ಟೋಕಿಯೋ 2020: ಫೈನಲ್‌ ಲೆಕ್ಕಾಚಾರದಲ್ಲಿ ಕರ್ನಾಟಕದ ಮಿರ್ಜಾ

By Kannadaprabha News  |  First Published Aug 2, 2021, 8:17 AM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ತೋರುತ್ತಿರುವ ಈಕ್ವೆಸ್ಟ್ರಿಯನ್‌ ಪಟು ಫೌಹಾದ್‌ ಮಿರ್ಜಾ

* ಈಕ್ವೆಸ್ಟ್ರಿಯನ್‌ ಪಟು ಫೌಹಾದ್‌ ಮಿರ್ಜಾ ಕರ್ನಾಟಕದ ಪ್ರತಿಭೆ

* ವೈಯಕ್ತಿಕ ಜಂಪಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಫೈನಲ್‌ಗೆ ಲಗ್ಗೆ


ಟೋಕಿಯೋ(ಆ.02): ಭಾರತದ ಈಕ್ವೆಸ್ಟ್ರಿಯನ್‌ ಪಟು ಫೌಹಾದ್‌ ಮಿರ್ಜಾ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಫೈನಲ್‌ ಪ್ರವೇಶಿಸುವ ಭರವಸೆ ಮೂಡಿಸಿದ್ದಾರೆ. ಭಾನುವಾರ ನಡೆದ ಕ್ರಾಸ್‌ಕಂಟ್ರಿ ಸುತ್ತಿನಲ್ಲಿ 11.20 ಪೆನಾಲ್ಟಿ ಅಂಕ ಗಳಿಸಿದ ಫೌಹಾದ್‌ 22ನೇ ಸ್ಥಾನ ಪಡೆದುಕೊಂಡಿದ್ದಾರೆ.

ಅಗ್ರ 25 ಸ್ಥಾನದಲ್ಲಿರುವವರಿಗೆ ಫೈನಲ್‌ಗೇರಲು ಅವಕಾಶವಿದ್ದು, ಇದೀಗ ಸೋಮವಾರ ನಡೆಯಲಿರುವ ವೈಯಕ್ತಿಕ ಜಂಪಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಫವಾದ್‌ ಮಿರ್ಜಾ ಫೈನಲ್‌ ಪ್ರವೇಶಿಸಲಿದ್ದಾರೆ.

The Cross-Country Course was completed by Fouaad Mirza in a time of 8:20 Minutes in - Cross Country event at

He is ranked 22nd overall, with 39.20 points.

📸SAI pic.twitter.com/YKPXCjWvk7

— Sportskeeda India (@Sportskeeda)

Tap to resize

Latest Videos

ಸಿ ಫಾರೆಸ್ಟ್‌ ಕ್ರಾಸ್‌ಕಂಟ್ರಿ ಸುತ್ತಿನಲ್ಲಿ ಮರದ ದಿಮ್ಮಿಗಳು, ಬೇಲಿ, ನೀರು ಹಾಗೂ ಹಳ್ಳಗಳ ಅಡೆತಡೆಗಳನ್ನು, ಅತ್ಯಂತ ಕಡಿಮೆ ತಪ್ಪುಗಳನ್ನು ಎಸಗುವ ಮೂಲಕ 7 ನಿಮಿಷ 45 ಸೆಕೆಂಡ್‌ನಲ್ಲಿ ಪೂರೈಸಬೇಕು. ಬೆಂಗಳೂರಿನ ಫೌಹಾದ್‌ ಮಿರ್ಜಾ 11.20 ಪೆನಾಲ್ಟಿ ಅಂಕಗಳೊಂದಿಗೆ, 8 ನಿಮಿಷ 13 ಸೆಕೆಂಡ್‌ನಲ್ಲಿ ಕಾಸ್‌ ಕಂಟ್ರಿ ಸುತ್ತು ಪೂರೈಸಿದರು. ಸದ್ಯ ಮಿರ್ಜಾ ಖಾತೆಯಲ್ಲಿ 39.20 ಪೆನಾಲ್ಟಿ ಪಾಯಿಂಟ್‌ಗಳಿವೆ.

ಚಕ್‌ ದೇ ಇಂಡಿಯಾ; ಬ್ರಿಟೀಷರನ್ನು ಬಗ್ಗುಬಡಿದು ಒಲಿಂಪಿಕ್ಸ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಹಾಕಿ ಇಂಡಿಯಾ

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೂ ಎರಡು ಪದಕಗಳನ್ನು ಜಯಿಸಿದ್ದು, ಮತ್ತೊಂದು ಪದಕವನ್ನು ಖಚಿತಪಡಿಸಿಕೊಂಡಿದೆ. ಸೋಮವಾರ ನಡೆಯಲಿರುವ ಕ್ರೀಡಾಕೂಟದಲ್ಲಿ ಮಿರ್ಜಾ ಹಾಗೂ ಡಿಸ್ಕಸ್‌ ಥ್ರೋ ಅಥ್ಲೀಟ್‌ ಕಮಲ್‌ಜಿತ್ ಕೌರ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಡಲಾಗಿದೆ. 

 

click me!