ಕೊರೋನಾ ವೈರಸ್‌ನಿಂದಾಗಿ 2020ರ ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಈಗಾಗಲೇ ಒಲಿಂಪಿಕ್ಸ್‌ಗೆ ಭಾಗವಹಿಸಲು ಅರ್ಹತೆ ಪಡೆದವರ ಪಾಡೇನು ಎನ್ನುವ ಗೊಂದಲಕ್ಕೆ ಐಒಸಿ ತೆರೆ ಎಳೆಯಲು ಮುಂದಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಪ್ಯಾರಿಸ್(ಮಾ.28): 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಕ್ರೀಡಾಪಟುಗಳು 2021ರಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಉಳಿಸಿಕೊಳ್ಳಲಿದ್ದಾರೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮೂಲಗಳು ತಿಳಿಸಿವೆ. ಈ ಮೂಲಕ ಮಹತ್ವದ ತೀರ್ಮಾನ ಹೊರಬಿದ್ದಂತೆ ಆಗಿದೆ.
#BreakingNews:ಕೊರೋನಾ ಅಬ್ಬರ, 2021ಕ್ಕೆ ಟೋಕಿಯೋ ಒಲಿಂಪಿಕ್ಸ್
undefined
ಗುರುವಾರ ಐಒಸಿ ಹಾಗೂ 32 ಅಂತಾರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಟೆಲಿಕಾನ್ಫರೆನ್ಸ್ ಮೂಲಕ ಅರ್ಹತಾ ಮಾನದಂಡದ ಬಗ್ಗೆ ಚರ್ಚೆ ನಡೆಸಿದವು. ಕ್ರೀಡಾಕೂಟದಲ್ಲಿ 11,000 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಶೇ.57ರಷ್ಟು ಮಂದಿ ಅರ್ಹತೆ ಪಡೆದಿದ್ದಾರೆ. ಇವರೆಲ್ಲ ಮತ್ತೊಮ್ಮೆ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.
ಕೊರೋನಾ ಸೋಂಕಿನ ಭೀತಿಯಿಂದಾಗಿ ಜಪಾನಿನ ಟೋಕಿಯೋದಲ್ಲಿ ಈ ವರ್ಷ ನಡೆಯಬೇಕಿದ್ದ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಟೋಕಿಯೋ ಒಲಿಂಪಿಕ್ಸ್ ಮಾತ್ರವಲ್ಲದೇ ಹಲವಾರು ಕ್ರೀಡಾ ಟೂರ್ನಿಗಳು ಸ್ಥಗಿತವಾಗಿವೆ. ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯೂ ನಡೆಯುವುದು ಅನುಮಾನ ಎನಿಸಿದೆ.
ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ: ಜಪಾನಿಗೆ 20 ಸಾವಿರ ಕೋಟಿ ರುಪಾಯಿ ಹೊರೆ..!
ಜಾಗತಿಕ ಪಿಡುಗಾಗಿ ಬೆಳೆದು ನಿಂತಿರುವ ಕೊರೋನಾ ವೈರಸ್‌ಗೆ ಇದುವರೆಗೂ 5,97 ಲಕ್ಷ ಜನ ತುತ್ತಾಗಿದ್ದಾರೆ. ಇದರಲ್ಲಿ 1.33 ಲಕ್ಷ ಜನ ಗುಣಮುಖರಾಗಿದ್ದು, 27 ಸಾವಿರಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಜಪಾನಿನಲ್ಲಿ 1499 ಮಂದಿ ಇದುವರೆಗೂ ಸೋಂಕಿಗೆ ತುತ್ತಾಗಿದ್ದು, 49 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.