ಕೊರೋನಾ ವೈರಸ್ ಎಫೆಕ್ಟ್: ಒಲಿಂಪಿಕ್ಸ್‌ ಕ್ರೀಡಾ ಜ್ಯೋತಿ ವೀಕ್ಷಣೆ ರದ್ದು

By Suvarna News  |  First Published Apr 8, 2020, 10:10 AM IST

ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಒಲಿಂಪಿಕ್ಸ್‌ ಕ್ರೀಡಾಜ್ಯೋತಿ ಪ್ರದರ್ಶನವನ್ನು ಜಪಾನ್ ಕೊನೆಗೊಳಿಸಿಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


"

ಟೋಕಿಯೋ(ಏ.08): ಮಾರಕ ಕೊರೋನಾ ವೈರಸ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇದೇ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಈಗಾಗಲೇ 1 ವರ್ಷ ಮುಂದೂಡಲ್ಪಟ್ಟಿದ್ದು, 2021ರ ಜುಲೈ 23ರಿಂದ ಒಲಿಂಪಿಕ್ಸ್‌ ಕೂಟ ನಡೆಸಲು ನಿರ್ಧರಿಸಲಾಗಿದೆ. 

Latest Videos

undefined

ಇದೀಗ ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಹೀಗಾಗಿ ಒಲಿಂಪಿಕ್ಸ್‌ ಕ್ರೀಡಾಜ್ಯೋತಿ ಪ್ರದರ್ಶನವನ್ನು ಕೊನೆಗೊಳಿಸಲಾಗಿದೆ. ಕಳೆದ ವಾರ ಈಶಾನ್ಯ ಫುಕುಶಿಮಾದಲ್ಲಿ ಒಲಿಂಪಿಕ್ಸ್‌ ಕ್ರೀಡಾಜ್ಯೋತಿ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.

ವಿಶೇಷ ವಿಮಾನದಲ್ಲಿ ಜಪಾನ್‌ ತಲುಪಿದ ಒಲಿಂಪಿಕ್‌ ಜ್ಯೋತಿ

ಸಾಂಪ್ರದಾಯಿಕವಾದ ಕ್ರೀಡಾ ಜ್ಯೋತಿಯನ್ನು ಗ್ರೀಸ್‌ನಲ್ಲಿ ಮಾರ್ಚ್‌ 20ರಂದು ಜಪಾನಿಗೆ ಹಸ್ತಾಂತರಿಸಲಾಯಿತು. ಆ ಬಳಿಕ ವಿಶೇಷ ವಿಮಾನದ ಮೂಲಕ ಕ್ರೀಡಾಜ್ಯೋತಿಯನ್ನು ಟೋಕಿಯೋ ವಾಯು ನೆಲೆಯಲ್ಲಿ ಬರಮಾಡಿಕೊಳ್ಳಲಾಗಿತ್ತು. ಇದೀಗ ಕೊರೋನಾ ಕಾಟದಿಂದಾಗಿ ಟೂರ್ನಿ ಮುಂದೂಡಿದ್ದರಿಂದ 2021ರ ಜುಲೈ 23ರಿಂದ ಆರಂಭವಾಗಿ ಆಗಸ್ಟ್ 08ರವರೆಗೆ ಜರುಗಲಿದೆ.

ಜಪಾನ್‌ಗೆ ಒಲಿಂಪಿಕ್ಸ್‌ ಜ್ಯೋತಿ ಹಸ್ತಾಂತರಿಸಿದ ಗ್ರೀಸ್‌

2020ರಲ್ಲೇ ಟೋಕಿಯೋ ಒಲಿಂಪಿಕ್ಸ್ ಆಯೋಜಿಸಲು ಜಪಾನ್ ಸರ್ವಸನ್ನದ್ಧವಾಗಿತ್ತು. ಇದೀಗ ಟೂರ್ನಿ ಮುಂದೂಡಲ್ಪಟ್ಟಿದ್ದರಿಂದ ಜಪಾನಿಗೆ ಸುಮಾರು 20 ಸಾವಿರ ಕೋಟಿ ರುಪಾಯಿ ಹೊರೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಕೊರೋನಾ ವೈರಸ್ ಕೇವಲ ಜನ-ಜೀವನ ಮಾತ್ರವಲ್ಲ ಎಲ್ಲಾ ಕ್ರೀಡಾಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ.

click me!