದ ಆಟದಲ್ಲಿ ತೊಡಗಿಕೊಳ್ಳಿ ಎಂದು  ಹೇಳುತ್ತಿದ್ದಾರೆ. ಕ್ರಿಕೆಟ್ ಪಾರಮ್ಯ ಮೆರೆಯುತ್ತದ್ದ ದೇಶದಲ್ಲಿ ಇದೊಂದು ಬದಲಾವಣೆ ಗಾಳಿಗೆ ಕಾರಣವಾಗಿದೆ.

ಪದಕ ಗೆಲ್ಲುವುದನ್ನು ನೋಡಲು ಮಿಲ್ಖಾ ನಮ್ಮೊಂದಿಗೆ ಇರಬೇಕಿತ್ತು

ಮುಖ್ಯವಾಗಿ ಮಧ್ಯಮವರ್ಗದ ಪಾಲಕರು  ತಮ್ಮ ಮಕ್ಕಳನ್ನು ಕ್ರಿಕೆಟ್ ಹೊರತಾದ ಕ್ರೀಡೆಯಲ್ಲಿ ತೊಡಗಿಸಲು ಮುಂದಾಗಿದ್ದಾರೆ. ಏನೇ ಹೇಳಿದರೂ ಟೋಕಿಯೋ ಒಲಿಂಪಿಕ್ಸ್ ನಲ್ಲಿ  ಭಾರತ ಮಾಡಿದ ಸಾಧನೆ  ನಿಧಾನವಾಗಿ ಪರಿಣಾಮ ಬೀರಲು ಆರಂಭಿಸಿದೆ. 

ಲೋಕಲ್ ಸರ್ಕಲ್ಸ್ ಸಂಸ್ಥೆ ಮಾಡಿದ ಸಮೀಕ್ಷೆಯಲ್ಲಿ ಒಂದೊಂದೆ ವಿಚಾರಗಳು ವ್ಯಕ್ತವಾಗಿವೆ. ದೇಶದ 309 ಜಿಲ್ಲೆಗಳ 18 ನ ಸಾವಿರ ಪಾಲಕರ ಬಳಿ ಅಭಿಪ್ರಾಯ ಕಲೆಹಾಕಲಾಗಿದೆ. ಮಕ್ಕಳನ್ನು ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿ ಅಲ್ಲಿಯೇ ಉಜ್ವಲ ಭವಿಷ್ಯ ಕಾಣಬಹುದು ಎಂಬ ಅಭಿಪ್ರಾಯವೇ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗಿದೆ.

ಆಂಗ್ಲ ಮಾಧ್ಯಮದಲ್ಲಿಯೂ ಓದಿ

ಇದೇ ಅಂಶಗಳನ್ನು ಇಟ್ಟುಕೊಂಡು  2016 ರಲ್ಲಿ ಸಮೀಕ್ಷೆ ಮಾಡಲಾಗಿತ್ತು. ಆಗ  ಕೇವಲ  ಶೇ.  40 ರಷ್ಟು ಜನ ಕ್ರಿಕೆಟ್ ಬಿಟ್ಟು ಮಾತನಾಡಿದ್ದರು. 

ಶೇ.  51 ರಷ್ಟು ಜನ  ಒಂದೆಲ್ಲಾ ಒಂದು ಕಾರಣದಲ್ಲಿ ಟೊಕಿಯೋ ಒಲಿಂಪಿಕ್ಸ್ ನೋಡಿದ್ದಾರೆ. ಇಲ್ಲವೆ ಅವರ ಕುಟುಂಬದಲ್ಲಿ ಯಾರಾದರೊಬ್ಬರು ಆಸಕ್ತಿಯಿಂದ ವೀಕ್ಷಣೆ ಮಾಡಿದ್ದಾರೆ. ಇನ್ನುಳಿದವರು ಈ ಬಗ್ಗೆ ಅಂಥ ಆಸಕ್ತಿದಾಯಕ ಮಾತುಗಳನ್ನು ಆಡಿಲ್ಲ. ಕಳೆದ ಒಲಿಂಪಿಕ್ಸ್ ಗೆ ಹೋಲಿಕೆ ಮಾಡಿಒದರೆ ದೇಶದ ಶೇ.  20 ರಷ್ಟು ಹೆಚ್ಚಿಗೆ ಜನ ಒಲಿಂಪಿಕ್ಸ್ ಬಗ್ಗೆ ಮಾತನಾಡಿದ್ದಾರೆ.

ಸಿಎಸ್‌ಆರ್ ಪಂಡ ಬಳಕೆ ಮಾಡಿಕೊಂಡು ಮತ್ತು ಇತರೆ ಮಾರ್ಗಗಳಿಂದ ದೇಶದ ಎಲ್ಲ ಕಡೆರ ಕ್ರೀಡಾ ಮೂಲ ಸೌಕರ್ಯ ಒದಗಿಸಿಕೊಡಬೇಕು ಎಂದು ಸಮೀಕ್ಷೆ ಉಲ್ಲೇಖ ಮಾಡಿದೆ.  ಹಾಕಿ ಅಕಾಡೆಮಿ, ಫುಟ್ ಬಾಲ್ ಅಕಾಡೆಮಿಗಳಿಗೆ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆಯೂ ಏರಿಕೆ ಕಂಡಿದ್ದು ಉತ್ತಮ ಬೆಳವಣಿಗೆ ಎಂದೇ ಹೇಳಲಾಗಿದೆ.  

click me!