ಕೊರೋನಾ ವೈರಸ್ ಭೀತಿಯಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಸದಾಗಿ ಸಿದ್ದವಾಗಿದೆ. ಯಾವಾಗ ಟೂರ್ನಿ ಆರಂಭವಾಗಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಟೋಕಿಯೋ(ಮಾ.31): ಕೊರೋನಾ ಸೋಂಕಿನ ಭೀತಿಯಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ 2021ರ ಜುಲೈ 23ರಂದು ಆರಂಭಗೊಳ್ಳಲಿದೆ ಎಂದು ಸೋಮವಾರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಖಚಿತಪಡಿಸಿದೆ.
#BreakingNews:ಕೊರೋನಾ ಅಬ್ಬರ, 2021ಕ್ಕೆ ಟೋಕಿಯೋ ಒಲಿಂಪಿಕ್ಸ್
The Olympic Games will be held from 23 July until 8 August 2021.
More information here: https://t.co/ST25uXKglE pic.twitter.com/sQo1TIcH5O
ಆ.8ರ ವರೆಗೂ ಕ್ರೀಡಾಕೂಟ ನಡೆಯಲಿದೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆ.24ರಿಂದ ಸೆ.5ರ ವರೆಗೂ ನಡೆಯಲಿದೆ ಎಂದು 2020ರ ಒಲಿಂಪಿಕ್ಸ್ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಯೋಶಿರೋ ಮೊರಿ ತಿಳಿಸಿದರು. ಸೋಮವಾರ ಸಂಜೆಯಷ್ಟೇ ಇನ್ನೂ ವೇಳಾಪಟ್ಟಿಸಿದ್ಧಗೊಂಡಿಲ್ಲ ಎಂದಿದ್ದ ಯೋಶಿರೋ, ಒಂದು ಗಂಟೆಯ ಬಳಿಕ ಕ್ರೀಡಕೂಟದ ವೇಳಾಪಟ್ಟಿ ಪ್ರಕಟಗೊಳಿಸಿದರು. ತುರ್ತು ಟೆಲಿಕಾನ್ಫರೆನ್ಸ್ ಮೂಲಕ ಐಒಸಿ ದಿನಾಂಕಗಳನ್ನು ನಿಗದಿಪಡಿಸಿತು ಎಂದು ಅವರು ತಿಳಿಸಿದರು.
2021ರ ಒಲಿಂಪಿಕ್ಸ್ ಬಗ್ಗೆ ಮಹತ್ವದ ತೀರ್ಮಾನ ಪ್ರಕಟಿಸಿದ IOC
Start the countdown. Again. ⏱️ | pic.twitter.com/w9L6JQ31JW
— Paralympic Games (@Paralympics)ಬಹುನಿರೀಕ್ಷಿತ 2020ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 24ರಿಂದ ಆಗಸ್ಟ್ 09ರವರೆಗೆ ಜಪಾನಿನ ಟೋಕಿಯೋ ನಗರದಲ್ಲಿ ನಡೆಯಬೇಕಿತ್ತು. ಟೂರ್ನಿಯನ್ನು ಸುಸಜ್ಜಿತವಾಗಿ ಸಂಘಟಿಸಲು ಜಪಾನ್ ಸರ್ವ ಸನ್ನದ್ಧವಾಗಿತ್ತು. ಆದರೆ ಕೊರೋನಾ ವೈರಸ್ ಭೀತಿಗೆ ಬೆದರಿದ ಹಲವು ರಾಷ್ಟ್ರಗಳು ಟೂರ್ನಿಯಿಂದ ಹಿಂದೆ ಸರಿಯಲು ತೀರ್ಮಾನಿಸಿದವು. ಹೀಗಾಗಿ ಅನಿವಾರ್ಯ ಕಾರಣಗಳಿಂದಾಗಿ ಜಪಾನ್ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಒಮ್ಮತದ ತೀರ್ಮಾನದಿಂದ ಟೂರ್ನಿಯನ್ನು ಒಂದು ವರ್ಷ ಮುಂದೂಡಲು ತೀರ್ಮಾನಿಸಿದವು.